ಪತ್ರಿಕಾ ವಿತರಕರಿಗೆ ಸಹಾಯ ಧನ ವಿತರಣೆ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

 

ಸಿಂದಗಿ: ಕೊರೋನಾದಿಂದ ಬಡವರ ಬದುಕು ಕಂಗೆಟ್ಟಿದೆ. ಕೂಲಿ ಕಾರ್ಮಿಕರು, ನಿರ್ಗತಿಕರು ಮತ್ತು ದಿನಗೂಲಿ ನೌಕರರು ನಿತ್ಯ ಬದುಕಿನ ಬಂಡಿಗಾಗಿ ಪರಿತಪಿಸುತ್ತಿದ್ದಾರೆ. ಇಂತಹ ದುಸ್ಥಿತಿಯಲ್ಲಿ ಪತ್ರಿಕೆ ಹಂಚುವ ಯುವಕರು ನಿತ್ಯ ಅನುಭವಿಸುತ್ತಿರುವ ಸ್ಥಿತಿ ಹೇಳತಿರದು ಅದನ್ನು ಮನಗಂಡು ನನ್ನ ಕೈಲಾದ ಸಹಾಯ ನಾನು ಮಾಡುತ್ತಿದ್ದೇನೆ ಎಂದು ನಿವೃತ್ತ ನೌಕರ ಶಿವಪ್ಪ ಗವಸಾನಿ ಹೇಳಿದರು.

ಪಟ್ಟಣದ ವಿದ್ಯಾನಗರದ ತಮ್ಮ ನಿವಾಸದಲ್ಲಿ ಸೋಮವಾರ ನಿತ್ಯ ಪತ್ರಿಕೆ ಹಂಚುತ್ತಿರುವ ಹತ್ತಾರು ಯುವಕರಿಗೆ ಸಹಾಯ ಧನವನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದರು.

- Advertisement -

ನಿತ್ಯ ಪ್ರತಿಕೆಗಳನ್ನು ಹಾಕಿ ಬೇರೊಂದು ಉದ್ಯೋಗದಲ್ಲಿರುವ ಅನೇಕ ಯುವಕರು ಕೊರೋನಾದ ಪರಿಣಾಮದಿಂದ ಉದ್ಯೋಗವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಅಂತವರು ಕೆಲಸ ಕಳೆದುಕೊಂಡು ಹತಾಶರಾಗಿರುವುದು ನನಗೆ ಕಂಡು ಬಂದಿದೆ ಅದನ್ನು ಅಲ್ಪ ಮಟ್ಟಿಗೆ ದೂರ ಮಾಡಲು ನನ್ನ ಕೈಲಾದಷ್ಟು ನಾನು ಸಹಕರಿಸಿದ್ದೇನೆ ಅಂಥ ಯುವಕರ ಶಿಕ್ಷಣ ಸೇರಿದಂತೆ ಅನೇಕ ರೀತಿಯಲ್ಲಿ ಸಹಾಯ ಮಾಡಲು ನಾನು ಸಿದ್ದನಿದ್ದೇನೆ ಎಂದ ಅವರು ಕೊರೋನಾ ಜೊತೆಗೆ ನಾವೆಲ್ಲ ಹೊಂದಾಣಿಕೆ ಯಾಗಬೇಕಿದೆ. ಸರ್ಕಾರದ ನಿಯಮವನ್ನು ನಿಯಮ ಬದ್ದವಾಗಿ ಪಾಲಿಸಿ ಈ ದೇಶವನ್ನು ಕೊರೋನಾ ದಿಂದ ಮುಕ್ತ ಮಾಡೋಣ ಎಂದರು.

ಈ ಸಂದರ್ಭದಲ್ಲಿ ಕಾನಿಪಾ ತಾಲೂಕಾಧ್ಯಕ್ಷ ಆನಂದ ಶಾಬಾದಿ ಮಾತನಾಡಿ, ನಿವೃತ್ತ ನೌಕರ ಶಿವಪ್ಪ ಗವಸಾನಿ ಅವರು ಸಂಕಷ್ಟದಲ್ಲಿರುವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಲೇ ಬಂದವರು. ಈ ಹಿಂದೆ ಕೊರೋನಾ ಒಂದನೇ ಅಲೆಯಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಹಶೀಲ್ದಾರ ಮೂಲಕ ರೂ 25 ಸಾವಿರದಷ್ಟು ಹಣವನ್ನು ನೀಡಿ ಮಾನವೀಯತೆ ಮೆರೆದವರು. ಸದ್ಯ ಪತ್ರಿಕೆ ಹಂಚುವ ಯುವಕರಿಗೆ ಧನ ಸಹಾಯ ನೀಡಿ ಅವರ ಕುಟುಂಬಕ್ಕೆ ಆಸರೆಯಾಗಿದ್ದಾರೆ ಅವರ ಸೇವೆ ನಿಜಕ್ಕೂ ಶ್ಲಾಘನೀಯವಾಗಿದೆ .ತಾಲೂಕಾ ಪತ್ರಕರ್ತರ ಸಂಘದ ಪರವಾಗಿ ಮತ್ತು ಪತ್ರಿಕಾ ವಿತರಕರ ಪರವಾಗಿ ಅವರಿಗೆ ಅಭಿನಂದನೆಗಳು ಎಂದರು.

ಈ ಸಂದರ್ಭದಲ್ಲಿ ರಾಕೇಶ ಪಟ್ಟಣಶೆಟ್ಟಿ, ಪ್ರದೀಪ ಪಟ್ಟಣಶೆಟ್ಟಿ ಪತ್ರಿಕೆ ವಿತರಕರಾದ ನಿಂಗಣ್ಣ ಯಾಳಗಿ, ಮುತ್ತು ಪೂಜಾರಿ, ದಾನಪ್ಪ ಅಕ್ಕಲಕೋಟ, ರಫೀಕ್ ಮನಗೂಳಿ, ಗಂಗಾಧರ ಮಡಿಕೇಶ್ವರ, ಬಸವರಾಜ ಹೂಗಾರ, ಪಿ.ಕುಲಕರ್ಣಿ, ಜಗು ಹವಳಗಿ ಸೇರಿದಂತೆ ಅನೇಕರು ಇದ್ದರು,

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!