ಸ್ವಾಭಿಮಾನದ ಬದುಕಿಗೆ ಸ್ತ್ರೀ ಶಕ್ತಿ ಸಂಘ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಹಳ್ಳಿಗಾಡಿನಲ್ಲಿ ಬದುಕು ಸಾಗಿಸುವುದು ದುಸ್ತರವೆಂದು ಪಕ್ಕದ ಪಟ್ಟಣಗಳಿಗೆ ನಗರಗಳಿಗೆ ವಲಸೆ ಬರುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಸಂಬಂಧಗಳ ಬಂಧ ದೂರ ಸರಿಸಿ ಪಟ್ಟಣದಲ್ಲಿ ಬದುಕು ದೂಡುವುದಕ್ಕಿಂತ ಇರುವ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಬಾಳು ಕಟ್ಟಿಕೊಳ್ಳುವ ಮಹಿಳೆಯರು ಸಂಘಗಳನ್ನು ತೆರೆದದ್ದು ಈಗ ಇತಿಹಾಸ. ಈ ಸಂಘಗಳ ಮೂಲಕ ಮಹಿಳೆಯರಲ್ಲಿ ಶೈಕ್ಷಣಿಕ ಅರಿವು ಹೆಚ್ಚಿಸುವ ಆತ್ಮವಿಶ್ವಾಸ ಬಲಗೊಳಿಸುವ ಸಂವಹನ ಕೌಶಲ ಬೆಳೆಸುವ ಕಾರ್ಯಗಳು ನಡೆಯುತ್ತಿವೆ. ಇದರೊಂದಿಗೆ ಮಹಿಳಾ ಮೀಸಲಾತಿ ಬಗೆಗೆ ಜಾಗೃತಿ ಮೂಡಿಸಲಾಗುತ್ತಿದೆ. ಆರೋಗ್ಯ ಶುಚಿತ್ವ ಮತ್ತು ಉದ್ಯಮಶೀಲತೆ ಕುರಿತು ತರಬೇತಿ ನೀಡಲಾಗುತ್ತಿದೆ. ನಾಯಕತ್ವ ಗುಣವನ್ನು ಬೆಳೆಸಲು ಪ್ರಯತ್ನಿಸಲಾಗುತ್ತಿದೆ. ಇದೆಲ್ಲದರ ಫಲವಾಗಿ ಮಹಿಳಾ ಮಣಿಗಳು ಸಾಮಾಜಿಕ ರಂಗದಲ್ಲಿ ಮುಂಚೂಣಿಯಲ್ಲಿದ್ದಾರೆ.

ಸಹಿಸುವ ನೋವು

ತಮ್ಮ ಶ್ರೇಷ್ಠತೆಯನ್ನು ಹೊಗಳಿಕೊಳ್ಳದಿರುವಿಕೆ, ಯಾವುದೇ ದುರುದ್ದೇಶದಿಂದ ಯಾರನ್ನೂ ನೋಯಿಸದಿರುವುದು ಮನೆಯಲ್ಲಿ ಯಾರೇ ಏನೇ ಅಂದರೂ ಕ್ಷಣ ಮಾತ್ರ ಬೇಸರಿಸಿಕೊಂಡು ಮತ್ತೆ ತಾಳ್ಮೆಯಿಂದ ತನ್ನ ಮನವನ್ನು ಸಾಮರಸ್ಯಗೊಳಿಸುವುದುಬಹುತೇಕ ಹೆಣ್ಣುಮಕ್ಕಳ ಲಕ್ಷಣ. ನದಿ ತನ್ನೊಂದಿಗೆ ಕಸ ಕಡ್ಡಿಗಳನ್ನು ಹೊತ್ತು ಸಾಗುತ್ತದೆ. ಅಂತೆಯೇ ನಾರಿ ಇತರರ ತಪ್ಪುಗಳನ್ನು ದೊಡ್ಡದನ್ನಾಗಿಸದೆ ಕ್ಷಮಿಸುತ್ತಾಳೆ. ಅವರನ್ನು ಸಂತೋಷದ ಕಡಲಿಗೆ ಕರೆದುಕೊಂಡು ನಡೆಯುತ್ತಾಳೆ. ಕ್ಷಮಾಗುಣ ಆತ್ಮ ಸಂಯಮಕೆ ಹೆಸರಾದವಳು ಹೆಣ್ಣು. ಪುರುಷ ಪ್ರಧಾನ ಸಮಾಜದಲ್ಲಿ ಹಿಂದಿಗಿಂತ ಇಂದು ಮಹಿಳೆ ಬಹಳಷ್ಟು ವಿಭಿನ್ನ ಲೋಕದಲ್ಲಿ ಬದುಕುತ್ತಿದ್ದಾಳೆಂದು ಹೊರ ನೋಟಕ್ಕೆ ಕಾಣಿಸುತ್ತಿದೆ.ಆದರೆ ಮಾನಸಿಕವಾಗಿ ಆಕೆಯ ಸಹಿಸುತ್ತಿರುವ ನೋವು, ನೋವಿನಲ್ಲಿ ಸವೆಸುತ್ತಿರುವ ಬದುಕು ಹೆಣ್ಣು ಮನದ ಪುರುಷರಿಗೆ ಮಾತ್ರ ಗೊತ್ತಾಗುತ್ತದೆ.ಎದುರಾಗುವ ಎಲ್ಲ ಸಮಸ್ಯೆಗಳನ್ನು ಕಚ್ಚೆದೆಯಿಂದ ದಿಟ್ಟ ನಡೆಯಿಂದ ಎದುರಿಸುವುದನ್ನು ಕರುಣೆ ಹೃದಯದಿ ಕಂಡರೆ ಆಕೆಯ ಪ್ರತಿ ಮಮತೆ ಉಕ್ಕಿ ಬಾರದೇ ಇರದು.

ಸ್ತ್ರೀ ಶಕ್ತಿ ಯೋಜನೆ

- Advertisement -

ಗ್ರಾಮೀಣ ಭಾಗದ ಬಡ ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ ರಾಜ್ಯ ಸರಕಾರ 2000-01 ನೇ ಸಾಲಿನಲ್ಲಿ ಸ್ತ್ರೀ ಶಕ್ತಿ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ಸ್ತ್ರೀ ಶಕ್ತಿ ಸಂಘಗಳು ರಚನೆಯಾಗಿವೆ. ಈ ಸಂಘಗಳು ಮಹಿಳೆಯರ ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ಬದಲಾವಣೆಗೆ ಪೂರಕ ವಾತಾವರಣ ನಿರ್ಮಿಸುತ್ತಿವೆ.

ಸ್ತ್ರೀ ಶಕ್ತಿ ಗುಂಪು

ಸಮಾಜದ ಬಡ ಕುಟುಂಬದ ಸಮಾನ ಮನಸ್ಕರು ಆರ್ಥಿಕ ಸಾಮಾಜಿಕ ಹಿನ್ನೆಲೆಯುಳ್ಳ ಪರಸ್ಪರ ವಿಶ್ವಾಸದಿಂದ ಕೂಡಿದ 15 ರಿಂದ 20 ಜನ ಮಹಿಳೆಯರು ಒಂದೆಡೆ ಸೇರಿ ತಮ್ಮ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಸ್ವ ಇಚ್ಛೆಯಿಂದ ರಚಿಸಿಕೊಂಡ ಗುಂಪಾಗಿದೆ. 2016-17 ನೇ ಸಾಲಿನಲ್ಲಿ ಸ್ತ್ರೀ ಶಕ್ತಿ ಸಮೃದ್ಧಿ ಯೋಜನೆಯಡಿ ಎಲ್ಲ ಜಿಲ್ಲೆಗಳಲ್ಲೂ ಜಿಲ್ಲಾ ಒಕ್ಕೂಟಗಳನ್ನು ರಚಿಸಲಾಗಿದೆ. ಈ ಒಕ್ಕೂಟಗಳನ್ನು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರಡಿ ನೋಂದಣಿ ಮಾಡಿಸಿದೆ.

ಸ್ತ್ರೀ ಶಕ್ತಿ ಭವನಗಳು

ಸ್ತ್ರೀ ಶಕ್ತಿ ಗುಂಪುಗಳು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ವಿವಿಧ ರೀತಿಯ ತರಬೇತಿಗಳನ್ನು ನಡೆಸಲು ಮತ್ತು ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ತಾಲ್ಲೂಕು ಜಿಲ್ಲಾ ಹಾಗೂ ವಿಭಾಗೀಯ ಮಟ್ಟದ ಭವನಗಳನ್ನು ಮತ್ತು ಮಾರಾಟ ಮಳಿಗೆಗಳನ್ನು ತಾಲ್ಲೂಕು ಜಿಲ್ಲಾ ಮಟ್ಟದಲ್ಲಿ ನಿರ್ಮಿಸಲಾಗಿದೆ.

ಸುತ್ತು ನಿಧಿ

ಕನಿಷ್ಟ ಆರು ತಿಂಗಳ ಉಳಿತಾಯ ನಿರ್ವಹಿಸಿರುವ ಪ್ರತಿಯೊಂದು ಗುಂಪಿಗೆ ಸುತ್ತು ನಿಧಿಯಾಗಿ ಪ್ರಥಮ ಹಂತದಲ್ಲಿ ರೂ 5000 ಗಳನ್ನು ನೀಡಲಾಗಿದೆ. 2014-15 ನೇ ಸಾಲಿನಿಂದ 2017-18 ರವರೆಗೆ ರೂ 5000 ರಿಂದ 25000 ಗಳಿಗೆ ಹಂತ ಹಂತವಾಗಿ ಹೆಚ್ಚಿಸಿದೆ.

ಪ್ರೋತ್ಸಾಹ ಧನ

ರೂ 25000 ರಿಂದ 1.00 ಲಕ್ಷದವರೆಗೆ ಸಾಲವನ್ನು ಪಡೆಯುವ ಸ್ತ್ರೀ ಶಕ್ತಿ ಗುಂಪುಗಳಿಗೆ ಸಾಲದ ಮೇಲಿನ ಬಡ್ಡಿ ದರಕ್ಕೆ ಶೇ 6ರ ಸಹಾಯ ಧನವನ್ನು ಒದಗಿಸಲಾಗುತ್ತದೆ. ರೂ 75,000 ರಿಂದ 1.00 ಲಕ್ಷದವರೆಗೆ ಉಳಿತಾಯ ಮಾಡಿರುವ ಅರ್ಹ ಗುಂಪುಗಳಿಗೆ ತಲಾ ರೂ 20,000 ಗಳ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ. ವಿವಿಧ ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿರುವ ಸ್ತ್ರೀ ಶಕ್ತಿ ಗುಂಪುಗಳನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ನಿಟ್ಟಿನಲ್ಲಿ ಗುಂಪುಗಳಿಗೆ ತಲಾ ರೂ 5,000ರಂತೆ ಪ್ರೋತ್ಸಾಹಧನ ನೀಡಲಾಗುತ್ತಿದೆ.

ಮಾರಾಟ ಮೇಳ

ಜಿಲ್ಲಾ ಹಾಗೂ ತಾಲ್ಲೂಕ ಮಟ್ಟದಲ್ಲಿ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಗಳನ್ನು ಏರ್ಪಡಿಸಲು ಪ್ರತಿ ಜಿಲ್ಲೆಗೆ ಪ್ರತಿ ವರ್ಷ 75,000 ಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ. ಯೋಜನಾ ಬದ್ಧರಾಗಿ ಶ್ರಮವಹಿಸಿ ದುಡಿದರೆ ವಿಫಲತೆ ಕಣ್ಮುಂದೆ ಸುಳಿಯಲೂ ಹೆದರುವುದು. ಯಶಸ್ಸಿನ ಪಥವೇರಬಹುದೆಂದು ತಿಳಿದ ಮಹಿಳೆಯರೆಲ್ಲ ಯಶೋಗಾಥೆಯನ್ನು ಬರೆಯುತ್ತಿದ್ದಾರೆ. ಇಂದು ನಾರಿಯರು ಸಾಧನೆ ಮಾಡದೇ ಇರುವ ರಂಗಗಳಿಲ್ಲ ಎಂಬುದಂತೂ ನೂರಕ್ಕೆ ನೂರರಷ್ಟು ಸತ್ಯ.

ಬದುಕು ಕಟ್ಟಿಕೊಳ್ಳುವ ಛಲ

ಭಾರತದ ಜನಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ ಶೇ 52ರಷ್ಟು ಮಹಿಳೆಯರಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಮಿಂಚುತ್ತಿರುವುದನ್ನು ನೋಡಿದರೆ ಫಿನಿಕ್ಸ್ ಪಕ್ಷಿ ನೆನಪಾಗದೇ ಇರದು. ಎಂಥ ಸಂಕಷ್ಟದ ಬೆಂಕಿಯಲ್ಲಿ ಬಿದ್ದರೂ ಮತ್ತೆ ಎದ್ದು ಬದುಕು ಕಟ್ಟಿಕೊಳ್ಳುವ ಛಲ ಸಂತಸವನ್ನುಂಟು ಮಾಡುತ್ತದೆ. ಸಾಧನೆಯ ಮೇರು ಶಿಖರವೇರಿದ ಬಹಳಷ್ಟು ಮಹಿಳಾ ಮಣಿಗಳು ನಮ್ಮ ನಡುವೆ ಇದ್ದಾರೆ. ಎಷ್ಟೋ ಸಾಧಕ ಮಹಿಳೆಯರು ಸಮಾಜದಿಂದ ಗುರುತಿಸಲ್ಪಡದೇ ಎಲೆ ಮರೆಯ ಕಾಯಿಯಂತೆ ಕಾಯಕದಲ್ಲಿ ತೊಡಗಿರುವುದು ಸೂರ್ಯ ಪ್ರಕಾಶದಷ್ಟು ಸತ್ಯ.


ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ 9449234142

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!