ಹೆಣ್ಣು ಮಕ್ಕಳು ಸದ್ಗುಣಿಗಳಾಗಿ: ಜ್ಯೋತಿ ನಂದಿಮಠ

Must Read

ಸಿಂದಗಿ: ಹೆಣ್ಣುಮಕ್ಕಳಿಗೆ ಬದುಕಿನಲ್ಲಿ ಸಂಸ್ಕಾರ ಮತ್ತು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸದ್ಗುಣಿಗಳಾಗಿ ಎಂದು ಸರ್ಕಾರಿ ಆದರ್ಶ ಪ್ರೌಢಶಾಲೆಯ ಮುಖ್ಯಗುರುಮಾತೆಯಾದ ಜ್ಯೋತಿ ನಂದಿಮಠ ಹೇಳಿದರು.

ಪಟ್ಟಣದ ಪಿ.ಇ.ಎಸ್ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಪದವಿ ಮಹಾವಿದ್ಯಾಲಯ ಹಾಗೂ ತಾಲೂಕಾ ಲಯನ್ಸ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿ, ಮಹಿಳೆಯರು ಅನೇಕ ರಂಗಗಳಲ್ಲಿ ಕಾರ್ಯನಿರ್ವಹಿಸಿ ಸಮಾಜಿಕವಾಗಿ ಬೆಳೆಯಬೇಕಾದ ಅನಿವಾರ್ಯತೆಯಿದೆ ಕಾರಣ ಸೌಲಭ್ಯಗಳಿಗಾಗಿ ಕಾಯದೆ ಸೌಲಭ್ಯಗಳು ನಮ್ಮ ಹತ್ತಿರ ಬರುವ ಹಾಗೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಹಿಕ್ಕಣಗುತ್ತಿಯ ಸುಬೋಧಿ ಪ್ರೌಢಶಾಲೆಯ ಮುಖ್ಯ ಗುರುಮಾತೆ ಎಸ್. ಎಸ್. ಪಾಟೀಲ ಮಾತನಾಡಿ, ಮಹಿಳೆಯರಿಗೆ ಸಮಾಜದಲ್ಲಿ ಉನ್ನತಸ್ಥಾನ ನೀಡಿದೆ ಅದನ್ನು ಗೌರವಯುತವಾಗಿ ಕಾಪಾಡಿಕೊಂಡು ಮನೆಗೆದ್ದು ಮಾರು ಗೆದಿಯಬೇಕು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿ ಭಾರತಮಾತೆಗೆ ಕೀರ್ತಿ ತರುವಂಥ ಮಕ್ಕಳಾಗಬೇಕು ಎಂದರು.

ಕಾರ್ಯಕ್ರಮವನ್ನು ಶ್ರೀಮತಿ ವಿಮಲಾ .ಆಯ್. ಬಿರಾದಾರ ರವರು ಉದ್ಘಾಟಿಸಿದರು. ಶ್ರೀಮತಿ ಪ್ರೇಮಾ .ಭೀ. ಕರ್ಜಗಿ ಅಧ್ಯಕ್ಷತೆ ವಹಿಸಿದ್ದರು. ಪಿ.ಇ.ಎಸ್ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಆರ್. ಬಿ. ಗೋಡಕರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಪಿ.ಬಿ.ಕೆ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಜಿ. ಎಸ್. ಕಡಣಿ ಮಾತನಾಡಿದರು.

ಸಮಾರಂಭದಲ್ಲಿ ಶ್ರೀಮತಿ ಚನ್ನಮ್ಮ .ಕೆ. ಸೋಮಾಪೂರ, ಶ್ರೀಮತಿ ಶಕುಂತಲಾ ಹಿರೇಮಠ, ಎಂ.ಎಸ್. ಶ್ರೀಗಿರಿ, ಸವಿತಾ ರಾಠೋಡ ಉಪಸ್ಥಿತರಿದ್ದರು. ಎನ್.ಬಿ. ಬಾಬಳಗಾಂವ ನಿರೂಪಿಸಿದರು. ಸುಜಾತಾ ಕೊಂಗವಾಡ ಸ್ವಾಗತಿಸಿದರು. ಲಕ್ಷ್ಮೀ ವಾಲಿ ವಂದಿಸಿದರು.

Latest News

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಗಾಗಿ ಬೃಹತ್ ಪ್ರತಿಭಟನೆ – ಡಾ.ಅಡಿವೆಪ್ಪ ಇಟಗಿ 

ಬೆಳಗಾವಿ :ರಾಜ್ಯದ 430 ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ 11,000 ಅತಿಥಿ ಉಪನ್ಯಾಸಕರು ತಮ್ಮ ಸೇವೆ ಖಾಯಂಗೊಳಿಸಲು ಆಗ್ರಹಿಸಿ ಕಳೆದ 15...

More Articles Like This

error: Content is protected !!
Join WhatsApp Group