ಬೆಳಗಾವಿ: ಬೆಳಗಾವಿ ತಹಶಿಲ್ದಾರ ಕಚೇರಿಯಲ್ಲಿ ಗ್ರೇಡ 2 ತಹಶಿಲ್ದಾರರಾಗಿ ಸೇವೆಸಲ್ಲಿಸುತ್ತಿದ್ದ ವ್ಹಿ ಮೋಹನ ರವರು ಇಂದು ಸೇವೆಯಿಂದ ನಿವೃತ್ತರಾದ ನಿಮಿತ್ತ ಇಲಾಖೆಯಿಂದ ಬೀಳ್ಕೊಡುಗೆ ಸಮಾರಂಭದಲ್ಲಿ ಶಿಕ್ಷಕರ ಗೆಳೆಯರ ಬಳಗದ ವತಿಯಿಂದ ಸನ್ಮಾನ ಮಾಡಿ ಅವರ ಉತ್ತಮ ಕಾರ್ಯ ಗಳಿಗೆ ಅಭಿನಂದನೆಗಳನ್ನು ಹೇಳಿ ಅವರಿಗೆ ಶುಭ ಕೋರಿದರು.
ಶಿಕ್ಷಕರ ಬಳಗದ ಗೆಳೆಯರಾದ ರುಕ್ಮಿಣಿ ನಗರದ ಕನ್ನಡ ಶಾಲೆಯ ಶಿಕ್ಷಕರಾದ ರಾಜೇಂದ್ರ ಗೊಶ್ಯಾನಟ್ಟಿಯವರು, ವಿಜಯ ನಗರ ಮರಾಠಿ ಶಾಲೆಯ ಶಿಕ್ಷಕರಾದ ಆರ್ ಅಯ್ ಮೆಟ್ಯಾಳಮಠ ರವರು, ಬೆಳಗಾವಿ ನಗರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವ ಅಧ್ಯಕ್ಷರಾದ ಕುಮಾರಸ್ವಾಮಿ ಚರಂತಿಮಠ, ನಿವೃತ್ತಿ ಕೆ ಜಿ ಆಯ್ ಡಿ ಅಧಿಕಾರಿ ಕೆ ಎ ಕ್ಯಾತನವರ,ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಗಳಾದ ಬಸವರಾಜ ಸುಣಗಾರ ರವರು ಜಂಟಿಯಾಗಿ ಸನ್ಮಾನಿಸಿ ಅಭಿನಂದಿಸಿದರು.