spot_img
spot_img

ರಾಷ್ಟ್ರೀಯ ಹೆದ್ದಾರಿ ೬೫ ರಲ್ಲಿ ಹಾದು ಹೋಗುವ ರೈತರಿಗೆ ನರಕ ಯಾತನೆ

Must Read

- Advertisement -

ಬೀದರ – ಗಡಿ ಜಿಲ್ಲೆ ಬೀದರ್ ತಾಲ್ಲೂಕಿನ ಮನ್ನಾ ಏ ಖೇಳಿ ಗ್ರಾಮದ ರೈತರಿಗೆ ನಿಜವಾದ ನರಕ ಯಾತನೆ ತೋರಿಸುತಿರುವ ರಾಷ್ಟ್ರೀಯ ಹೆದ್ದಾರಿ ನಂ. ೬೫.

ಹೆದ್ದಾರಿ ಪ್ರಾಧಿಕಾರ ಮತ್ತು L&T ಸಂಸ್ಥೆಯ ಅಧಿಕಾರಿ ಗಳು ಅವೈಜ್ಞಾನಿಕ ವಾಗಿ ನಿರ್ಮಿಸಿದ ರಾಷ್ಟ್ರೀಯ ಹೆದ್ದಾರಿ ೬೫ ರಲ್ಲಿ ರೈತರು ಈ ಕಡೆಯಿಂದ ಆ ಕಡೆಗೆ ಹೋಗಬೇಕಾದರೆ ಹರಸಾಹಸ ಪಡಬೇಕಾಗಿದೆ. ರೈತರಿಗೆ ಹಾದು ಹೋಗಲು ರಸ್ತೆ ಬಿಡದೆ ಹೆದ್ದಾರಿ ನಿರ್ಮಾಣ ಮಾಡಿದ್ದು ರೈತರು ನರಕಯಾತನೆ ಪಡುವಂತಾಗಿದೆ.

- Advertisement -

ಬೀದರ ಜಿಲ್ಲೆಯ ಕೇಂದ್ರ ಸಚಿವರ ಪ್ರಕಾರ ನರೇಂದ್ರ ಮೋದಿ ಸರ್ಕಾರ ಈ ರೈತರ ಪರವಾಗಿ ಇದೆ ಎಂದು ಹೇಳುತ್ತಾರೆ ‌.ಆದರೆ ಬೀದರ ರೈತರ ನರಕ ಯಾತನೆ ಕೇಂದ್ರ ಸಚಿವರ ಕಣ್ಣಿಗೆ ಕಾಣಿಸುತ್ತಿಲ್ಲ ಎಂದು ಹೇಳಬಹುದು.

ಮನ್ನಾ ಏ ಖೇಳಿ ಗ್ರಾಮದ ರೈತರ ಕಷ್ಟ ನೋಡಿ, ರೈತರು ತನ್ನ ಹೊಲಕ್ಕೆ ಹೋಗಬೇಕು ಅಂದರೆ ಎಷ್ಟು ಕಷ್ಟ ಆಗುವುದ ಎಂಬುದನ್ನು ಕೇಂದ್ರ ಸಚಿವರು ನೋಡಬೇಕು ರೈತರು ಹಾದು ಹೋಗುವ ಮುಂಬೈ- ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿ ೬೫ ನ್ನು ಮೇಲ್ದರ್ಜೆಗೆ ಏರಿಸಿ ಚತುಷ್ಪಥ ರಸ್ತೆ ನಿರ್ಮಾಣ ಮಾಡವಾಗ ಮನ್ನಾ ಏ ಖೇಳಿ ಗ್ರಾಮದ ಮಧ್ಯದಿಂದ ಹೋಗುವ ರಾಷ್ಟ್ರೀಯ ಹೆದ್ದಾರಿಯು ಗ್ರಾಮದ ಹೊರವಲಯದ ರೈತರ ಜಮೀನು ಗಳನ್ನು ವಶಕ್ಕೆ ಪಡೆದು ಕೊಂಡು ಬೈಪಾಸ್ ರಸ್ತೆ ನಿರ್ಮಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರೈತರಿಗೆ ತಮ್ಮ ಜಮೀನು ಗಳಿಗೆ ಸರ್ವಿಸ್ ರಸ್ತೆ ನೀಡಿಲ್ಲ ಅಲ್ಲದೆ ತಮ್ಮ ಗ್ರಾಮದಿಂದ ತಮ್ಮ ತಮ್ಮ ಜಮೀನುಗಳಿಗೆ ಹೋಗಲು ಇರುವ ಮುಖ್ಯ ರಸ್ತೆಯಾದ ಕರುಮಟ್ಟಿ ಹಣಾದಿ ಎಂದು ಹೆಸರುವಾಸಿಯಾದ ಮನ್ನಾ ಏ ಖೇಳಿ ನಿರ್ಮಾಣದ ಹಳೆಯ ರಸ್ತೆಗೆ ಅಡ್ಡವಾಗಿ ಅವೈಜ್ಞಾನಿಕವಾಗಿ ನಿರ್ಮಿಸಲಾದ ಸೇತುವೆ ಯಿಂದ ಗ್ರಾಮದ ರೈತರು ತಮ್ಮ ಜಾನುವಾರುಗಳನ್ನು ತೆಗೆದು ಕೊಂಡು ಹೋಗಲು ಆಗದೆ ತಮ್ಮ ಜೀವವನ್ನು ಒತ್ತೆ ಇಟ್ಟು ಹೆದ್ದಾರಿ ಮಧ್ಯದಿಂದ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

- Advertisement -

ಕಳೆದ ಮೂರ್ನಾಲ್ಕು ವರ್ಷಗಳಿಂದ ರಸ್ತೆ ದಾಟುವ ಸಂದರ್ಭದಲ್ಲಿ ತಮ್ಮ ಜಾನುವಾರು ಗಳನ್ನು ಕಳೆದು ಕೊಂಡ ರೈತರು ಗೋಳಾಡುತ್ತಿದ್ದರೂ ಇಲ್ಲಿಯ ವರೆಗೆ ಯಾರು ತಿರುಗಿ ಕೂಡ ನೋಡುತಿಲ್ಲ ಎಂಬುದು ರೈತರ ಅಳಲು.

ನಮ್ಮ ಹೊಲಗಳಿಗೆ ಹೋಗುವ ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಹೆದ್ದಾರಿಯನ್ನು ದಾಟಿ ಹೋಗಲು ನಿರ್ಮಿಸಿದ ಕೆಳ ಸೇತುವೆ ಯಿಂದ ನಮಗೆ ಹೋಗುವದಕ್ಕೆ ಆಗುತ್ತಿಲ್ಲ. ನಾವು ಹೇಗೊ ನಡೆದು ಕೊಂಡು ಹೆದ್ದಾರಿ ಯನ್ನು ದಾಟಿ ಹೋಗಬಹುದು ನಮ್ಮ ಜಾನುವಾರುಗಳನ್ನು ತೆಗದು ಕೊಂಡು ಹೋಗುವುದಕ್ಕೆ ಆಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರ್ನಾಲ್ಕು ವರ್ಷಗಳಿಂದ ನಮ್ಮ ಜೀವವನ್ನು ಕೈಯಲ್ಲಿ ಹಿಡಿದು ಕೊಂಡು ಜಾನುವಾರುಗಳನ್ನು ರಸ್ತೆ ದಾಟಿಸುತಿದ್ದೇವೆ ರಸ್ತೆ ದಾಟುವಾಗ ರಭಸವಾಗಿ ಬರುವ ವಾಹನಗಳಿಗೆ ಸಿಲುಕಿ ಇಲ್ಲಿಯವರೆಗೆ ಬಲಿ ನೀಡಿ ಸಾಕಾಗಿದೆ ಬೇರೆ ಕಡೆಯಿಂದ ಹೋಗಬೇಕೆಂದರೆ ಇಲ್ಲಿಯವರೆಗೆ L&Tಅವರು ಸರ್ವಿಸ್ ರಸ್ತೆ ಮಾಡಿಲ್ಲ ರಸ್ತೆ ದಾಟುವಾಗ ಮನುಷರೇ ಸತ್ತರೂ ಇಲ್ಲಿಯ ವರೆಗೆ ಯಾವವಾಹನವು ಸಿಕ್ಕಿಲ್ಲ ಜಾನುವಾರುಗಳಿಗೆ ಹೊಡೆದ ವಾಹನಗಳನ್ನು ಯಾರು ಹಿಡಿಯುತಾರೆ ಯಾರು ನಮಗೆ ನ್ಯಾಯ ನೀಡುವರು ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡರು.

ಸದಾ ರೈತರ ಉದ್ದಾರಕ್ಕಾಗಿ ನಾವು ಇದ್ದೇವೆ ಎಂದು ಮಾತು ಮಾತಿಗೆ ಹೇಳುವ ಜಿಲ್ಲಾಡಳಿತ ಕೇಂದ್ರ ಸಚಿವರಾದ ಭಗವಂತ ಖೂಬಾ,ಮತ್ತು ಮಾತು ಮಾತಿಗೆ ಗೋ ನನ್ನ ಮಾತೆ ಎಂದು ಮಾದ್ಯಮದ ಮುಂದ ಹೇಳುತಾ ತಿರುಗುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರೆ, ಈಗಲಾದರೂ ಇತ್ತ ಗಮನ ಹರಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು L&T ಸಂಸ್ಥೆಯ ಅಧಿಕಾರಿಗಳ ಅವೈಜ್ಞಾನಿಕ ನಿರ್ಧಾರದಿಂದ ಜಿಲ್ಲೆಯಿಂದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೬೫ ಹತ್ತಿರ ಬರುವ ಗ್ರಾಮಗಳ‌ತ್ತ ಗಮನಹರಿಸಿ ಹೆದ್ದಾರಿಯಿಂದ ಆಗುವ ಸಮಸ್ಯೆ ಗಳಿಂದ ಸ್ಪಂದಿಸಿ ಜಾನುವಾರುಗಳ ಮತ್ತು ರೈತರ ಜೀವದ ಜೊತೆಗೆ ಚಲ್ಲಾಟ ಆಡುವ L&T ಸಂಸ್ಥೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಮುಂದಾಗಿ….ಎನ್ನುವುದೇ ಸಾಮಾಜಿಕ ಕಳಕಳಿಯಾಗಿದೆ ರೈತರ ಮತ್ತು ಜಾನುವಾರುಗಳ ಪ್ರಾಣರಕ್ಷಣೆಗೆ ಸರ್ಕಾರ ಮುಂದಾಗುವದೋ ಅಥವಾ ತಮ್ಮ ಸ್ವಾರ್ಥಕ್ಕಾಗಿ ರೈತರ ಮತ್ತು ಅವರ ಜಾನುವಾರುಗಳ ಬಲಿನೀಡುತಾರೋ ಎಂಬುದನ್ನು ಕಾದು ನೋಡಬೇಕು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group