spot_img
spot_img

ಫ್ಲೈಯಿಂಗ್ ಸಿಕ್ಖ್ ಮಿಲ್ಕಾ ಸಿಂಗ್ ಇನ್ನಿಲ್ಲ

Must Read

- Advertisement -

ಫ್ಲೈಯಿಂಗ್ ಸಿಖ್ ಖ್ಯಾತಿಯ ಮಾಜಿ ಅಥ್ಲೆಟಿಕ್ ಪಟು ಮಿಲ್ಕಾ ಸಿಂಗ್ ಕೋವಿಡೋತ್ತರ ದುಷ್ಪರಿಣಾಮಗಳಿಂದಾಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ೯೧ ವರ್ಷ ವಯಸ್ಸಾಗಿತ್ತು.

ಅವರು ಈ ಮೊದಲು ಕೊರೋನಾದಿಂದ ಬಳಲುತ್ತಿದ್ದರು. ಆದರೆ 2 ದಿನದ ಹಿಂದೆ ಕೊರೋನಾ ನೆಗೆಟಿವ್ ಬಂದಿತ್ತು. ಅವರಿಗೆ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಕಾಲೇಜಿನಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೂ ಬದುಕುಳಿಯಲಿಲ್ಲ. ಸುಮಾರು ಒಂದು ತಿಂಗಳ ಕಾಲ ಅವರು ಆಸ್ಪತ್ರೆಯಲ್ಲಿದ್ದರು.

ಕಳೆದ ಮೇ ೨೪ ರಂದು ಕೋವಿಡ್ ನ್ಯುಮೋನಿಯಾ ಚಿಕಿತ್ಸೆಗಾಗಿ ಮಿಲ್ಕಾ ಸಿಂಗ್ ಅವರನ್ನು ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಇಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನಹೊಂದಿದ್ದಾರೆ. ಈಗ್ಗೆ ಒಂದು ವಾರದ ಹಿಂದೆಯೇ ಮಿಲ್ಕಾ ಸಿಂಗ್ ಅವರ ಪತ್ನಿ ನಿರ್ಮಲ್ ಅವರೂ ಕೋವಿಡೋತ್ತರ ದುಷ್ಪರಿಣಾಮ ಗಳಿಂದಾಗಿ ಮೃತಪಟ್ಟಿದ್ದರು.

- Advertisement -

ಮಿಲ್ಕಾ ಸಿಂಗ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಮಿಲ್ಕಾ ಸಿಂಗ್ ಜಿಯವರು ಅದ್ಭುತ ಕ್ರೀಡಾಪಟುವಾಗಿದ್ದರು. ಅಸಂಖ್ಯ ಕ್ರೀಡಾಭಿಮಾನಿಗಳ ಹೃದಯದಲ್ಲಿ ಅವರು ಸ್ಥಾನ ಪಡೆದಿದ್ದರು ಅವರ ನಿಧನದಿಂದಾಗಿ ದುಃಖವಾಗಿದೆ ಎಂದು ಅವರು ಹೇಳಿದ್ದಾರೆ

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group