spot_img
spot_img

ಬೆಳಕಿನ ಹಬ್ಬ: ದೀಪಾವಳಿ

Must Read

spot_img
- Advertisement -

ಉತ್ಕೃಷ್ಟವಾದ ನಮ್ಮ ಪರಂಪರೆ ಹಾಗೂ ಸಂಸ್ಕೃತಿಯ ದ್ಯೋತಕವಾದ ಹಬ್ಬ ಹರಿದಿನಗಳು ಭಾರತೀಯರ ಜೀವನದ ಅವಿಭಾಜ್ಯ ಅಂಗಗಳೆಂದೇ ಹೇಳಬೇಕು. ಜೀವನದ ಅಮೂಲ್ಯವಾದ ಮೌಲ್ಯಗಳಿಗೆ ಆಗರವಾದ, ಬದುಕಿನ ಜಂಜಾಟ, ಕಷ್ಟಕಾರ್ಪಣ್ಯಗಳನ್ನು ಒಂದಿಷ್ಟಾದರೂ ಮರೆಯಿಸಿ, ಧಾರ್ಮಿಕ ಶ್ರದ್ಧಾ ಮನೋಭಾವನೆ ಯೊಂದಿಗೆ ಶಾಂತಿಯನ್ನಷ್ಟೇ ಅಲ್ಲದೆ, ಒಂದು ತೆರನಾದ ಮನೋರಂಜನೆಯನ್ನು ಒದಗಿಸಿ, ನಾವೆಲ್ಲ ಸಡಗರ, ಸಂಭ್ರಮದಿಂದ ಓಲಾಡುವಂತೆ ಮಾಡುತ್ತಿರುವ ನಮ್ಮ ಎಲ್ಲ ಹಬ್ಬಗಳಿಗೂ ಹಾಗೂ ನಮಗೂ ಅವಿನಾಭಾವ ಸಂಬಂಧ.

ಶಿವರಾತ್ರಿ, ಹೋಳಿ ಹುಣ್ಣಿಮೆ, ಯುಗಾದಿ, ಶ್ರಾವಣ ಮಾಸ, ನಾಗರ ಪಂಚಮಿ, ಗಣೇಶ ಚತುರ್ಥಿ, ದಸರಾ, ದೀಪಾವಳಿ, ಸಂಕ್ರಮಣ ಮುಂತಾದ ಹಬ್ಬಗಳೆಲ್ಲ ತನ್ನದೇ ಆದ ವೈಶಿಷ್ಟ್ಯವನ್ನು ಹಾಗೂ ಉದಾತ್ತವಾದ ಹಿನ್ನೆಲೆಯನ್ನು ಹೊಂದಿವೆ.

ಮನದ ಕತ್ತಲೆಯನ್ನು ದೂರ ಮಾಡಿ ಜ್ಞಾನಜ್ಯೋತಿಯನ್ನು ಬೆಳಗಿಸುವಂತಹ ಬೆಳಕಿನ ಹಬ್ಬವೇ ದೀಪಾವಳಿ : ಹಬ್ಬಗಳ ರಾಜ ಎಂದರೆ ತಪ್ಪಾಗಲಿಕ್ಕಿಲ್ಲ. ಈ ಬೆಳಕು ನಮ್ಮ ನಿಮ್ಮೆಲ್ಲರ ಬದುಕಿನಲ್ಲಿ ಜ್ಯೋತಿಯಾಗಿ ಪ್ರಜ್ವಲಿಸಿ ನಮಗೆಲ್ಲ ಸುಖ, ಶಾಂತಿ ಹಾಗೂ ನೆಮ್ಮದಿಯನ್ನು ನೀಡಲೆಂದು ಆಶಿಸುತ್ತ ತಮಗೆಲ್ಲ ತುಂಬು ಹೃದಯದಿಂದ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸುತ್ತೇನೆ. ಇದೇ ಸಂದರ್ಭದಲ್ಲಿ ಸಿಕ್ಕಾಪಟ್ಟೆ ಮದ್ದನ್ನು ಸುಡದೆ ಪರಿಸರದ ಬಗ್ಗೆಯೂ ಒಂದಿಷ್ಟು ಕಾಳಜಿಯನ್ನು ವಹಿಸುತ್ತೀರೆಂದು ನಂಬಿದ್ದೇನೆ. ನಮಸ್ಕಾರಗಳು.


- Advertisement -

ಶಿವಾನಂದ ಬ. ಬೆಳಕೂಡ

- Advertisement -
- Advertisement -

Latest News

ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ

ಬೆಳಗಾವಿ - ತಾಲೂಕಿನ ಹೊಸ ಇದ್ದಲಹೊಂಡ ಶಿವಾಪೂರ ಸರಕಾರಿ ಪ್ರೌಢ ಶಾಲೆಯ ವರ್ಗಾವಣೆಗೊಂಡ ಶಿಕ್ಷಕರ ಬೀಳ್ಕೊಡುಗೆ ಸಮಾರಂಭ ನಡೆಯಿತು. ಸಮಾರಂಭದ ಅಧ್ಯಕ್ಷತೆ ಶ್ರೀಮತಿ ಜಿ ಬಿ ಸುಗತೆ...
- Advertisement -

More Articles Like This

- Advertisement -
close
error: Content is protected !!
Join WhatsApp Group