spot_img
spot_img

ರೈತನ ಕಷ್ಟ ತೀರೊಲ್ಲ ; ಶಂಕು ಹುಳುವಿನ ಕಾಟದಿಂದ ಬೇಗ ಮುಕ್ತಿ ಸಿಗುವುದೇ?

Must Read

ಬೀದರ – ದೇಶದ ಬೆನ್ನೆಲುಬು, ಅನ್ನದಾತ ಎನಿಸಿಕೊಂಡಿರುವ ರೈತನಿಗೆ ತಾಪತ್ರಯವಂತೂ ತಪ್ಪಿದ್ದಲ್ಲ ಎಂಬ ಮಾತು ಅನಾದಿ ಕಾಲದಿಂದಲೂ ನಿಜವಾಗುತ್ತಲೇ ಬಂದಿದೆ. ಒಂದು ಕಡೆ ಪ್ರಕೃತಿ ಯಾವುದೋ ರೂಪದಲ್ಲಿ ರೈತನಿಗೆ ಕೊಟ್ಟರೆ ಇನ್ನೊಂದು ಕಡೆ ಬಂಡವಾಳಶಾಹಿ ಮಾನವ ನಿರ್ಮಿತ ಕಷ್ಟಗಳು ಆತನನ್ನು ಕುಕ್ಕಿ ತಿನ್ನತೊಡಗುತ್ತವೆ.

ಹೀಗಾಗಿಯೇ ಎಲ್ಲರಿಗೂ ಅನ್ನ ನೀಡುವ ರೈತ ಮಾತ್ರ ಸುಖ ಪಡದೇ ಸಾಯುವುದೇ ಮೇಲು ಎಂಬ ನಿರ್ಧಾರಕ್ಕೆ ಬರುತ್ತಾನೆ. ಬೀದರನಲ್ಲಿ ಈಗ ರೈತನ ಬೆಳೆಗೆ ಹತ್ತಿಕೊಂಡಿರುವ ಶಂಕು ಹುಳುವಿನ ಬಾಧೆಯಿಂದಾಗಿ ರೈತ ಇರೋದಕ್ಕಿಂತಲೂ ಸಾಯುವುದೇ ಮೇಲು ಎಂದು ಕಣ್ಣೀರು ಹಾಕುತ್ತಿದ್ದಾನೆ.

ಗಡಿ ಜಿಲ್ಲೆ ಬೀದರ್ ಅಂದ್ರೆ ಬರದ ನಾಡು ಅನ್ನುತ್ತಾರೆ. ಒಮ್ಮೆ ಅತಿವೃಷ್ಟಿ ಮತ್ತೊಮ್ಮೆ ಅನಾವೃಷ್ಟಿ…. ಹೀಗೆ ಒಂದಲ್ಲ ಒಂದು ಸಂಕಷ್ಟಕ್ಕೆ ಸಿಲುಕಿ ಕಂಗಾಲಾಗುವ ಇಲ್ಲಿನ ರೈತರಿಗೆ ಈಗ ಮತ್ತೊಂದು ಬಾಧೆ ಎದುರಾಗಿದೆ.

ಕಮಲ ನಗರ ತಾಲೂಕಿನ ಡೋನಗಾಂವ( ಎಮ್) ಗ್ರಾಮದ ರೈತ ಲಕ್ಷ್ಮಣ ಮೇತ್ರೆ ತನ್ನ ಹೊಲದಲ್ಲಿ ದಾಳಿ ಮಾಡಿದ ಶಂಕು ಹುಳುವಿನ ಕಾಟಕ್ಕೆ ಕಣ್ಣೀರು ಹಾಕಿದ್ದು ನಾವು ಇರೋದಕ್ಕಿಂತಲೂ ಸಾಯುವುದು ಮೇಲು ಎಂದು ನೊಂದಿದ್ದಾನೆ.

ತನ್ನ ಹೊಲದಲ್ಲಿ ದಾಳಿ ಮಾಡಿದ ಶಂಕು ಹುಳುವನ್ನು ಹಿಡಿದು ಒಂದು ಬುಟ್ಟಿಯಲ್ಲಿ ತುಂಬಿಕೊಂಡ ಅದರ ಮುಂದೆ ಕುಳಿತು ನೊಂದುಕೊಂಡಿದ್ದು ರೈತನಿಗೆ ಇಂಥ ಕಷ್ಟ ಯಾಕಪ್ಪಾ ದೇವರೆ ಎಂಬಂತೆ ಅಳಲು ತೋಡಿಕೊಂಡಿದ್ದಾರೆ.

ರೈತರ ಬಗ್ಗೆ ಉದ್ದುದ್ದ ಮಾತು ಹೇಳುವ ರಾಜಕೀಯ ನಾಯಕರು, ಸರ್ಕಾರ ಕಣ್ಣು ತೆರೆಯಬೇಕು. ಬೀದರ ಜಿಲ್ಲೆಯಲ್ಲಿ ಶಂಕು ಹುಳುವಿನ ಕಾಟ ಹೆಚ್ಚಾಗಿದ್ದು ಕೃಷಿ ಇಲಾಖೆ ಇದಕ್ಕೆ ಪರಿಹಾರ ಕಂಡುಕೊಳ್ಳಲು ತಡ ಮಾಡಬಾರದು. ಅನ್ನದಾತನಿಗೆ ಇನ್ನೂ ಹೆಚ್ಚಿನ ಹಾನಿಯಾಗುವ ಮುಂಚೆಯೇ ಎಚ್ಚತ್ತುಕೊಳ್ಳಬೇಕಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಸಿಂದಗಿ: ಪಟ್ಟಣದ ಭೀಮಾಶಂಕರ ಮಠದಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಮಾಡಲಾಯಿತು. ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಕೊಗಟನೂರ ಪೂಜ್ಯಶ್ರೀ...
- Advertisement -

More Articles Like This

- Advertisement -
close
error: Content is protected !!