ಚಾಮರಾಜನಗರ – ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿಶ್ವವಿದ್ಯಾಲಯದ ಮುಖ್ಯಾಲಯ ಅಬು ಪರ್ವತದ ರಾಜಸ್ಥಾನಕ್ಕೆ ನಗರದ 25 ಜನ ಕರ್ನಾಟಕ ಸೇವಾದಾರಿ ತಂಡಕ್ಕೆ ಪ್ರಕಾಶ ಭವನದಲ್ಲಿ ಇತ್ತೀಚೆಗೆ ಬೀಳ್ಕೊಡುಗೆ ನೀಡಲಾಯಿತು
ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜಿಯವರ ನೇತೃತ್ವದಲ್ಲಿ ತೆರಳಿರುವ ತಂಡವು 8 ರಿಂದ 11 ರವರೆಗೆ ಕಾಶಿ ವಾರಾಣಸಿ ಅಯೋಧ್ಯೆ ದೆಹಲಿ ಯಾತ್ರೆ ಮಾಡಲಿದ್ದಾರೆ. 12 ರಿಂದ 17ರವರೆಗೆ ಅಬು ಪರ್ವತದಲ್ಲಿ ನಡೆಯಲಿರುವ ಪ್ರಭು ಮಿಲನ್ ಹಾಗೂ ಅಂತಾರಾಷ್ಟ್ರೀಯ ರಾಜಯೋಗ ಶಿಬಿರದಲ್ಲಿ ಸೇವಾಧಾರಿಗಳಾಗಿ ಭಾಗವಹಿಸಲಿದ್ದಾರೆ. ಕರ್ನಾಟಕದಿಂದ ಸುಮಾರು 30 ಸಾವಿರಕ್ಕೂ ಹೆಚ್ಚು ರಾಜಯೋಗ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ
ಇವರ ಯಾತ್ರೆಯು ಸುಖಕರವಾಗಿರಲಿ ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ ಎನ್ ಋಗ್ವೇದಿಯವರು ಶುಭ ಕೋರಿದ್ದಾರೆ