spot_img
spot_img

ಮಾಜಿ ಕಾರ್ಪೋರೇಟ್ ಭೀಕರ ಹತ್ಯೆ

Must Read

- Advertisement -

ಬೆಂಗಳೂರು – ಬೆಳಿಗ್ಗೆ ಬೆಳಿಗ್ಗೆ ಬೆಂಗಳೂರಿನಲ್ಲಿ ಕೊಲೆಯೊಂದು ನಡೆದಯಬಿಟ್ಟಿದೆ. ಬೆಳಿಗ್ಗೆ ೯.೩೦ ರಿಂದ ೯.೪೫ ರ ನಡುವೆ ಬೆಂಗಳೂರಿನ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಎಂಬುವವರನ್ನು ದುಷ್ಕರ್ಮಿಗಳು ಭೀಕರವಾಗಿ ಇರಿದು ಹತ್ಯೆ ಮಾಡಿದ್ದಾರೆ.

ರೇಖಾ ಅವರನ್ನು ಹತ್ಯೆ ಮಾಡಬೇಕಾದರೆ ಮೊದಲು ಅಲ್ಲಿನ ಸುಮಾರು ಏಳು ಸಿಸಿಟಿವಿ ಕ್ಯಾಮರಾಗಳನ್ನು ದುಷ್ಕರ್ಮಿಗಳು ತಿರುಗಿಸಿ ಯಾವುದೇ ಸಾಕ್ಷಿ ಸಿಗದಂತೆ ಮಾಡಿದ್ದು ಕೊಲೆಯ ನಿಗೂಢತೆ ಹೆಚ್ಚಿಸಿದೆ.

ಈ ಮೊದಲು ಮೂರು ವರ್ಷಗಳ ಹಿಂದೆ ರೇಖಾ ಅವರ ಪತಿಯನ್ನೂ ಇದೇ ಪ್ರದೇಶದಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು ಈಗ ಪತ್ನಿಯ ಹತ್ಯೆಯಾಗಿದ್ದು ಬೆಂಗಳೂರು ನಡುಗಿ ಹೋಗಿದೆ. ದುಷ್ಕರ್ಮಿಗಳು ರೇಖಾ ಅವರ ಕುತ್ತಿಗೆ, ಎದೆ, ಬೆನ್ನು ಎಲ್ಲಾ ಕಡೆಯೂ ಸುಮಾರು ೧೭ ಸಲ ಚಾಕುವಿನಿಂದ ಇರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

- Advertisement -

ರೇಖಾ ಕದಿರೇಶ ಅವರ ಕೊಲೆಯ ಸುತ್ತ ಹಲವಾರು ಶಂಕೆಗಳು ಮೂಡಿದ್ದು ಅದೇ ಏರಿಯಾದ ಮಾಲಾ ಎಂಬುವವರು ತಮ್ಮ ಮಗಳನ್ನು ಕಾರ್ಪೋರೇಟರ್ ಮಾಡುವ ಉದ್ದೇಶದಿಂದ ರೇಖಾ ಅವರನ್ನು ಕೊಲೆ ಮಾಡಿಸಿರಬಹುದಾ ಎಂಬ ಸಂದೇಹದ ಮೇಲೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

- Advertisement -
- Advertisement -

Latest News

ಜಾತ್ರೆಗಳು ಜಾನಪದ ಕಲೆ, ಸಂಪ್ರದಾಯ, ಆಚರಣೆಗಳ ತೊಟ್ಟಿಲು

ಮೂಡಲಗಿ: ‘ಜನಪದರು ಸೇರಿ ದೈವೀಆರಾಧನೆಯೊಂದಿಗೆ ಜಾತಿ, ಧರ್ಮ, ಮೇಲು, ಕೀಳು ಭೇದ ಬಿಟ್ಟು ಸಾಮರಸ್ಯವನ್ನು ಬೆಳೆಸುವುದೇ ಜಾತ್ರೆಗಳಾಗಿವೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು. ತಾಲ್ಲೂಕಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group