ಸ್ವಾತಂತ್ರ್ಯೋತ್ಸವದಲ್ಲಿ ಶಿಕ್ಷಣ ಇಲಾಖೆಯ ಸಿಬ್ಬಂದಿಗೆ ಸನ್ಮಾನ

Must Read

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...

ನದಿ ಸ್ವಚ್ಛತೆಗೆ ಚಾಲನೆ ನೀಡಿದ ಈರಣ್ಣ ಕಡಾಡಿ

ಗೋಕಾಕ: ಪ್ರಕೃತಿ ಉಚಿತವಾಗಿ ಕೊಟ್ಟಿರುವ ನೀರನ್ನು, ಗಿಡ ಮರಗಳು ಉಚಿತವಾಗಿ ಕೊಟ್ಟಿರುವ ಆಮ್ಲಜನಕವನ್ನು ನಾಶ ಮಾಡುವ ಮೂಲಕ ಸ್ವಯಂಕೃತ ಅಪರಾಧಗೈದ ನಾವೆಲ್ಲ ನದಿ ಸ್ವಚ್ಛತೆ ಮಾಡುವ...

ಮುಷ್ಕರ ಮತ್ತು ಆರ್ಥಿಕ ಪರಿಸ್ಥಿತಿ

ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರಚಲಿತದಲ್ಲಿರುವ ಒಂದು ವಿದ್ಯಮಾನಗಳಲ್ಲಿ ಮುಷ್ಕರ ಕೂಡ ಒಂದು. ಬಂದ್ ಬಂದ್ ಬಂದ್.ಏನಿದು?ಏಕೆ ಮಾಡಬೇಕು? ಇದರಿಂದ ಆಗುವ ಬದಲಾವಣೆಗಳೇನು? ಯಾರಿಗೆ ಲಾಭ?...

ಸವದತ್ತಿಃ 75 ನೇಯ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಸಂದರ್ಭದಲ್ಲಿ ವಿವಿಧ ಇಲಾಖೆಯ ಸಿಬ್ಬಂದಿಯ ಸನ್ಮಾನಗಳು ತಾಲೂಕಾ ಆಡಳಿತದಿಂದ ಸವದತ್ತಿಯ ಎಸ್.ಕೆ.ಹೈಸ್ಕೂಲ್ ಆವರಣದಲ್ಲಿ ಜರುಗಿದವು.

ಈ ಸಂದರ್ಭದಲ್ಲಿ ಸವದತ್ತಿ ತಾಲೂಕಿನ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಿವಿಧ ಸಿಬ್ಬಂದಿಗಳು ಈ ಸನ್ಮಾನ ಗೌರವಕ್ಕೆ ಪಾತ್ರರಾದರು.ಅವರ ಸಂಕ್ಷಿಪ್ತ ಪರಿಚಯಾತ್ಮಕ ವಿವರ.ಮೂಲತಃ ಹೊಳಿ ಹೊಸೂರಿನವರಾದ ಕಳೆದ 10 ವರ್ಷಗಳಿಂದ ಕ್ರೀಡೆಯಲ್ಲಿ ಪರಿಶ್ರಮ ಪಟ್ಟು ಶಿಕ್ಷಕರಾಗಿ.ಸಿ.ಆರ್.ಪಿಯಾಗಿ ಸೇವೆ ಸಲ್ಲಿಸಿ ಸದ್ಯ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವ್ಹಿ.ಸಿ.ಹಿರೇಮಠರು ಕರ್ನಾಟಕ ರಾಜ್ಯ ನೌಕರರ ಸಂಘದಿಂದ ಜರಗುವ ಕ್ರೀಡಾಕೂಟದಲ್ಲಿ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಬ್ಯಾಂಡ್ಮಿಂಟನ್ ಮತ್ತು ಟೆನಿಸ್ ಕ್ರೀಡೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಜಯಗಳಿಸುವ ಮೂಲಕ ರಾಜ್ಯ ಮಟ್ಟದಲ್ಲಿ ಸೆಮಿ ಪೈನಲ್‍ವರೆಗೂ ಸ್ಫರ್ಧಿಸುವ ಮೂಲಕ ಗಮನಾರ್ಹ ಸಾಧನೆಗೈದ ಪ್ರಯುಕ್ತ ಸನ್ಮಾನ ಗೌರವಕ್ಕೆ ಪಾತ್ರರಾದರು.

- Advertisement -

ಮೂಲತಃ ಯಕ್ಕುಂಡಿಯವರಾದ ಕಂಪ್ಯೂಟರ್ ಪ್ರೋಗ್ರಾಮರ್ ವಿನೋದ ಹೊಂಗಲ ಮಲಪ್ರಭಾ ನೆರೆ ಹಾವಳಿ ಸಂದರ್ಭ ಮತ್ತು ಕೋರೋನಾ ಸಂದರ್ಭದಲ್ಲಿ ನಿರಂತರವಾಗಿ ಹಗಲಿರುಳೆನ್ನದೇ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ಸನ್ಮಾನಕ್ಕೆ ಪಾತ್ರರಾದರು. ಮೂಲತಃ ಗೋಕಾಕ ತಾಲೂಕಿನ ಮರಡಿ ಶಿವಾಪುರದವರಾದ ಕಂಪ್ಯೂಟರ್ ಡಾಟಾ ಎಂಟ್ರಿ ಆಪರೇಟರ್ ಮಲ್ಲಿಕಾರ್ಜುನ ಹೂಲಿ ಇಲಾಖೆಯ ಕರ್ತವ್ಯದ ಜೊತೆಗೆ ಆರೋಗ್ಯ ಇಲಾಖೆಗೆ ನಿಯೋಜನೆಗೊಂಡು ಕೋರೋನಾ ಸಂಕಷ್ಟ ಕಾಲದಲ್ಲಿ ಕೋರೋನಾ ವಾರಿಯರ್ ಆಗಿ ನಿರಂತರವಾಗಿ ಕರ್ತವ್ಯ ನಿರ್ವಹಿಸಿದ ಪ್ರಯುಕ್ತ ಸನ್ಮಾನಕ್ಕೆ ಪಾತ್ರರಾಗಿರುವರು.

ಮೂಲತಃ ಕರೀಕಟ್ಟಿಯವರಾದ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಹ್ಯಾಟ್ರಿಕ್ ಸೇವೆಗೈದ ಎಸ್.ವ್ಹಿ.ಬೆಳವಡಿಯವರು ಮುಖ್ಯೋಪಾಧ್ಯಾಯರಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಕ್ಕುಂಬಿಯಲ್ಲಿ ಸೇವೆಯಿಂದ ನಿವೃತ್ತಿಯಾದ ಪ್ರಯುಕ್ತ. ಮೂಲತಃ ಸವದತ್ತಿಯವರಾದ ಪ್ರಶಾಂತ ಮೋಟೆಕರ್ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಪ್ರಯುಕ್ತ. ಮೂಲತಃ ಯರಝರ್ವಿಯವರಾದ ಶಿಕ್ಷಕರಾಗಿ,ನಿಯೋಜಿತ ಸಿ.ಆರ್.ಪಿಯಾಗಿ, ನಿಯೋಜಿತ ಶಿಕ್ಷಣ ಸಂಯೋಜಕರಾಗಿ ಮುಖ್ಯೋಪಾಧ್ಯಾಯರಾಗಿ ಸೇವೆಯಿಂದ ನಿವೃತ್ತಿ ಹೊಂದಿದ ಸತ್ತೀಗೇರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಬಿ.ಪೂಜೇರ.ಕೋರೋನಾ ಸಂದರ್ಭದಲ್ಲಿ ಮಕ್ಕಳ ಆರೋಗ್ಯದ ಕಾಳಜಿಯ ಜೊತೆಗೆ ಪಾಲಕರಿಗೂ ತಮ್ಮ ಆರೋಗ್ಯ ಕಾಯ್ದುಕೊಳ್ಳಲು ಸಹಕಾರಿಯಾಗುವಂತೆ ವೆಬನಾರ್ ಮೂಲಕ ಯೋಗ ತರಬೇತಿ ನೀಡಿದ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ವ್ಹಿ.ಎಚ್.ಪಾಟೀಲ ಸೇರಿದಂತೆ ನಿವೃತ್ತರಾದಿಯಾಗಿ ವಿವಿಧ ರೀತಿಯ ಗಮನಾರ್ಹ ಸೇವೆಗೈದ ಶಿಕ್ಷಕರು ಕಂಪ್ಯೂಟರ್ ಆಪರೇಟರ್ ಪ್ರೋಗ್ರಾಮರ್ ದೈಹಿಕ ಶಿಕ್ಷಕರನ್ನು ವಿವಿಧ ರಂಗಗಳಲ್ಲಿ ಸೇವೆಸಲ್ಲಿಸಿದ ಮಹನೀಯರಿಗೆ ತಾಲೂಕಾ ಆಡಳಿತ ವತಿಯಿಂದ ವಿಧಾನ ಸಭೆ ಉಪ ಸಭಾದ್ಯಕ್ಷರಾದ ಸನ್ಮಾನ್ಯ ಆನಂದ ಮಾಮನಿಯವರು ಸನ್ಮಾನಿಸಿ ಗೌರವಿಸಿದರು.

ಸಮಾರಂಭದಲ್ಲಿ ಅತಿಥಿಗಳಾಗಿ ಪುರಸಭೆ ಅಧ್ಯಕ್ಷರಾದ ರಾಜಶೇಖರ ವಿ ಕಾರದಗಿ. ಪುರಸಭೆ ಉಪಾಧ್ಯಕ್ಷ ದೀಪಕ ಜಾನ್ವೇಕರ ಎಪಿಎಮ್‍ಸಿ [ಪ್ರಭಾರ] ಅಧ್ಯಕ್ಷ ಚಂದ್ರಶೇಖರ ಅಳಗೊಡಿ. ಬಸನಾಯ್ಕ ಮಲ್ಲೂರ. ಶಿವಾನಂದ ಪಟ್ಟಣಶೆಟ್ಟಿ. . ತಹಶಿಲ್ದಾರ ಪ್ರಶಾಂತ ಬಿ ಪಾಟೀಲ. ಸಿ ಪಿ ಐ ಮಂಜುನಾಥ ನಡುವಿನಮನಿ. ಪಿ ಎಸ ಐ ಶಿವಾನಂದ ಗುಡುಗನಟ್ಟಿ. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಯಶ್ವಂತಕುಮಾರ. ಪುರಸಭೆ ಮುಖ್ಯಾಧಿಕಾರಿ ಪಿ ಎಮ್ ಚನ್ನಪ್ಪನವರ. ಜಿ ಪಂ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರಾದ ಎಸ್ ಕೆ ಪಾಟೀಲ. ಮತ್ತು ಎಮ್ ಜಿ ರೇವಣಕರ. ಲೊಕೋಪಯೊಗಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರಾದ ಎಚ್ ಎ ಕದ್ರಾಪುರ, ಪ್ರಮೋದ ಮೂಡಲಗಿ. ಸಹಾಯಕ ಕೃಷಿ ನಿರ್ದೇಶಕ ಕೆ ಎನ ಮಾರಡ್ಡಿ. ತಾಲೂಕಾ ವೈದ್ಯಾಧಿಕಾರಿ ಡಾ.ಮಹೇಶ ಚಿತ್ತರಗಿ ಸೇರಿದಂತೆ ತಾಲೂಕಾ ಮಟ್ಟದ ಎಲ್ಲ ಅಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮ ಕೊನೆಗೊಂಡ ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿ. ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ ಶಿಕ್ಷಣ ಸಂಯೋಜಕ ಎಂ.ಡಿ.ಹುದ್ದಾರ.ಬಿ.ಐ.ಇ.ಆರ್.ಟಿಗಳಾದ ವೈ.ಬಿ.ಕಡಕೋಳ.ಎಸ್.ಬಿ.ಬೆಟ್ಟದ.ಸಿ.ವ್ಹಿ.ಬಾರ್ಕಿ.ಸವದತ್ತಿ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಎಫ್.ಜಿ.ನವಲಗುಂದ.ಎಚ್.ಆರ್.ಪೆಟ್ಲೂರ್. ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ರಾಜು ಭಜಂತ್ರಿ, ಪರಸಗಡ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರ ಸಂಘದ ಕಾರ್ಯದರ್ಶಿ ಬಸವರಾಜ ಹುಂಡೇಕಾರ ಸೇರಿದಂತೆ ಕಾರ್ಯಕ್ರಮದ ವೇದಿಕೆಯಲ್ಲಿ ಅಭಿನಂದಿಸಿದರು.


ವರದಿ: ವೈ.ಬಿ.ಕಡಕೋಳ

- Advertisement -
- Advertisement -

Latest News

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...
- Advertisement -

More Articles Like This

- Advertisement -
close
error: Content is protected !!