ಸಿಂದಗಿ: ಹಂದಿಗನೂರ ಗ್ರಾಮದ ಅಭಿವೃದ್ಧಿಗಾಗಿ ಪ್ರಾಮಾಣಿಕ ಕೆಲಸ ಮಾಡಿ ಗ್ರಾಮಕ್ಕೆ ಪದವಿ ಪೂರ್ವ ಕಾಲೇಜ ಮತ್ತು ಪಶು ಆಸ್ಪತ್ರೆ ಮಾಡಿ ರೈತರಿಗೆ ಅನುಕೂಲವಾಗುವಂತೆ ಅನೇಕ ಬೇಡಿಕೆಗಳನ್ನು ಮುಂದಿನ ದಿನಮಾನಗಳಲ್ಲಿ ಕಾರ್ಯರೂಪಕ್ಕೆ ತಂದು ಜನತೆಯ ಋಣ ಮುಟ್ಟಿಸುತ್ತೇನೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ತಾಲೂಕಿನ ಹಂದಿಗನೂರ ಗ್ರಾಮದಲ್ಲಿ ನೂತನ ಶಾಸಕರಿಗೆ ಸನ್ಮಾನ ಸಮಾರಂಭ ಹಾಗೂ ಹಂದಿಗನೂರ ಗ್ರಾಮದ ಜನತೆಗೆ ಅಭಿನಂದನಾ ಸಮಾರಂಭ ನಡೆಯಿತು. ಹಂದಿಗನೂರ ಗ್ರಾಮದ ಜನತೆ ಶಾಸಕರಿಗೆ ಸನ್ಮಾನಿಸಿದರು ಜೊತೆಗೆ ಸಮಾರಂಭದಲ್ಲಿ ಗೊಲಗೇರಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಹಳ್ಳಿಗಳ ಹಡಪದ ಅಪ್ಪಣ್ಣನವರ ಸಮಾಜದ ವತಿಯಿಂದ ಹಾಗೂ ಹಂದಿಗನೂರ ಗ್ರಾಮದ ಶ್ರೀ ಹಡಪದ ಅಪ್ಪಣ್ಣನವರ ಪ್ರಾಥಮಿಕ ಶಾಲೆಯ ವತಿಯಿಂದ ಮಂಜುನಾಥ ಹಡಪದ ಅವರು ಶಾಸಕ ರಮೇಶ ಭೂಸನೂರ ಅವರಿಗೆ ಸನ್ಮಾನಿಸಿ ಗೌರವಿಸಿದರು,
ಕಾರ್ಯಕ್ರಮದಲ್ಲಿ ಗೊಲಗೇರಿ ಜಿಲ್ಲಾ ಪಂಚಾಯತ್ ಪ್ರತಿನಿಧಿ ಸಂತೋಷ ಪಾಟೀಲ್, ಸಿದ್ದು ಬುಳ್ಳಾ, ಶಿಲ್ಪಾ ಕುದರಗುಂಡ, ಅಶೋಕ ಅಂಚೆಗಾಂವಿ, ಕಲ್ಲಣ್ಣ ದೇಸಾಯಿ, ಸಿದ್ದು ಬಿರಾದಾರ, ಚನ್ನಪ್ಪಗೌಡ ಬಿರಾದಾರ, ಗುರು ತಳವಾರ ಹಾಗೂ ಗ್ರಾಮದ ಯುವಕರು ಹಿರಿಯರು,ಮಹಿಳೆಯರು ಭಾಗವಹಿಸಿದ್ದರು