spot_img
spot_img

ಅಕ್ರಮವಾಗಿ ಸಾಗಿಸುತ್ತಿದ್ದ ರೂ. 11 ಲಕ್ಷ ಮೌಲ್ಯದ 92 ಕೆ.ಜಿ ಒಣ ಗಾಂಜಾವನ್ನು ಜಪ್ತಿ

Must Read

- Advertisement -

ಬೀದರ – ಗಡಿ ಜಿಲ್ಲೆ ಬೀದರ್ ನ ಅಬಕಾರಿ ಇಲಾಖೆ ಭರ್ಜರಿ ಭೇಟೆ ಆಡಿದ್ದು ಅಕ್ರಮವಾಗಿ ಸಾಗಿಸಲಾಗುತ್ತಿದ್ದ 92 ಕಿಲೋ ಗಾಂಜಾ ವಶಪಡಿಸಿಕೊಂಡು ಖದೀಮರನ್ನು ವಶಕ್ಕೆ ಪಡೆದಿದ್ದಾರೆ.

ಬೀದರ್ ನಲ್ಲಿ ಬಿಸಿಲಿನ ತಾಪಮಾನ ಏರುತ್ತಿರುವ ಮಧ್ಯಾಹ್ನದ ಸಮಯದಲ್ಲಿ ಯಾರೂ ತಮ್ಮನ್ನು ಗಮನಿಸಲು ಸಾಧ್ಯವಿಲ್ಲ ಎಂದು ಭಾವಿಸಿ ಒಣಗಿಸಿದ ಗಾಂಜಾ ಸಾಗಣೆ ಮಾಡಲು ಖದೀಮರು ಪ್ರಯತ್ನ ಮಾಡಿದರು. ಆದರ ಬೀದರ್ ಗಡಿಭಾಗದಲ್ಲಿ ಅಬಕಾರಿ ಇಲಾಖೆ ಹದ್ದಿನ ಕಣ್ಣು ಇಟ್ಟಿದ್ದು ಖದ್ದಿಮರಿಗೆ ಗೊತ್ತೇ ಆಗಲಿಲ್ಲ. ಅಬಕಾರಿ ಇಲಾಖೆಯ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ವಿಚಕ್ಷಣ ದಳದ ಅಧಿಕಾರಿಗಳು ಅಬಕಾರಿ ಉಪ ಅಧೀಕ್ಷಕರು, ಬೀದರ್ ಉಪ ವಿಭಾಗ ಇವರ ನೇತೃತ್ವ ದಲ್ಲಿ ನಡೆದ ಕಾರ್ಯಾಚರಣೆ ಯಶಸ್ವಿಯಾಗಿ ಗಾಂಜಾ ಖದೀಮರನ್ನು ಹೆಡೆಮುರಿ ಕಟ್ಟಿದರು.

- Advertisement -

ಕಾರ್ಯಾಚರಣೆ ಹಿನ್ನೆಲೆ:

ಬೀದರ್ ತೆಲಂಗಾಣ ಗಡಿಭಾಗದ ಭಂಗೂರ ಗ್ರಾಮದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ-65 ರಲ್ಲಿ ರಸ್ತೆ ಕಾವಲು ಮಾಡುತ್ತಿದ್ದ ಸಂದರ್ಭದಲ್ಲಿ ಜಹೀರಾಬಾದ್ ಕಡೆಯಿಂದ ಬಂದಂತಹ Mahindra Xylo ನೋಂದಣಿ ಸಂಖ‍್ಯೆ: TS-08 UB-8926 ವಾಹನವನ್ನು ತಡೆದು ತಪಾಸಣೆ ಮಾಡಲಾಗಿ, ವಾಹನದಲ್ಲಿ 04 ಗೋಣಿ ಚೀಲಗಳಲ್ಲಿ ಒಟ್ಟಾರೆಯಾಗಿ 92 ಪ್ಯಾಕೆಟ್ಗಳಲ್ಲಿ ರೂ. 11 ಲಕ್ಷರಷ್ಟು ಬೆಲೆ ಬಾಳುವ 92 ಕೆ.ಜಿ ಒಣ ಗಾಂಜಾವನ್ನು ತೆಲಂಗಾಣದಿಂದ ಮಹಾರಾಷ್ಟ್ರ ರಾಜ್ಯದ ಕಡೆಗೆ ಸಾಗಿಸುತ್ತಿರುವುದನ್ನು ಇಲಾಖೆ ಪತ್ತೆಮಾಡಿದೆ. ಗಾಂಜಾ ಜೊತೆ ಸುಮಾರು 03 ಲಕ್ಷದಷ್ಟು ಬೆಲೆ ಬಾಳುವ Mahindra Xylo ವಾಹನವನ್ನು ಜಪ್ತಿಪಡಿಸಿಕೊಳ್ಳಲಾಗಿದ್ದು, ಪ್ರಕರಣ ಸಂಬಂಧ 1) ಕತೀಕ ಯಾದುಲ ಖುರೇಶಿ ತಂದೆ ಬಾಬುಮಿಯ್ಯಾ ಖುರೇಶಿ, ವಯಸ್ಸು: 39 ವರ್ಷ, ಸಾ: 2-62, ರೇಗೋಡ್ ಮಂಡಲ್, ತಾಲ್ಲೂಕು ಅಂದೋಲ್, ಜಿಲ್ಲಾ ಮೇದಕ್, ತೆಲಂಗಾಣ ರಾಜ್ಯ ಹಾಗೂ 2) ಹಿಸಾಮುದ್ದಿನ್ ಮಹ್ಮದ್ ತಂದೆ ಬಾಬುಮಿಯ್ಯಾ ಮಹ್ಮದ್, ವಯಸ್ಸು: 30, ಸಾ: 4-17-85, ಹಸನ್ ನಗರ, ಬಾಬಾ ನಗರ, ರಾಜೇಂದ್ರ ನಗರ, ಜಿಲ್ಲಾ ರಂಗಾರೆಡ್ಡಿ, ತೆಲಂಗಾಣ ರಾಜ್ಯ ಇವರುಗಳನ್ನು ವಶಕ್ಕೆ ಪಡೆದು ಜಿಲ್ಲಾ ವಿಚಕ್ಷಣ ದಳವು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬೀದರ್ ವತಿಯಿಂದ ಎನ್ಡಿಪಿಎಸ್ ಕಾಯ್ದೆ 1985 ರಲ್ಲಿನ ಕಲಂಗಳ ಉಲ್ಲಂಘನೆಗಾಗಿ ಪ್ರಕರಣವನ್ನು ದಾಖಲಿಸಲಾಯಿತು. ಕಾರ್ಯಾಚರಣೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳಾದ : 1) ಅಬಕಾರಿ ಉಪ ಅಧೀಕ್ಷಕರಾದ ಆನಂದ ಉಕ್ಕಲಿ

2) ಅಬಕಾರಿ ನಿರೀಕ್ಷಕರುಗಳಾದ ಸುರೇಶ್ ಶಂಕರ್, ರವೀಂದ್ರ ಪಾಟೀಲ್ ಮತ್ತು ಉಪ ನಿರೀಕ್ಷಕರಾದ ದಿಲೀಪ್ಸಿಂಗ್ ಠಾಕೂರ್.
ಸಿಬ್ಬಂದಿಗಳು: ಹುಷೇನ್ ಸಾಬ್, ರೋಹಿತ್, ರಾಜಕುಮಾರ, ಟೋನಿ ಸೆಡ್ರಿಕ್, ಅಬ್ದುಲ್ ಅತೀಖ್ ಮತ್ತು ವಿಷ್ಣುವರ್ಧನ ಭಾಗವಹಿಸಿದ್ದರು ಎಂಬುದಾಗಿ ಪೊಲೀಸ್ ಪ್ರಕಟಣೆ ತಿಳಿಸಿದೆ.

- Advertisement -

ವರದಿ : ನಂದಕುಮಾರ ಕರಂಜೆ,
ಟೈಮ್ಸ್ ಆಫ್ ಕರ್ನಾಟಕ, ಬೀದರ

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group