ಮೂಡಲಗಿ:- ಅನಕ್ಷರಸ್ಥರು ಅನ್ನ ಮತ್ತು ಅಕ್ಷರ ಅಗತ್ಯತೆಯನ್ನು ಅರಿಯಬೇಕು.ದೇಶದ ಅಭಿವೃದ್ಧಿಗೆ ದುಡಿಮೆದಾರರ ಕೊಡುಗೆ ದೊಡ್ಡದು ಡಾ.ಬಿ.ಆರ್ ಅಂಬೇಡ್ಕರ್ ಸರ್ವ ಜನಾಂಗದ ಸಾಮಾಜಿಕ ಸಮಾನತೆಗಾಗಿ ಹೋರಾಡಿದವರು ಎಂದು ಸಾಹಿತಿ ಜಯಾನಂದ ಮಾದರ ಹೇಳಿದರು.
ಅವರು ಮೂಡಲಗಿ ತಾಲೂಕಿನ ಫುಲಗಡ್ಡಿಯಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರರ 134 ನೇ ಜಯಂತಿ ಉತ್ಸವ ನಿಮಿತ್ತ ಮಾತನಾಡುತ್ತಾ ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಪ್ರಗತಿಗೆ ಸರ್ವರೂ ಕೈಜೋಡಿಸಬೇಕು, ಶೈಕ್ಷಣಿಕ ಅಭಿವೃದ್ಧಿಯಿಂದ ಕೆಳವರ್ಗದ ಜನಾಂಗದ ಸಾಮಾಜಿಕ ಬದಲಾವಣೆ ಕಾಣಲು ಸಾಧ್ಯವಿದೆ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯಿಂದ ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆ ಮೂಲಕ ಜಾಗೃತಿ ಹಮ್ಮಿಕೊಳ್ಳಲಾಗಿತ್ತು.
ದಲಿತ ಮುಖಂಡರಾದ ಯಮನಪ್ಪ ಮಾದರ,ವಡೇರಹಟ್ಟಿ ಗ್ರಾ.ಪಂ ಸದಸ್ಯ ಯಮನಪ್ಪ ಸಣ್ಣಕ್ಕಿ,ಯಲ್ಲಪ್ಪ ಅಕ್ಕಿ ಸಾಗರ, ಸಂತೋಷ ಮಾದರ, ಬಸವರಾಜ ಮಾದರ,ಅಶೋಕ್ ಅಕ್ಕಿ ಸಾಗರ, ಕಾಶಪ್ಪ ತಳವಾರ, ಮಹಾಂತೇಶ ತಳವಾರ,ಕಾಶಪ್ಪ ದಾಸರ,ದುರುಗಪ್ಪ ಸಣ್ಣಕ್ಕಿ , ತಿಪ್ಪಣ್ಣ ಮಾದರ ಮುಂತಾದವರು ಉಪಸ್ಥಿತರಿದ್ದರು.