spot_img
spot_img

ತೊಗರಿ ಬೆಳೆ ನಷ್ಟ ಪರಿಹಾರಕ್ಕೆ ರೈತರಿಂದ ಮನವಿ

Must Read

spot_img
- Advertisement -

ಸಿಂದಗಿ : ಸಿಂದಗಿ ತಾಲೂಕು ಹಾಗೂ ಆಲಮೇಲ ತಾಲೂಕಿನ ವ್ಯಾಪ್ತಿಯ ರೈತರು ಬೆಳೆದ ತೊಗರಿ ಬೆಳೆ  ನಷ್ಟದ ಕುರಿತು ಕೂಡಲೆ ಸರ್ವೇ ನಡೆಸಿ ಸರಕಾರಕ್ಕೆ ವಾಸ್ತವ ವರದಿ ಸಲ್ಲಿಸಿ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾದ ಪದಾಧಿಕಾರಿಗಳು ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿ ಗಳಿಗೆ ತಹಶೀಲ್ದಾರರ ಮುಖಾಂತರ ಮನವಿ ಸಲ್ಲಿಸಿದರು.

ಪಟ್ಟಣದ ಡಾ. ಅಂಬೇಡ್ಕರ ವೃತ್ತದಲ್ಲಿ ಜಮಾಯಿಸಿದ ರೈತರು ಎತ್ತಿನ ಬಂಡಿಯ ಮೂಲಕ ಮೆರವಣಿಗೆ ನಡೆಸಿ ಟಿಪ್ಪು ಸುಲ್ತಾನ ವೃತ್ತದ ಮಾರ್ಗವಾಗಿ ತೆರಳಿ ಡಾ ತೊಂಟದ ಸಿದ್ದಲಿಂಗ ಮಹಾಸ್ವಾಮಿಗಳ ರಸ್ತೆಯ ಮೂಲಕ ಸ್ವಾಮಿ ವಿವೇಕಾನಂದ ವೃತ್ತದಿಂದ ತಹಶೀಲ್ದಾರ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರು ಹಾಗೂ ರೈತ ಮೋರ್ಚಾ ರಾಜ್ಯಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ವರ್ಷ ೨೦೨೪-೨೫ನೇ ಸಾಲಿನಲ್ಲಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಿಂದ ವಿತರಣೆ ಮಾಡಿದ ತೊಗರಿ ಬೀಜಗಳನ್ನು ಬಿತ್ತನೆ ಮಾಡಿದ ಬೆಳೆ ಎತ್ತರಕ್ಕೆ ಬೆಳೆದ ತೂಗು ಬೆಳಗಳು ಹೂವು ಉದುರಿ ಕಾಯಿ ಕಟ್ಟಿದ ಶೇ.೯೦ ರಷ್ಟು ಬೆಳೆ ನಷ್ಟವಾಗಿದೆ ಇದರಿಂದ ರೈತರು ಆರ್ಥಿಕವಾಗಿ ಸಂಕಷಕ್ಕೆ ಸಿಲುಕಿದ್ದಾರೆ. ಬೆಳೆ ಹಾನಿಯಾದ ಬಗ್ಗೆ ಕಳೆದ ಒಂದು ವಾರದಿಂದ ಪತ್ರಿಕೆಗಳಲ್ಲಿ ವರದಿಗಳು ಬಿತ್ತರವಾಗಿದ್ದರು, ರೈತರು ಮನವಿ ಮಾಡಿದರು ಸರ್ವೇ ಕಾರ್ಯ ನಡೆಸದೇ ಅಧಿಕಾರಿಗಳು ಹಾರಿಕೆ ಉತ್ತರ ಕೊಟ್ಟು ಜಾರಿಗೊಳ್ಳುತ್ತಿದ್ದಾರೆ. ಸಂಕಷÀ್ಟಕ್ಕೆ, ಈಡಾದ ರೈತರ ಹೊಲಗಳಿಗೆ ಜಿಲ್ಲಾಧಿಕಾರಿಗಳು ಸೇರಿದಂತೆ ಇಲಾಖೆಯ ಯಾವ ಅಧಿಕಾರಿಗಳು ಭೇಟಿ ನೀಡಲಿಲ್ಲ ವಿಮೆ ತುಂಬಿದ ರೈತರು ಬೆಳೆ ನಷÀ್ಟದ ಮೌಲ್ಯ ಮಾಪನ ಮಾಡುತ್ತಿಲ್ಲ. ಹಿಗಾಗಿ ನಾವುಗಳು ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ ಕಾರಣ ಡಿಸೆಂಬರ ೧೧ರ ವಳಗೆ ಅಧಿಕಾರಿಗಳು ಸಂಪೂರ್ಣ ಸರ್ವೇ ಕಾರ್ಯ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಿ ಆ ವರದಿಯ ಪ್ರತಿಯನ್ನು ರೈತರಿಗೆ ನೀಡತಕ್ಕದ್ದು ಅಲ್ಲಿಯವರೆಗೆ ಶಾಂತಿಯುತ ಧರಣಿ ಸತ್ಯಾಗ್ರಹ ಹೋರಾಟ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯ ಆವರಣದಲ್ಲಿ ಮುಂದುವರೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

- Advertisement -

ಮಾಜಿ ಶಾಸಕ ರಮೇಶ ಭುಸನೂರ, ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಕಾರ್ಯದರ್ಶಿ ಗುರು ತಳವಾರ ಸೇರಿದಂತೆ ಅನೇಕರು ಮಾತನಾಡಿದರು.

ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ, ಡಿ.ಜಿ.ಬಿರಾದಾರ ವಕೀಲರು, ಪೀರು, ವಿ. ಕೇರೂರ, ಸಿದದು ಬುಳ್ಳಾ, ಈರಣ್ಣ ರಾವೂರ, ಸಿದ್ರಾಮ ಆನಗೊಂಡ, ರಾಮನಗೌಡ, ಶಿವರಾಜ ಬಿರಾದಾರ, ನೀಲಮ್ಮ ಯಡ್ರಾಮಿ, ವಿರುಪಾಕ್ಷಿ ಗಂಗನಳ್ಳಿ, ಶ್ರೀಶೈಲ ಬಿರಾದಾರ, ಸಿದ್ದಲಿಂಗ ಹಿರೇಮಠ ಸೇರಿದಂತೆ ಕರ್ನಾಟಕ ರಾಜ್ಯ ರೈತ ಮೋರ್ಚಾ (ಬಿಜೆ ಪಿ ) ಹಾಗೂ ರೈತ ಸಂಘಟನೆಗಳು ಸಿಂದಗಿ ಹಾಗೂ ಆಲಮೇಲ ತಾಲೂಕಿನ ಸಂತ್ರಸ್ತ ರೈತರು ಇದ್ದರು.


 

- Advertisement -
- Advertisement -

Latest News

ಸಾಲದ ಸುಳಿಗೆ ಸಿಲುಕಿ ರೈತ ಆತ್ಮಹತ್ಯೆ

ಸಿಂದಗಿ: ಸಾಲದ ಸುಳಿಗೆ ಸಿಲುಕಿದ ರೈತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮನ್ನಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದುಂಡಪ್ಪ ಸಿದ್ರಾಮಪ್ಪ ಮನಗೂಳಿ(೩೫) ಮೃತ ದುರ್ದೈವಿ ರೈತನಾಗಿದ್ದಾನೆ....
- Advertisement -

More Articles Like This

- Advertisement -
close
error: Content is protected !!
Join WhatsApp Group