ವ್ಯಾಮೋಹವಿಲ್ಲದ ಪ್ರೇಮ ನಿರ್ಭರವಿರಲಿ, ಭೀಮ ಸಾಹಸವಿರಲಿ, ಹಗೆತನವನಳಿದು ನೇಮನಿಷ್ಠೆಗಳಿರಲಿ, ಡಂಬಕರಿಣತೆ ಬಿಟ್ಟು ಸೌಮ್ಯತೆ ಎಲ್ಲೆಡೆ ಇರಲಿ ಮಂಕು ತಿಮ್ಮ. ಎಂಬ ಕವಿ ವಾಣಿ ನಮ್ಮ ಈಶ್ವರ ಚಂದ್ರ ಶಿವಪುತ್ರಪ್ಪ ಬೇಟಗೇರಿಯವರನ್ನು ಕಂಡು ಹೇಳಿದಂತಿದೆ.
ಈಶ್ವರ ಚಂದ್ರ ಬೇಟಗೇರಿ ತಮ್ಮ ಹೆಸರಿಗೆ ತಕ್ಕಂತೆ ಶಾಂತ ಸ್ವಭಾವದ, ಮುಗ್ದತೆ ತುಂಬಿದ ಚಂದ್ರನ ಬೆಳದಿಂಗಳಿನಂತೆ ಎಲ್ಲರಲ್ಲೂ ತಂಪು ಸೂಸುವ, ಹಾಲಲ್ಲಿ ಸಕ್ಕರೆ ಬೆರೆತಂತೆ ಎಲ್ಲರಲ್ಲಿ ಬೇರೆಯುವ ಸೌಜನ್ಯ ಮೂರ್ತಿ, ಸಕಲರಿಗೂ ಲೇಸನೆ ಬಯಸುವ ಸಹೃದಯಿ ಕರುಣಾ ಮೂರ್ತಿ ಸದ್ದರ್ಮಯೋಗಿ, ವಿನಯಶಾಲಿ. ಅವರನ್ನು ಕಂಡರೆ ಮನಕ್ಕೆ ಆನಂದ ಸಹೋದರನಂತೆ ಬೆನ್ನ ಹಿಂದೆ ನಿಂತು ತಿದ್ದಿ ಹೇಳುವ ಅವರ ಹಿತನುಡಿ ಕರ್ಣಕ್ಕೆ ಆನಂದ.
ವೇದಿಕೆಯಲಿ ನಿಂತರೆ ನಿರೂಪಣೆಯಿಂದ ಹಿಡಿದು ಸ್ವಾಗತವಾಗಲಿ, ವಂದನಾರ್ಪಣೆಯಾಗಲಿ ಯಾವುದನ್ನು ಕೊಟ್ಟರು ಅತ್ಯಂತ ಶ್ರದ್ಧೆ ಯಿಂದ ನಿರ್ವಹಿಸುವ ಇವರು ಬಿ.ಎಸ್.ಎನ್.ಲ್ ಉದ್ಯೋಗಿಯಾಗಿಯು ಯಾವುದೇ ವೇದಿಕೆಯ ಕಾರ್ಯಕ್ರಮ ವಿರಲಿ ಕುರ್ಚಿತೆಗೆದಿಡುವುದರಿಂದ ಹಿಡಿದು ಕಾಡ್೯ ಹಂಚುವ ತನಕಯಾವ ಹಮ್ಮು ಬಿಮ್ಮಿಲ್ಲದೆ ಕೆಲಸ ಮಾಡುವ ರೀತಿ ಎಲ್ಲರಿಗೂ ಒಂದು ರೀತಿಯ ಮಾರ್ಗದರ್ಶಕ.
ಇವೆಲ್ಲಕ್ಕಿಂತ ಹೆಚ್ಚಾಗಿ ಗೋಕಾವಿ ನಾಡಿನ ಹೆಸರನ್ನು ರಾಜ್ಯಾದ್ಯಂತ ಹೆಸರುವಾಸಿಯಾಗುವಂತೆ ಜಾನಪದ ಕಲೆ ಬಯಲಾಟ(ಸಣ್ಣಾಟ) ವನ್ನು ಪರಿಚಯಿಸಿದ ಹೆಮ್ಮೆಯ ಕಲಾವಿದರಿವರು ಅವರು ಬಯಲಾಟದಲ್ಲಿ ಯಾವ ಪಾತ್ರವಾದರೂ ಸೈ ಅದಕ್ಕೆ ನ್ಯಾಯ ಒದಗಿಸುವಂತಹ ಕಲಾವಿದ.
ಕೃಷ್ಣ ನ ಪಾತ್ರ ಹಾಕಿದರೆ ಥೇಟ ಕೃಷ್ಣನೇ ಸತ್ಯ ಭಾಮೆ,ಕೊರವಂಜಿ, ಸಾವಿತ್ರಿ, ಸೀತೆಯ ಪಾತ್ರಗಳನ್ನು ಹಾಕಿದರೆ ಥೇಟ ಅವರಂತೆಯೇ ಆ ಪಾತ್ರಗಳು ಅವರಲ್ಲಿ ಆವ್ಹಾನೆ ಆಗಿಬಿಡುತ್ತವೆ. ಅಷ್ಟು ತನ್ಮಯವಾಗಿ ಪಾತ್ರದಲ್ಲಿ ಪಾತ್ರವಾಗಿ ಜೀವಿಸಿಬಿಡುತ್ತಾರೆ. ಅವರು ನಾಟಕಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಎಕಪಾತ್ರಾಭಿನಯದಲ್ಲಿ ವೀವೇಕಾನಂದರ ಪಾತ್ರದಲ್ಲಿ ಅವರನ್ನು ನೋಡುವುದೇ ಚೆಂದ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ೨೦ ಸಾಹಿತ್ಯ ಕೃತಿಗಳನ್ನು ಸಾಹಿತ್ಯಲೋಕಕ್ಕೆ ಅರ್ಪಿಸಿದ್ದಾರೆ. ಇನ್ನು ಎಂಟು ಕೃತಿಗಳು ಅಚ್ಚಿನಲ್ಲಿವೆ. ಪ್ರಕಟಣೆಗೆ ಸಜ್ಜಾಗಿವೆ. ಅಷ್ಟೇ ಅಲ್ಲದೆ ಸಾಹಿತ್ಯ ರಚನೆಯೊಂದಿಗೆ ಕವಿಗೋಷ್ಠಿ, ಉಪನ್ಯಾಸ, ಸಂಗೀತ ನಿರ್ಣಾಯಕರಾಗಿ ವಿವಿಧೆಡೆ ಕಾರ್ಯಕ್ರಮ ಗಳಲ್ಲಿ ಭಾಗವಹಿಸುವುದರೊಂದಿಗೆ ಜಾನಪದ ಜಾರ್ಯವು ಮುಂದುವರೆದಿದೆ. ಇವರು ಅಭಿನಯಿಸಿದ ಬಯಲಾಟ ಕಾರ್ಯಕ್ರಮ ಚಂದನ ಟಿವಿಯಲ್ಲಿ ಮತ್ತು ದೂರದರ್ಶನ ದಲ್ಲಿ ಪ್ರಸಾರಗೊಂಡಿದೆ.
ಅಥಣಿಯಲ್ಲಿ ಜರುಗಿದ ಗಡಿ ನಾಡೋತ್ಸವದಲ್ಲಿ ಇವರಿಗೆ ಪ್ರಶಸ್ತಿ ದೊರಕಿದೆ. ಅಷ್ಟೇ ಅಲ್ಲದೇ ಅನೇಕ ಪ್ರಶಸ್ತಿ ಗಳು ಇವರ ಮುಡಿಗೇರಿವೆ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿತಗೊಂಡಿದ್ದಾರೆ.
ಇಂತಹ ಒಬ್ಬ ಅತ್ಯುತ್ತಮ ಕಲಾವಿದ, ಲೇಖಕ, ನಾಟಕಕಾರ ಈಶ್ವರ ಚಂದ್ರ ಬೆಟಗೇರಿ ಯವರಿಗೆ ಬೆಟಗೇರಿ ಯವರಿಗೆ ಕನ್ನಡ ಸಾಹಿತ್ಯ ಸಮೇಳನದ ಸಮ್ಮೇಳನಾಧ್ಯಕ್ಷರ ಗೌರವ ದೊರಕಿದ್ದು ನಮ್ಮ ಗೋಕಾವಿ ನಾಡಿಗೆ ಹೆಮ್ಮೆ ತಂದ ವಿಷಯ.
ಅವರಿಗೆ ಶುಭವಾಗಲಿ
ರಜನಿ ಅಶೋಕ ಜೀರಗ್ಯಾಳ ರಾಜ್ಯಾಧ್ಯಕ್ಷರು ಸಿರಿಗನ್ನಡ ಮಹಿಳಾ ವೇದಿಕೆ