Homeಸುದ್ದಿಗಳುಐಟಿಐ ತರಬೇತಿ ಮುಗಿಸಿದ ವಿದ್ಯಾರ್ಥಿಗಳಿಗೆ ಟೊಯೊಟಾ ಕಂಪನಿಯಲ್ಲಿ ಅಪ್ರೈಂಟಿಸ್ ಶಿಪ್ ತರಬೇತಿಗಾಗಿ ಸುವರ್ಣಾವಕಾಶ

ಐಟಿಐ ತರಬೇತಿ ಮುಗಿಸಿದ ವಿದ್ಯಾರ್ಥಿಗಳಿಗೆ ಟೊಯೊಟಾ ಕಂಪನಿಯಲ್ಲಿ ಅಪ್ರೈಂಟಿಸ್ ಶಿಪ್ ತರಬೇತಿಗಾಗಿ ಸುವರ್ಣಾವಕಾಶ

ಮೂಡಲಗಿ: ಅರಭಾವಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ)ದಲ್ಲಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಇವರಿಂದ ಅಪ್ರೈಂಟಿಸ್ ಶಿಪ್ ತರಬೇತಿಗಾಗಿ ಆಯ್ಕೆ ಮಾಡಲು ಜಿಟಿಟಿಸಿ ಕಾಲೇಜಿನಲ್ಲಿ ಫೆ.೭ರಿಂದ ಫೆ.೧೧ರವರೆಗೆ ಐದು ದಿನಗಳ ಕಾಲ ತರಬೇತಿ ನಡೆಯುತ್ತಿದ್ದು, ತರಬೇತಿಯ ನಂತರ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಟೊಯೊಟಾ ಕಂಪನಿಗೆ ಕಳುಹಿಸಿಕೊಡಲಾಗುವುದು ಎಂದು ಜಿಟಿಟಿಸಿ ಪ್ರಾಂಶುಪಾಲರಾದ ಉಮೇಶ ಎಸ್. ಬಡಕುಂದ್ರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ

ಆಸಕ್ತರು ತಮ್ಮ ವಯಸ್ಸು ವಿದ್ಯಾರ್ಹತೆಯ ದಾಖಲಾತಿಗಳು ಹಾಗೂ ವೈಯುಕ್ತಿಕ ವಿವರಗಳೊಂದಿಗೆ ಅರಭಾವಿಯ ನಾಡ ಕಛೇರಿ ಹತ್ತಿರ ಇರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು ಹೆಚ್ಚಿನ ಮಾಹಿತಿಗಾಗಿ ಮೊ. ಸಂಖ್ಯೆ ೯೫೩೮೫೭೦೯೫೦ ಮತ್ತು ೮೭೯೨೫೧೯೧೭೮ ಗೆ ಸಂಪರ್ಕಿಸಿ ಬಹುದು ಎಂದು ಎಂದು ಜಿಟಿಟಿಸಿ ಪ್ರಾಂಶುಪಾಲರಾದ ಉಮೇಶ ಎಸ್ ಬಡಕುಂದ್ರಿ ಹಾಗೂ ಟೊಯೊಟಾ ಕಂಪನಿಯ ತರಬೇತಿ ಅಧಿಕಾರಿ ಚಿದಾನಂದ ಹಿರೇಮಠ ತಿಳಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group