ಬೆಳಗಾವಿ: ರಾಮದುರ್ಗ ತಾಲೂಕಿನ ಹಿರೇಕೊಪ್ಪ ಕೆ.ಎಸ್ ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ಡಾ.ಡಿ.ಎಸ್ ಕರ್ಕಿ ಸಾಹಿತ್ಯ ಭವನದ ಸಭಾಂಗಣ ನಿರ್ಮಿಸಲು ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಘಟಕದಿಂದ ರೂ,7 ಲಕ್ಷ ಅನುದಾನವನ್ನು ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಅವರು ಬಿಡುಗಡೆ ಮಾಡಿದರು.
ಕಾಮಗಾರಿಯನ್ನು ಪ್ರಾರಂಭಿಸಲು ನಗರದ ಹಿಂಡಲಗಾ-ಗಣೇಶಪೂರ ರಸ್ತೆಯಲ್ಲಿರುವ ಕರ್ನಾಟಕ ರೂರಲ್ ಡೆವೆಲಪ್ಮೆಂಟ ಆಂಡ್ ಇನ್ಫ್ರಾ ಸ್ಟಕ್ಚರ್ ಇಲಾಖೆ, ಬೆಳಗಾವಿಗೆ (ಭೂ ಸೇನಾ ನಿಗಮ) ಗುತ್ತಿಗೆ ನೀಡಿದ್ದು ರೂ.ಏಳು ಲಕ್ಷದ ಚೆಕ್ಕನ್ನು ನಿಗಮದ ಕಾರ್ಯಪಾಲಕ ಅಭಿಯಂತರರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಎಂ.ವಾಯ್.ಮೆನಸಿನಕಾಯಿ, ರಾಮದುರ್ಗ ತಾಲೂಕು ಕಸಾಪ ಅಧ್ಯಕ್ಷ ಪಾಂಡುರಂಗ ಜಟಗನ್ನವರ, ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿ.ಎಂ ಅಂಗಡಿ, ಎಂ.ಬಿ.ಮರಲಕ್ಕನ್ನವರ ಉಪಸ್ಥಿತರಿದ್ದರು.
ಮಾಹಿತಿ-ವರದಿ:
ಆಕಾಶ್ ಅರವಿಂದ ಥಬಾಜ
ಜಿಲ್ಲಾ ಮಾಧ್ಯಮ ಪ್ರತಿನಿಧಿ
ಕನ್ನಡ ಸಾಹಿತ್ಯ ಪರಿಷತ್,
ಬೆಳಗಾವಿ
9448634208
9035419700
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಎಂ.ವಾಯ್.ಮೆನಸಿನಕಾಯಿ,
ಜಿಲ್ಲಾ ಗೌರವ ಕಾರ್ಯದರ್ಶಿ
ಕನ್ನಡ ಸಾಹಿತ್ಯ ಪರಿಷತ್,
ಬೆಳಗಾವಿ
9742192615