spot_img
spot_img

ಲೋಕಸಭೆಯಲ್ಲಿ ಕನ್ನಡದಲ್ಲಿ ಮಾತನಾಡಲು ಎಲ್ಲ ಎಂಪಿಗಳಿಗೆ ಮಾಜಿ ಪ್ರಧಾನ ಮಂತ್ರಿ ಎಚ್ ಡಿ ದೇವೇಗೌಡ ಸೂಚನೆ

Must Read

- Advertisement -

ಬೈಲಹೊಂಗಲ: ಕಳೆದ 1996 ರ ಲೋಕಸಭೆಯಲ್ಲಿ ಬೇರೆ ಬೇರೆ ರಾಜ್ಯದ ಸಂಸತ್ ಸದಸ್ಯರು ತಮ್ಮ ತಮ್ಮ ಮಾತೃ ಭಾಷೆಯಲ್ಲಿವಿಷಯಗಳನ್ನು ಪ್ರಸ್ಥಾಪಿಸುತ್ತಿದ್ದರು, ಆದರೆ ಕನ್ನಡ ಭಾಷೆಯಲ್ಲಿ ಮಾತನಾಡುವವರು ವಿರಳವಾಗಿದ್ದರು.

ಭಾರತಕ್ಕೆ ಸ್ವಾತಂತ್ರ್ಯ ದೊರೆತ 50 ವರ್ಷಗಳ ಸುವರ್ಣ ಮಹೋತ್ಸವದ ವಿಶೇಷ ಅಧಿವೇಶನದ ಸಂದರ್ಭದಲ್ಲಿ ಆಗಿನ ಪ್ರಧಾನ ಮಂತ್ರಿಗಳಾದ ಹೆಚ್ ಡಿ ದೇವೇಗೌಡರು ಲೋಕಸಭೆಯಲ್ಲಿ ಕರ್ನಾಟಕದಿಂದ ಚುನಾಯಿತರಾದ ಎಲ್ಲ ಸಂಸತ್ ಸದಸ್ಯರಿಗೆ ಕನ್ನಡದಲ್ಲಿ ಮಾತನಾಡಲು ಸೂಚನೆ ನೀಡಿದ್ದರಿಂದ ಕರ್ನಾಟಕದ ಎಲ್ಲ 28 ಸದಸ್ಯರು ಕನ್ನಡ ಭಾಷೆಯಲ್ಲಿ ಮಾತನಾಡಿದರು ಎಂದು ಮಾಜಿ ಸಚಿವ ಶಿವಾನಂದ ಕೌಜಲಗಿ ಹೇಳಿದರು.

ಇವರ ಅವಧಿಯಲ್ಲಿ ಲೋಕಸಭಾ ಅಧಿವೇಶನದ ಕಾರ್ಯಕಲಾಪನಿಯಮಗಳ ಪ್ರಕಾರ ನಡೆದು ಇನ್ನು ಕೇವಲ ಮೂರು ದಿನ ಅಧಿವೇಶನ ನಡೆದಿದ್ದರೆ ಅದೊಂದು ಮೈಲಿಗಲ್ಲು ಆಗುತ್ತಿತ್ತು. ಸರಳತೆ ಹಾಗೂ ಸೌಜನ್ಯದಿಂದ ಲೋಕಸಭೇ ಅಧೀವೇಶನ ನಡೆಸಿದ ಕೀರ್ತಿಗೆ ಗೌಡರು ಪಾತ್ರರು ದೇವೇಗೌಡರು ಪ್ರಧಾನ ಮಂತ್ರಿಗಳಾಗಿದ್ದ ಸಮಯದಲ್ಲಿ, ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ ಕಡತಗಳು ಕಾರಣವಿಲ್ಲದೆ ಬಾಕಿ ಉಳಿಯುತ್ತಿರಲಿಲ್ಲ ಹಾಗೂ ಪಾರ್ಲಿಮೆಂಟ್ ನಡೆದ ವೇಳೆಯಲ್ಲಿ ಪ್ರತಿದಿನ ಸುಮಾರು 50 ಜನ ಸಂಸತ್ ಸದಸ್ಯರಿಗೆ ಪುರ್ವಾನುಮತಿಯಿಲ್ಲದೇ ಭೇಟಿಗೆ ಅನುಮತಿ ನೀಡುತ್ತಿದ್ದರು ಮತ್ತು ಸಂಸತ್ ಸದಸ್ಯರ ಪತ್ರಗಳ ಮೇಲೆ ಸ್ಪೀಕಿಂಗ ಇನ್ಸಸ್ಟ್ರಕ್ಷನ್ ಕೊಡುತ್ತಿದ್ದರು.

- Advertisement -

ದೇವೇಗೌಡರ ಕಾಲದಲ್ಲಿ ವಿಶೇಷವಾಗಿ ಬೆಳಗಾವಿ ಜಿಲ್ಲೆಯ ಕಿತ್ತೂರ, ಬೈಲಹೊಂಗಲ, ಸೊಗಲಕ್ಷೇತ್ರ. ಯಲ್ಲಮ್ಮನಗುಡ್ಡ, ಮಾರ್ಗವಾಗಿ ದಾರವಾಡಕ್ಕೆ ಹೊಸ ರೇಲ್ವೆ ಮಾರ್ಗ ಪ್ರಾರಂಭಿಸಲು ಒಪ್ಪಿಗೆ ಕೊಟ್ಟರಲ್ಲದೇ, ಸರ್ವೆ ಕೆಲಸ ಪ್ರಾರಂಭಿಸಲು ಸವದತ್ತಿಯಲ್ಲಿ ಮಾನ್ಯ ಕೇಂದ್ರ ರೇಲ್ವೇ ಮಂತ್ರಿಗಳಾದ ರಾಮವಿಲಾಸ ಪಾಸ್ವಾನ ರವರ ಜೊತೆಗೂಡಿ ಅಡಿಗಲ್ಲನ್ನು ಸಹ ಇಟ್ಟರು. ಒಬ್ಬ ಕನ್ನಡಿಗ ಪ್ರಧಾನ ಮಂತ್ರಿ ಆದದ್ದು ಕರ್ನಾಟಕಕ್ಕೆ ಹೆಮ್ಮೆ ತರುವ ವಿಷಯ ಎಂದು ಮಾಜಿ ಸಚಿವ ಶಿವಾನಂದ ಕೌಜಲಗಿ ತಿಳಿಸಿದ್ದಾರೆ.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group