ಬೀದರ ನಲ್ಲಿ ಹೈಟೆಕ್ ರೈತರಿಂದ ಉರುಳು ಸೇವೆ
ಬೀದರ – ರೈತರು ಬೆವರು ಸುರಿಸಿ ಹೊಲದಲ್ಲಿ ಬೆಳೆ ಬೆಳೆಸುತ್ತಾರೆ. ಕಬ್ಬು ಹಚ್ಚಿ ಹಗಲೂ ರಾತ್ರಿ ಅದರ ಕಾಳಜಿ ಮಾಡಿ ಕಾರ್ಖಾನೆಗೆ ಕಳಿಸಬೇಕಾದರೆ ಸರಿಯಾದ ದರ ಸಿಗದೇ ಪ್ರತಿಭಟನೆ ಮಾಡಬೇಕಾಗುತ್ತದೆ. ಆದರೆ ಇಲ್ಲಿನ ಬೀದರ ರೈತರು ಕೆಂಪು ಬೇಡ್ ಮೇಲೆ ಉರುಳು ಸೇವೆ ಮಾಡಿ ತಮ್ಮ ಕಬ್ಬಿಗೆ ಸರಿಯಾದ ದರ ಕೇಳುತ್ತಿದ್ದಾರೆ.
ಬೀದರ್‌ನಲ್ಲಿ ಕಬ್ಬು ದರ ನಿಗದಿಗಾಗಿ ರೈತರ ನಿರಂತರ ಹೋರಾಟ ನಡೆಸಿದ್ದಾರೆ. ಪ್ರತಿ ಟನ್ ಕಬ್ಬಿಗೆ 3,100 ರೂ.ಗೆ ಬಿಗಿಪಟ್ಟು ಹಿಡಿದು ಹೋರಾಟ ನಡೆಸುತ್ತಿರುವ ರೈತರು. ಅಂಬೇಡ್ಕರ್ ವೃತ್ತದಿಂದ ಉಸ್ತುವಾರಿ ಸಚಿವರ ಕಚೇರಿವರೆಗೆ ಕೆಂಪು ಹಾಸಿನ ಮೇಲೆ ರೈತನಿಂದ ಉರುಳು ಸೇವೆ ನಡೆಯಿತು.
ಬೀದರ್ ಜಿಲ್ಲಾ ಸಂಯುಕ್ತ ಕಿಸಾನ್ ಮೋರ್ಚಾದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ತೆಂಗಿನಕಾಯಿ ಒಡೆದು ಉರುಳು ಸೇವೆ ಆರಂಭಿಸಲಾಯಿತು. ರೈತ ಕರಿಬಸಪ್ಪ ಹುಡುಗಿ ಗ್ರಾಮದ ರೈತನಿಂದ ಉರುಳುಸೇವೆ.
ಉರುಳು ಸೇವೆ ಮಾಡಿ, ಕಬ್ಬಿಗೆ 3100 ರೂ ನೀಡುವಂತೆ ಒತ್ತಾಯ ಮಾಡಿದರು. ರೈತರ ಹೋರಾಟಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಗಡಿ ಜಿಲ್ಲೆ ಬೀದರ ನಲ್ಲಿ ಸತತವಾಗಿ ಮೂರು ದಿನದಿಂದ ರೈತರು ಪ್ರತಿಭಟನೆ ಮಾಡಿದರು ಪ್ರತಿ ಟನ್ ಕಬ್ಬಿಗೆ 3,200 ದರ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಬೀದರ್ ಜಿಲ್ಲಾ ಸಂಯುಕ್ತ ಕಿಸಾನ್ ಮೋರ್ಚಾ (ರೈತ ಸಂಘಗಳ ಒಕ್ಕೂಟ) ದಿಂದಾ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕಚೇರಿ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಕಬ್ಬು ಬೆಳೆಗಾರರ ನಡುವೆ ದರ ನಿಗದಿಗಾಗಿ ರೈತರು ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ನಡೆದ ಮೂರು ಸಭೆ ವಿಫಲಗೊಂಡಿತ್ತು. ಇನ್ನು ಹುಮ್ನಾಬಾದ್ ನಲ್ಲಿ ಪ್ರತಿಭಟನೆ ವೇಳೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾಅವರು ಪ್ರತಿ ಕಬ್ಬಿಗೆ ₹2,900 ಕೊಡಿಸಲಾಗುವುದು ಎಂದು ರೈತರಿಗೆ ಮಾತುಕೊಟ್ಟಿದ್ದರು, ಆದರೆ ಮೊನ್ನೆ ನಡೆದ ರೈತರು ಹಾಗೂ ಸಕ್ಕರೆ ಕಾರ್ಖಾನೆಯ ಮಾಲೀಕರ ನಡುವೆ ನಡೆದ ಸಭೆಯಲ್ಲಿ 2,900 ರೂಪಾಯಿ ಹಣ ಕೊಡಲು ಆಗೋದಿಲ್ಲಾ ಎಂದು ಸಕ್ಕರೆ ಕಾರ್ಖಾನೆ ಮಾಲೀಕರು ಹೇಳಿದ್ದರು ಆದರೆ ರೈತರು ತಮ್ಮ ಬೇಡಿಕೆಗೆ ಪಟ್ಟು ಹಿಡಿದು, ಸಭೆಯಿಂದ ಹೊರನಡೆದರು. ಆನಂತರ ಸತ್ಯಾಗ್ರಹ ಆರಂಭಿಸಿ ಈಗ ಮೂರನೇ ದಿನಕ್ಕೆ ಕಾಲಿಟ್ಟಿದೆ. ವಿವಿಧ ಭಾಗಗಳ ರೈತರು ಭಾಗವಹಿಸಿ ಬೆಂಬಲ ಸೂಚಿಸಿದ್ದಾರೆ. ಇನ್ನು ಇಂದು ರೈತ ಮುಖಂಡ ಮಲ್ಲಿಕಾರ್ಜುನ ಸ್ವಾಮೀಯವರು ನಗರದ ಅಂಬೆಡ್ಕರ್ ವೃತ್ತದಿಂದಾ ಶಿವಾಜಿ ವೃತ್ತದ ವರೆಗೆ ಉರುಳುವ ಮೂಲಕ ಜಿಲ್ಲಾಢಳಿತ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ವರದಿ : ನಂದಕುಮಾರ ಕರಂಜೆ, ಬೀದರ

