- Advertisement -
ಸಿಂದಗಿ: ತಾಲೂಕಿನ ಗುಬ್ಬೇವಾಡ ಗ್ರಾಮದ ರೈತ ವೀರಭದ್ರಪ್ಪ ರಾವೂರ ಅವರ ತೋಟದಲ್ಲಿ ಆಕಸ್ಮಿಕವಾಗಿ ಎರಡು ಎತ್ತು ಹಾಗೂ ಎರಡು ಆಕಳು ಸತ್ತಿದ್ದು ರೈತನ ಮನೆಗೆ ಮಾಜಿ ಶಾಸಕ ರಮೇಶ ಭೂಸನೂರ ಭೇಟಿ ನೀಡಿ ಸಾಂತ್ವನ ಹೇಳಿ, ವೈಯಕ್ತಿಕ ಇಪ್ಪತ್ತೈದು ಸಾವಿರ ರೂಪಾಯಿ ಸಹಾಯಧನ ನೀಡುವ ಮೂಲಕ ರೈತನಿಗೆ ಧೈರ್ಯ ತುಂಬಿದರು.
ನಂತರ ಮಾತನಾಡಿ, ಬಿಜೆಪಿ ಸರಕಾರ ಬಡವರ ಪರವಾಗಿದೆ ರಾಜ್ಯದಲ್ಲಿ ಯಾವುದೆ ರೈತನಿಗೆ ಅನ್ಯಾಯವಾಗಲು ಬಿಡುವುದಿಲ್ಲ. ನೊಂದ ರೈತನಿಗೆ ಸರ್ಕಾರದಿಂದ ಬರುವ ಪರಿಹಾರ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಆತ್ಮಸ್ಥೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಸಂತೋಷ ಪಾಟೀಲ, ಮಡಿವಾಳಪ್ಪಗೌಡ ಬಿರಾದಾರ, ಶಿವಪ್ರಸಾದ ಮಂಗಲಗಿ, ಮಲ್ಲಪ್ಪ ರಾವೂರ, ಭೀಮು ಮೇಲಿನಮನಿ, ಸುರೇಶ ಗಡಗಿ ಮಾಂತೇಶ ಮಳ್ಳಿ, ಮೈಬೂಬ ನಾಗಾವಿ, ಕಾಮಣ್ಣ ತಳವಾರ ಇದ್ದರು.