ಬೀದರ: ಬೀದರ್ ನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಲಿದ್ದು ಸಾವಿರಾರು ಎಕರೆ ಹೊಲ ಜಲಾವೃತವಾಗಿದೆ. ತನ್ನ ಹೊಲವೂ ಮಳೆಗೆ ಮುಳುಗಿದ್ದರಿಂದ ದುಃಖಿತನಾದ ರೈತ ಮಳೆಯನ್ನೂ ಲೆಕ್ಕಿಸದೆ ಹೊಲದಲ್ಲಿಯೇ ಕಣ್ಣೀರು ಹಾಕುತ್ತಾ ಕುಳಿತಿರುವುದು ಮನ ಕಲಕುವಂತಿದೆ.
ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಹಾಲಹಿಪ್ಪರಗಾ ಗ್ರಾಮದ ರೈತ ರತಿಕಾಂತ ಮಾಧ್ಯಮ ದವರ ಮುಂದೆ ತನ್ನ ಕಷ್ಟ ಹೇಳಿ ಕೊಂಡಿದ್ದು ನನ್ನ ಹದಿನೈದು ಎಕರೆ ಹೊಲದಲ್ಲಿ ಎಂಟು ಎಕರೆ ಹೊಲ ನೀರಿನಲ್ಲಿ ಮುಳುಗಿ ಹೋಗಿದೆ ಬೆಳೆ ಎಲ್ಲ ನಾಶವಾಗಿದೆ ಸರ್ಕಾರ ಪರಿಹಾರ ನೀಡಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.
ಮಳೆ ಮಾತ್ರ ಧಾರಾಕಾರವಾಗಿ ಬೀಳುತ್ತಿದೆ ರೈತ ಮಾತ್ರ ಮಳೆಯನ್ನೂ ಲೆಕ್ಕಿಸದೆ ತನ್ನ ಹೊಲದಲ್ಲಿ ಛತ್ರಿ ಕೈಯಲ್ಲಿ ಹಿಡಿದು ಕೊಂಡು ಹೊಲದ ಕಟ್ಟೆ ಮೇಲೆ ಕುತು ಕೊಂಡಿದ್ದ. ದೃಶ್ಯ ನೋಡುವವರ ಕಣ್ಣಲ್ಲಿ ನೀರು ತರಿಸುತ್ತಿದೆ.
ತಾಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಜಡಿ ಮಳೆಗೆ ರೈತರ ಬಹುತೇಕ ಬೆಳೆ ಹಾನಿಗೊಳಗಾಗಿರುವುದು ಕಂಡುಬಂದಿದೆ ಜಂಬಗಿ ಗ್ರಾಪಂ ವ್ಯಾಪ್ತಿಯ ಮಹಾರಾಜವಾಡಿ ಗ್ರಾಮದ ಬಹುತೇಕ ರೈತರ ಹೊಲದಲ್ಲಿ ನೀರು ನಿಂತಿದ್ದು ಬೆಳೆ ನೋಡಿ ರೈತ ಕಣ್ಣೀರು ಹಾಕುವ ಪರಿಸ್ಥಿತಿ ಉಂಟಾಗಿದೆ.
ರೈತ ನಾಗೋಂಡ ಮಾಧ್ಯಮದವರೊಡನೆ ಮಾತನಾಡಿ ಸಕಾ೯ರ ನಮ್ಮ ಕಷ್ಟಗಳನ್ನು ನೋಡಿ ಸಹಾಯ ನೀಡಲು ಮುಂದಾಗಲಿ ಎಂದು ಮಾಧ್ಯಮ ಮುಖಾಂತರ ತಮ್ಮ ಅಳಲು ತೋಡಿ ಕೊಂಡರು.
ಬೀದರ ಜಿಲ್ಲೆಯಲ್ಲಿ ಅತಿವೃಷ್ಟಿ ಅನಾವೃಷ್ಟಿಗಳಿಂದಾ ರೈತರಿಗೆ ಯಾವ ರೀತಿಯಲ್ಲಿಯೂ ಸಂಕಷ್ಟಗಳು ತಪ್ಪುತ್ತಿಲ್ಲ. ಕೃಷಿ ಇಲಾಖೆ, ರಾಜ್ಯ ಸರ್ಕಾರ ಇತ್ತ ಗಮನಹರಿಸಬೇಕಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ