ಹೆಣ್ಣು ಮಕ್ಕಳು ಪೌಷ್ಠಿಕ ಆಹಾರ ಸೇವನೆ ಮಾಡಬೇಕು – ಡಾ.ನಯನಾ ಭಸ್ಮೇ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಸವದತ್ತಿ – “ಹೆಣ್ಣು ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಸದೃಢವಾಗಿರಬೇಕು ಅವರು ಹದಿ ಹರೆಯದ ವಯಸ್ಸಿಗೆ ಬಂದಾಗ ಅವರಲ್ಲಿ ನೈಸರ್ಗಿಕವಾದ ಬದಲಾವಣೆಗಳು ಆಗುತ್ತವೆ ಅಂತಹ ಸಂದರ್ಭದಲ್ಲಿಯೂ ಸಹ ಸದೃಢವಾದ ಶರೀರ ಆರೋಗ್ಯಕರವಾದ ಶರೀರವಿದ್ದರೆ ಯಾವುದೇ ರೋಗ ರುಜಿನಗಳು ಬರುವುದಿಲ್ಲ ಆದ್ದರಿಂದ ಹೆಣ್ಣು ಮಕ್ಕಳು ಚಿಕ್ಕವರಾಗಲಿ ದೊಡ್ಡವರಾಗಲಿ ಬಹು ಮುಖ್ಯವಾಗಿ ಪೌಷ್ಠಿಕ ಆಹಾರ ಸೇವನೆ ಮಾಡಬೇಕು” ಎಂದು ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾ ಅದ್ಯಕ್ಷರಾದ ಡಾ. ನಯನಾ ಹೇಮಂತ ಭಸ್ಮೇ ಹೇಳಿದರು.

ಅವರು ಪಟ್ಟಣದ ಇನಾಮತಿ ಪ್ಲಾಟ್‍ನ ಬಸವೇಶ್ವರ ದೇವಸ್ಥಾನದಲ್ಲಿ ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾ ವತಿಯಿಂದ ವೈದ್ಯಕೀಯ ಪ್ರಕೋಷ್ಟ ಇದರ ಸಂಯುಕ್ತಾಶ್ರಯದಲ್ಲಿ ಸೇವೆ ಮತ್ತು ಸಮರ್ಪಣಾ ಅಭಿಯಾನದಡಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಡಾ. ನಯನಾ ಹೇಮಂತ ಭಸ್ಮೇಯವರು ಗರ್ಬಿಣಿ ಬಾಣಂತಿಯರಿಗೆ ಹಣ್ಣು ಹಾಗೂ ಔಷಧಿಗಳನ್ನು ವಿತರಿಸಿದರು.

- Advertisement -

ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನ ಸಮುದಾಯ ಸಂಯೋಜಕರಾದ ಮೀನಾಕ್ಷೀ ಹಾಲೋಳ್ಳಿ ಮಾತನಾಡಿ “ಮಹಿಳೆಯರು ಆರೋಗ್ಯಕ್ಕೆ ಹಾನಿ ಉಂಟುಮಾಡುವ ಅಹಾರವನ್ನು ಸೇವನೆ ಮಾಡಬಾರದು ಕಾಯಿಪಲ್ಲೆ ತರಕಾರಿಗಳನ್ನು ಹೆಚ್ಚಿಗೆ ಸೇವಿಸಬೇಕು ಗರ್ಭಿಣಿ ಬಾಣಂತಿಯರು ಅತೀ ಜಾಗ್ರತೆ ವಹಿಸಿ ಊಟ ಉಪಹಾರ ಸೇವಿಸಬೇಕು ಹಾಗೂ ಇಂತಹ ಸಮಯದಲ್ಲಿ ಪೌಷ್ಟಿಕ ಅಹಾರ ಸೇವನೆ ಮಾಡಬೇಕು’ ಎಂದರು.

ಅತಿಥಿಗಳಾಗಿ ಸುನಿತಾ ಶಿಂತ್ರಿ ಮತ್ತು ಡಾ. ಜಯಶ್ರೀ ಹನಶಿ, ಗೌರಿ ಕಂಬಿ, ಇಂದಿರಾ ಬಜೇರಿ, ಶಿಕ್ಷಕಿ ಆನ್ನಪೂರ್ಣ ಕಬ್ಬೂರ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಅಂಗನವಾಡಿ ಶಿಕ್ಷಕಿಯರಾದ ಪ್ರೇಮಾ ಕಲಾದಗಿ, ಶೋಭಾ ಇನಾಮತಿ, ನಸರೀನ ಮುಜಾವರ, ಮಂಜುಳಾ ಸುಣಗಾರ,ಇಂದಿರಾ ದಿಂಡಲಕೊಪ್ಪ,ಶಂಕ್ರೆವ್ವ ಬಡಿಗೇರ, ಶೋಭಾ ಮ ದಳವಾಯಿ ಉಪಸ್ಥಿತರಿದ್ದರು

ಕಾರ್ಯಕ್ರಮದ ಪ್ರಾರಂಭದಲ್ಲಿ ರೇಣುಕಾ ಪೂಜಾರ ಸ್ವಾಗತಿಸಿದರು ಶಿಲ್ಪಾ ತೋಡಕರ ಕಾರ್ಯಕ್ರಮ ನಿರೂಪಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!