spot_img
spot_img

ಗುರುಮಾತೆ ರೇಣುಕಾ ಉಪ್ಪಾರ ಬೀಳ್ಕೊಡುಗೆ

Must Read

spot_img

ಮೂಡಲಗಿ – ಸಮೀಪದ ಗುರ್ಲಾಪೂರ ಸರಕಾರಿ ಶಾಸಕರ ಮಾದರಿ ಶಾಲೆಯಲ್ಲಿ ಶಾಲಾ ಗುರುಮಾತೆ ಶ್ರೀಮತಿ ರೇಣುಕಾ ಯಲ್ಲಪ್ಪ ಉಪ್ಪಾರ ಇವರ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಸುಮಾರು 26 ವರ್ಷ 4 ತಿಂಗಳು ಸರ್ಕಾರಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರ ವೃತ್ತಿಯಲ್ಲಿ ಹಲವಾರು ಶಿಕ್ಷಕರು, ಎಂಜಿನಿಯರ್ಸ್, ಪೊಲೀಸರು , ಸೈನಿಕರನ್ನು ಸಿರ್ಮಿಸಿ ಅವರ ಬಾಳು ಬೆಳಗಿದ್ದು ನಮ್ಮ ಗುರ್ಲಾಪೂರ್ ಗ್ರಾಮದ ಹೆಮ್ಮೆಯ ಗುರುಮಾತೆ ಎನಿಸಿದ್ದಾರೆ.

ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷರಾದ ಎಲ್ ಪಿ ನೇಮಗೌಡರ ಅಧ್ಯಕ್ಷೀಯ ಭಾಷಣ ಮಾಡಿ, ಶಿಕ್ಷಕರಾದ ತಾವು ಒಳ್ಳೆ ಸೇವೆಯಿಂದ ಸಮಾಜ ಬದಲಾವಣೆ ಮಾಡುವ ಕೆಲಸ ಮಾಡಬೇಕು ಎಂದು ನುಡಿದರು.

ಇನ್ನು ಊರಿನ ಹಿರಿಯರು ನಿವೃತ್ತ ಶಿಕ್ಷಕರಾದ ಯಲ್ಲಪ್ಪ ಕುಲಿಗೋಡ ಸರ್ ಮಾತನಾಡಿ, ಹೆಮ್ಮೆಯ ಶಿಕ್ಷಕಿಯಾದ ಶ್ರೀಮತಿ ಉಪ್ಪಾರ ಮೇಡಂ ಇವರ ಸೇವೆ ಅಮೂಲ್ಯವಾದದ್ದು ಎಂದರು.

ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಕೆ ಡಿ ಕೇಂಗಾರಿ ಸರ್, ಎಂ ಮಂಜುನಾಥ್ ಸರ್, ಮಾತನಾಡಿ ಗುರುಮಾತೆ ಇವರನ್ನು ಬೀಳ್ಕೊಂಡು ನನ್ನ ಮೇಲೆ ಭಾರ ಹೆಚ್ಚಾಯಿತು. ಇಂತಹ ಸಂದರ್ಭದಲ್ಲಿ ನಾವು ಅವರ ನಿವೃತ್ತಿ ಜೀವನ ಆರಾಮದಾಯಕ ಆಗಿರಲಿ ಎಂದು ಹಾರೈಸುವೆ ಎಂದರು. ಈ ಒಂದು ಸುಂದರ ಕಾರ್ಯಕ್ರಮಕ್ಕೆ ಹಲವಾರು ಹಳೆ ವಿದ್ಯಾರ್ಥಿಗಳು, ಮಕ್ಕಳು , ಊರಿನ ಜನ, ಶಿಕ್ಷಕರು, ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದು ಯಶಸ್ವಿಗೊಳಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಗುರುಮಾತೆ, ನಿಮ್ಮನ್ನೆಲ್ಲ ಆಗಲಿ ಹೋಗಲು ದುಃಖ ಆಗುತ್ತಿದೆ, ನನ್ನ ಈ ಸನ್ಮಾನ ಜೀವನಕ್ಕೆ ಅಭಿಮಾನ ಎಂದು ನುಡಿದರು. 8ನೆ ತರಗತಿ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿ , ಶ್ರೀಮತಿ ಡಿ.ವಿ. ನಡೋಣಿ ಇವರು ಸ್ವಾಗತಿಸಿದರು . ಎಸ್ ಬೀ ದರೂರ್  ಸರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀಮತಿ ಎಸ್ ಜಿ ರಾಮದುರ್ಗ ಗುರುಮಾತೆ ಕಿರು ಪರಿಚಯ ಮಾಡಿಕೊಡುವ ಮೂಲಕ ತಮ್ಮ ಅನುಭವ ಹೇಳಿದರು. ಹಲವರು ಅನಿಸಿಕೆ ಹೇಳಿದರು. ಬೀ. ವಾಯ್ ಮೂಮಿನ್ ಸರ್ ಕಾರ್ಯಕ್ರಮ ನಿರೂಪಣೆ ಮಾಡಿದರು ಹಾಗೂ ಕೊನೆಯದಾಗಿ ಶ್ರೀಮತಿ ಎ. ಡಿ ಪಡಗಾನೂರ ವಂದಿಸಿದರು.

- Advertisement -
- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!