ಸಿಂದಗಿ: ಮತಕ್ಷೇತ್ರದಲ್ಲಿ ಹಾಳಾಗಿ ಹೋಗಿದ್ದ ಅನೇಕ ರಸ್ತೆಗಳ ಸುಧಾರಣೆಯನ್ನು ಮೊದಲ ಆದ್ಯತೆಯಾಗಿ ತೆಗೆದುಕೊಂಡು ರಸ್ತೆಗಳ ಸುಧಾರಣೆ ಮಾಡಲಾಗುತ್ತಿದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ದೇವಣಗಾಂವ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ದೇವಣಗಾಂವ ಕೇಸಾಪುರ ರಸ್ತೆ ಹಾಗೂ ದೇವಣಗಾಂವ ಗ್ರಾಮದ ನೂತನ ಗ್ರಂಥಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕರ್ನಾಟಕ ನೀರಾವರಿ ನಿಗಮದಿಂದ ಸುಮಾರು 12 ಹೊಸ ರಸ್ತೆಗಳನ್ನು ನಿರ್ಮಿಸಲಾಗುತ್ತಿದ್ದು ಈ ರಸ್ತೆಗಳು ಹೆಚ್ಚಾಗಿ ರೈತರ ಹೊಲಗಳು ಸೇರಿದಂತೆ ಗ್ರಾಮ ಗ್ರಾಮಗಳ ನಡುವೆ ಹೆಚ್ಚಿನ ಸಂಪರ್ಕ ಕಲ್ಪಿಸುವ ರಸ್ತೆಗಳಾಗಿವೆ ಎಂದರು.
ಜಿಲ್ಲಾ ತಳವಾರ ಸಮಾಜದ ಮುಖಂಡ ಶರಣಪ್ಪ ಕಣಮೇಶ್ವರ, ಯುವ ಮುಖಂಡ ಸಿದ್ದಾರ್ಥ ಮೇಲಿನಕೇರಿ ಎಇಇ ನಿಜಲಿಂಗಪ್ಪ ಭಂಡಾರಿ ಮಾತನಾಡಿದರು.
ಜಿಪಂ ಮಾಜಿ ಸದಸ್ಯ ಕಾಶಿನಾಥ ಗಂಗನಳ್ಳಿ, ತಾಪಂ ಮಾಜಿ ಸದಸ್ಯ ಶಂಕರಲಿಂಗ ಕಡ್ಲೇವಾಡ, ಸಿದ್ದಾರಾಮ ಹಂಗರಗಿ, ವಿರುಪಾಕ್ಷಿ ಗಂಗನಳ್ಳಿ, ಬಸವರಾಜ ತಾವರಖೇಡ, ಪ್ರಕಾಶ ಭೂಸನೂರ, ನಿಂಗಪ್ಪ ಅಳ್ಳಗಿ, ರಮೇಶ ಸೊಡ್ಡಿ, ಬಾಬುಗೌಡ ಪಾಟೀಲ, ಗಾಲಿಬ ಸೋಮನಾಯಕ, ಬಸಣ್ಣ ಯಾತನೂರ, ಎಇ ವಿಜಯಕುಮಾರ ಪಾಟೀಲ, ಸಂತೋಷ ಪಾಟೀಲ, ಸುಧೀರ ಸಂಗಾಣಿ, ಅರುಣಕುಮಾರ ಎಇ, ದತ್ತಾತ್ರೇಯ ಸೊನ್ನ ಇದ್ದರು.