ಬೆಳಗಾವಿ – 12ನೇಯ ಶತಮಾನದಲ್ಲಿ ಸ್ತ್ರೀಯರಿಗೆ ಸ್ವಾತಂತ್ರ್ಯವನ್ನು ನೀಡಿದವರು ವಿಶ್ವಗುರು ಬಸವಣ್ಣನವರು ಎಂದು ಕಸಾಪ ಗೋಕಾಕ ಅಧ್ಯಕ್ಷೆ ಶರಣೆ ಭಾರತಿ ಮದಭಾವಿ ಹೇಳಿದರು.
ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದಿಂದ ಸಹ್ಯಾದ್ರಿನಗರದ ಶರಣ ದೀಪಕ ಯಲಿಗಾರ ದಂಪತಿಗಳ ಮನೆಯಲ್ಲಿ ಏರ್ಪಡಿಸಲಾಗಿದ್ದ ಮನೆ ಮನಂಗಳಲ್ಲಿ ವಚನ ಸಂದೇಶ ಕಾರ್ಯಕ್ರಮದಲ್ಲಿ ಅವರು ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ವಿಶ್ವಗುರು ಬಸವಣ್ಣನವರ ೩೩ ಶರಣೆಯರು ವಚನ ಬರೆದರು, ಅಕ್ಕ ಮಹಾದೇವಿ ಎಷ್ಟೊಂದು ತೊಂದರೆಗಳನ್ನು ಅನುಭವಿಸಿ ತನ್ನ ಗುರುವಿನ ಮಾರ್ಗದರ್ಶನದಲ್ಲಿ ಕದಳಿ ಬನಕ್ಕೆ ಹೋಗಿ ಶ್ರೀಶೈಲಕ್ಕೆ ಹೋಗಿ ಚೆನ್ನ ಮಲ್ಲಿಕಾರ್ಜುನನೇ ತನ್ನ ಪತಿಯೆಂದು ಭಕ್ತಿಪರವಶಳಾಗಿ ಅಲ್ಲಿಯೇ ಲೀನವಾದಳು ಎಂದು ಹೇಳಿ ಶರಣೆಯರಾದ ಬೋಂತಾದೇವಿ, ನಾಗಲಾಂಬಿಕಾ, ಮುಕ್ತಾಯಕ್ಕ,ನಿಂಬೆಕ್ಕ, ಶರಣೆಯರ ಬಗ್ಗೆ ತಿಳಿಸಿದರು.
ಷಟ್ ಸ್ಥಲ ಧ್ವಜಾರೋಹಣವನ್ನು ಶರಣೆ ಶಾಂತಾ ಗುರುಪಾದಪ್ಪ ಯಲಿಗಾರ ನೆರವೇರಿಸಿದರು ವಚನ ಪ್ರಾರ್ಥನೆಯನ್ನು ಶರಣೆ ಶೋಭಾ ಹಾಗೂ ಶರಣ ಶರಣೆಯರು ಮಾಡಿದರು.ಶ್ರಾವಣ ಮಾಸದಲ್ಲಿ ಅಷ್ಟೇ ಅಲ್ಲ 365 ದಿವಸ ಮಾಡಲು ವಿನಂತಿಸಿದರು,
ನಂತರ ಉಪನ್ಯಾಸ ನೀಡಲು ಶರಣೆ ಮೈತ್ರಾಯಿನಿ ಗದಿಗೆಪ್ಪ ಗೌಡರ ಆಗಮಿಸಿ ಮಾತನಾಡಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಣೆ ಮಾಡಿದ್ದರಿಂದ ಆಗದವರು ಟೀಕೆಗಳನ್ನು ಮಾಡಿದರು. ಇದಕ್ಕಿಂತ ೧೨ನೇ ಶತಮಾನದಲ್ಲಿ ಸಾಕಷ್ಟು ತೊಂದರೆಗಳು ಬಂದರೂ ಧೃತಿಗೆಡದೆ ೭೭೦ ಅಮರಂಗಳಗೂಡಿ ಕಾಯಕವೇ ಕೈಲಾಸ ಎಂಬುದರ ವಚನ ಸಾರದೋಂದಿಗೆ ಕೆಳಗಿದ್ದವರನ್ನು ಮೇಲೆತ್ತಿದ ಕೀರ್ತಿ ಗುರು ಬಸವಣ್ಣನವರು, ಬಿದ್ದವರನ್ನು ಎತ್ತರಕ್ಕೆ ಎರಿಸಿದ ಶಿವಯೋಗಿ ಬಸವಣ್ಣನವರು, ಲಿಂಗಾಯತ ಧರ್ಮ ಸಂಸ್ಥಾಪಕ ಬಸವಣ್ಣನವರು, ವಚನಗಳೇ ಧರ್ಮಗ್ರಂಥ ದುಡಿಯುವವರಪರ ಬಸವಣ್ಣನವರು ಕಾಯಕ,ದಾಸೋಹ ,ಊಳುವವ ತೋಡುವ ಬದುಕುವ ಸಂಸ್ಕಾರ ಜೀವನವನ್ನು ಕೊಡುತ್ತದೆ. ೧೨ನೇಯ ಶತಮಾನದಲ್ಲಿ ಪ್ರಶ್ನೆ ಮಾಡಿ ಅವರಿಂದ ಉತ್ತರವನ್ನು ಹುಡುಕಿದರು. ಅದರೊಂದಿಗೆ ಬದುಕುವ ದಾರಿ ತೋರಿಸಿದ ಬಸವಣ್ಣನವರು, ಮೌಢ್ಯತೆಯನ್ನು ತಿರಸ್ಕರಿಸಿ ಬದುಕುವ ದಾರಿ ತೋರಿಸಿದ ಬಸವಣ್ಣನವರು ಎಂದು ತಿಳಿಸಿದರು
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷೆ ಶರಣೆ ಮಂಗಲಾ ಶ್ರೀ. ಮೆಟಗುಡ್ಡ, ಕಾರ್ಯದರ್ಶಿಎಂ. ವಾಯ್. ಮೆಣಸಿನಕಾಯಿ, ಸಂ. ಕಾರ್ಯದರ್ಶಿ ವೀರಭದ್ರ. ಅಂಗಡಿ. ಶೆಟ್ಟಿ,ಕುಂದ್ರಾಳ,ಹಾವನ್ನಗೋಳ ವಸಂತಕ್ಕಾ,ಅಮ್ಮನಗಿ,ಬಿ ಡಿ ಪಾಟೀಲ, ಗುರುವಣ್ಣವರ ಮುಂತಾದವರು ಉಪಸ್ಥಿತರಿದ್ದರು ಕಟ್ಟಿಮನಿ ನಿರೂಪಿಸಿದರು. ಶರಣೆ ಶೋಭಾ ಮಂಗಲ ಮಾಡಿದರು.ಪ್ರಸಾದ ದಾಸೋಹದೊಂದಿಗೆ ಕಾರ್ಯಕ್ರಮ ಮುಗಿಯಿತು.