Homeಸುದ್ದಿಗಳುಪಂ.ಪಂಚಾಕ್ಷರಿ ಗವಾಯಿಗಳ ಪ್ರತಿಷ್ಠಾನ ಶೀಘ್ರದಲ್ಲಿ ಅಸ್ತಿತ್ವಕ್ಕೆ. - ದಿ. 13ರಂದು ಪದಾಧಿಕಾರಿಗಳ ಆಯ್ಕೆ ; ಸರ್ವ...

ಪಂ.ಪಂಚಾಕ್ಷರಿ ಗವಾಯಿಗಳ ಪ್ರತಿಷ್ಠಾನ ಶೀಘ್ರದಲ್ಲಿ ಅಸ್ತಿತ್ವಕ್ಕೆ. – ದಿ. 13ರಂದು ಪದಾಧಿಕಾರಿಗಳ ಆಯ್ಕೆ ; ಸರ್ವ ಕಲಾವಿದರ ಸಭೆ

ಬಾಗಲಕೋಟೆ – ಕನ್ನಡ ನಾಡಿನ ಶ್ರೇಷ್ಠ ಸಂಗೀತಗಾರರು. ಕವಿ ಗವಾಯಿಗಳು. ಅಂಧ,ಅನಾಥ ಮಕ್ಕಳ ಆಶ್ರಯದಾತರು, ವರಪುರುಷರು,  ಶಿವಯೋಗಿ ಗಾನಯೋಗಿ. ಪಂ. ಪಂಚಾಕ್ಷರಿ ಗವಾಯಿಗಳ ಹೆಸರಿನಲ್ಲಿ ಪ್ರತಿಷ್ಠಾನವನ್ನು ಅಸ್ತಿತ್ವಕ್ಕೆ ತರಲು ಸರ್ವ ಸಿದ್ಧತೆಯು ಭರದಿಂದ ನಡೆದಿದೆ ಎಂದು ಖ್ಯಾತ ಗಾಯಕ ಆನಂದಕುಮಾರ್ ಕಂಬಳಿಹಾಳ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಬಾಗಲಕೋಟೆ ಜಿಲ್ಲೆಯಲ್ಲಿ ನಿರಂತರ ಸಂಗೀತೋತ್ಸವ ನಡೆಯಬೇಕೆಂಬ ಸಂಕಲ್ಪದೊಂದಿಗೆ ನಮ್ಮ ಭಾಗದ ಕಲಾವಿದರು ಬೆಳೆಯಬೇಕು. ನಮ್ಮ ನೆಲ ಮೂಲ ಸಂಸ್ಕೃತಿ ಕಲೆಗಳು ಉಳಿಯಬೇಕು ಎಂಬ ಸದುದ್ದೇಶವನ್ನು ಇಟ್ಟುಕೊಂಡು ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳ ಹೆಸರಿನಲ್ಲಿ ಪ್ರತಿಷ್ಠಾನವನ್ನು ಅಸ್ತಿತ್ವಕ್ಕೆ ತರಲು ಜಿಲ್ಲೆಯ ಕಲಾವಿದರೊಂದಿಗೆ ಮಾತನಾಡಿ ನಿರ್ಧರಿಸಲಾಗಿದೆ .ಈಗಾಗಲೇ ಹಲವು ಸುತ್ತು ಮಾತುಕತೆಗಳು ನಡೆದಿದೆ .ಇದೇ ಜುಲೈ ರವಿವಾರ ರಂದು ಬಾಗಲಕೋಟೆಯ ವಿದ್ಯಾಗಿರಿಯ ಸಾಯಿ ಮಂದಿರದಲ್ಲಿ ಮಧ್ಯಾಹ್ನ 12:30 ಕ್ಕೆ ಜಿಲ್ಲೆಯ ಸರ್ವ ಕಲಾವಿದರ ಸಭೆಯನ್ನು ಕರೆಯಲಾಗಿದೆ .ಈ ಸಭೆಯಲ್ಲಿ ಹೆಸರಾಂತ ಶಾಸ್ತ್ರೀಯ ಸಂಗೀತಗಾರರು. ಸಾಹಿತಿಗಳು. ಸುಗಮ ಸಂಗೀತ. ಜನಪದ ಸಂಗೀತ. ಬಯಲು ರಂಗಭೂಮಿ. ನಾಟಕ ರಂಗಭೂಮಿ ವೃತ್ತಿ ಮತ್ತು ಹವ್ಯಾಸಿ ಕಲಾವಿದರು ಸೇರಿದಂತೆ ಎಲ್ಲ ಕ್ಷೇತ್ರದ ಹಿರಿಯ ಕಿರಿಯ ಕಲಾವಿದರು ಪಾಲ್ಗೊಳ್ಳುವರು. ಹಾಗಾಗಿ ಕಲಾ ಕ್ಷೇತ್ರದ ಎಲ್ಲ ಮುಖಂಡರುಗಳು .ಸಂಘ ಸಂಸ್ಥೆಗಳ ಮುಖಂಡರುಗಳು. ಈ ಸಭೆಯಲ್ಲಿ ಭಾಗವಹಿಸಿ ಪ್ರತಿಷ್ಠಾನದ ಕಾರ್ಯಕಲಾಪಕ್ಕೆ ಕೈಜೋಡಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ತಾವೆಲ್ಲರೂ ಸಹಕರಿಸಬೇಕೆಂದು ಗಾಯಕ ಆನಂದಕುಮಾರ ಪ್ರಕಟಣೆಯಲ್ಲಿ ಕೋರಿದ್ದಾರೆ.

ಈ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಶಂಕರಪ್ಪ ಮುಂದಿನಮನಿ. ಚಿನ್ನಪ್ಪಗೌಡ ಗಿಡ್ಡಪ್ಪಗೋಳ ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group