ಗುರುವಂದನೆ ಹಾಗೂ ಸ್ನೇಹ ಸಮ್ಮೇಳ
ಬೈಲಹೊಂಗಲ – ಇಲ್ಲಿನ ಶ್ರೀ ಬಸವೇಶ್ವರ ಸ್ವತಂತ್ರ ಪಪೂ ಮಹಾವಿದ್ಯಾಲಯದಲ್ಲಿ 2008-2009 ನೆ ಸಾಲಿನ ಪಿಯುಸಿ ವಿದ್ಯಾರ್ಥಿಗಳಿಂದ ನಡೆದ ಗುರುವಂದನೆ ಹಾಗೂ ಸ್ನೇಹ ಸಮ್ಮೆಳನ ಕಾರ್ಯಕ್ರಮವನ್ನು ಪ್ರಾಚಾರ್ಯರಾದ ಸಿ.ಬಿ.ಗಣಾಚಾರಿ ಬಿ.ಬಿ.ಗಣಾಚಾರಿ. ಉದ್ಟಾಟಿಸಿದರು.
ಇಂದಿನ ಯುಗದಲ್ಲಿ ಶಿಕ್ಷಣ ಅತ್ಯಮೂಲ್ಯವಾದದ್ದು. ಶಿಕ್ಷಣ ಪಡೆದು ಎಲ್ಲರೂ ಒಳ್ಳೆಯ ನಾಗರಿಕರಾಗಬೇಕು.ಎಂದು ಬಿ.ಬಿ.ಗಣಾಚಾರಿ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ.ಸಿ.ಬಿ.ಗಣಾಚಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಎಲ್ಲ ವಿದ್ಯಾರ್ಥಿಗಳ ಜೀವನ ಉಜ್ವಲವಾಗಲಿ ನಗುನಗುತಾ ಜೀವನ ಸಾಗಿಸಿ.ಎಂದು ಶುಭ ಹಾರೈಸಿದರು.ಈ ಕಾರ್ಯಕ್ರಮ ನಮ್ಮ ಕಾಲೇಜಿನಲ್ಲಿ ಇತಿಹಾಸವಾಗಲಿದೆ ಎಂದರು.
ಎಲ್ಲ ಉಪನ್ಯಾಸಕರಿಗೆ ಗುರುವಂದನೆ ಸಲ್ಲಿಸಿದ ಹಳೇ ವಿದ್ಯಾರ್ಥಿಗಳ ಕಾರ್ಯ ಅವಿಸ್ಮರಣೀಯವಾಗಿದೆ. ಉಪನ್ಯಾಸಕರಾದ ಸಾವಿತ್ರಿ ಹಣಮಂತಗಡ, ಎಸ್.ಎಸ್.ಬೆಳ್ಳಿಕಟ್ಟಿ, ಸಿ.ಬಿ.ಚಿಕ್ಕೊಪ್ಪ, ಸವಿತಾ ರೊಟ್ಟಿ, ಎಸ್.ಬಿ.ಪಾಟೀಲ, ಭಾರತಿ ಹಜೇರಿ,ಕೆ.ವಿ.ಯಲಿಗಾರ, ಎಸ್.ಬಿ.ಪುರಾಣಿಕಮಠ,ಎಸ್.ಜೆ.ಬಡಿಗೇರ ಹಾಗೂ 2008-2009 ನೇ ಸಾಲಿನ ಎಲ್ಲ ವಿದ್ಯಾರ್ಥಿ ವಿದ್ಯಿರ್ಥಿನಿಯರು ಉಪಸ್ಧಿತರಿದ್ದರು. ಎಲ್ಲ ಉಪನ್ಯಾಸಕರನ್ನು ಸನ್ಮಾನಿಸಲಾಯಿತು.