ಮೂಡಲಗಿ ನೂತನ ತಹಶೀಲ್ದಾರ್ ಶ್ರೀಶೈಲ ಗುಡಮೆ ಅವರಿಗೆ ಸತ್ಕಾರ

Must Read

ಮೂಡಲಗಿ – ಮೂಡಲಗಿ ತಾಲೂಕಿನ ನೂತನ ತಹಶೀಲ್ದಾರರಾಗಿ ಅಧಿಕಾರ ಸ್ವೀಕರಿಸಿದ ಶ್ರೀಶೈಲ ಗುಡಮೆ ಹಾಗೂ ಇಲ್ಲಿಯವರೆಗೆ ಪ್ರಭಾರ ತಹಶೀಲ್ದಾರರಾಗಿ ಕಾರ್ಯನಿರ್ವಹಿಸಿದ ಶಿವಾನಂದ ಬಬಲಿ ಅವರಿಗೆ ಮೂಡಲಗಿ ತಹಶೀಲ್ದಾರ್ ಕಚೇರಿಯಲ್ಲಿ ಸನ್ಮಾನ ಮಾಡಿ ಗೌರವಿಸಲಾಯಿತು.

ಶ್ರೀಶೈಲ ಗುಡಮೆ ಅವರು ಈ ಮೊದಲು ಅಥಣಿ ತಾಲೂಕಿನಲ್ಲಿ ಗ್ರೇಡ್ 2 ತಹಶೀಲ್ದಾರ್ ರಾಗಿ ಪ್ರಾಮಾಣಿಕ , ಸಮಾಜ ಪರ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದವರಾಗಿರುತ್ತಾರೆ.

ಈ ಸಂದರ್ಭದಲ್ಲಿ ಉಪ ತಹಶೀಲ್ದಾರ ರಾಜಶೇಖರ ವಳಸಂಗ. ಶಿರಸ್ತೇದಾರ ಪರಸಪ್ಪ ನಾಯ್ಕ. ಪ್ರ ದ ಸ ಯಶವಂತ ಉದ್ದಪ್ಪನ್ನವರ, ಎಸ್ ಎಸ್ ಮುದಗಲ್ ಸಮಾಜದ ಮುಖಂಡರಾದ ಯಮನಪ್ಪ ನಿಡೋಣಿ. ಮುರಿಗೆಪ್ಪ ಮಾಲಗಾರ, ಸಿದ್ದಪ್ಪ ಕೂಲಿಗೋಡ, ಅಶೋಕ ಶಿವಾಪೂರ, ಹನಮಂತ ಬಾಗಿ, ಅಯ್ಯಪ್ಪ ಹಿರೇಮಠ, ಮಾದೇವ ಬಡ್ಡಿ, ಸುರೇಶ ಮಗದುಮ, ಶಂಕರ ಕೂಲಿಗೋಡ, ಸುಭಾಸ ಮನ್ನಿಕೇರಿ, ರಾಮಣ್ಣಾ ನಿಡೋಣಿ, ಯಲ್ಲಪ್ಪ ಗುಡಮೆ ಮೊದಲಾದವರು ಹಾಜರಿದ್ದರು.

Latest News

ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ – ಶಿವಶರಣಪ್ಪ

ಸಿಂದಗಿ; ನಾಡಗೀತೆಯಲ್ಲಿ ಸರ್ವಜನಾಂಗದ ಶಾಂತಿಯ ತೋಟವಿದೆ. ಭಾವನೆಗಳ ಗ್ರಂಥವಿದೆ. ಸರ್ವ ಹೃದಯದ ಬಂಧವಿದೆ. ಕನ್ನಡ ಭಾಷೆಗೆ ೨ ಸಾವಿರ ವರ್ಷಗಳ ಇತಿಹಾಸವಿದೆ. ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡ...

More Articles Like This

error: Content is protected !!
Join WhatsApp Group