spot_img
spot_img

Brahmavar: ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದ ನಾಲ್ವರು ಖದೀಮರು ಅಂದರ್

Must Read

spot_img
- Advertisement -

ಬ್ರಹ್ಮಾವರ: ದೇವಸ್ಥಾನ ಹಾಗೂ ಮನೆಗೆ ಕನ್ನ ಹಾಕಿ ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದ, ನಾಲ್ವರು ಆರೋಪಿಗಳನ್ನು ಪೊಲೀಸ್ ರು ವಶಕ್ಕೆ ಪಡೆದಿದ್ದಾರೆ.

ಶೃಂಗೇರಿಯ ಗೋಪಾಲ (26 ವರ್ಷ), ಕೊಕ್ಕರ್ಣೆ ಅರುಣ (26 ವರ್ಷ), ಚೇರ್ಕಾಡಿ ರವಿ ಕುಮಾರ್ (28 ವರ್ಷ), ಸಾಸ್ತಾನ ಗುಂಡ್ಮಿ ರಝಕ್ (41 ವರ್ಷ) ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ನೆಂಚಾರು ಗ್ರಾಮದ ಕರಬರಬೆಟ್ಟು ಎಂಬಲ್ಲಿಯ ನೀಲಕಂಠ ಕರಬ ಎಂಬುವವರ ಹಳೆಗೆ ಖನ್ನ ಹಾಕಿದ ಕಳ್ಳರು ಮನೆಯಲ್ಲಿದ್ದ ಚಿನ್ನದ ಪದಕ, ಗೃಹೋಪಯೊಗಿ ವಸ್ತುಗಳನ್ನು ಕಳವು ಮಾಡಿದ್ದಾರೆ.

- Advertisement -

ಅಲ್ಲದೇ ಹೆಗ್ಗುಂಜೆ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ದೇವಸ್ಥಾನದಲ್ಲಿ ಬೆಲೆಬಾಳುವ ಕಂಚಿ ಗಂಟೆ ಮತ್ತು ಪೂಜಾ ಸಾಮಗ್ರಿ ಕಳವು ಮಾಡಿರುವ ಕುರಿತು ಬ್ರಹ್ಮಾವರ ಹಾಗೂ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಹಿನ್ನೆಲೆಯಲ್ಲಿ ಎಸ್ಪಿ ವಿಷ್ಣುವರ್ಧನ್‌ ಅವರ ಮಾರ್ಗರ್ಶನದಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಅವರ ನೇತೃತ್ವದ ಕಾರ್ಯಾಚರಣೆ ನಡೆಸಿದ ಕೋಟ ಠಾಣೆಯ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೋಟ ಪೊಲೀಸ್ ಠಾಣಾ ಪಿ ಎಸ್ ಐ ಸಂತೋಷ್ ಬಿಪಿ, ಅಪರಾಧ ವಿಭಾಗದ ಪಿ ಎಸ್ ಐ ಪುಷ್ಪ ಮತ್ತು ಪಿಎಸ್ಐ ಭರತೇಶ್, ಹಾಗೂ ಸಿಬ್ಬಂದಿಗಳಾದ ಸುರೇಶ್ ಶೆಟ್ಟಿ, ರಾಜು, ಸುರೇಶ್, ರಾಮ ದೇವಾಡಿಗ, ಜಯರಾಮ, ಪ್ರಕಾಶ, ಕೃಷ್ಣ, ವಿಕ್ರಂ, ಮತ್ತು ಮಂಜುನಾಥ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

- Advertisement -

ಪೊಲೀಸರ ತಂಡಕ್ಕೆ ಜಿಲ್ಲಾ ಎಸ್ಪಿ ವಿಷ್ಣುವರ್ಧನ್‌ ಅವರು ಅಭಿನಂದನೆ ಸಲ್ಲಿಸಿದ್ದಾರೆ.

- Advertisement -
- Advertisement -

Latest News

10ರಂದು ಅಬ್ಬಿಗೇರಿ ದಂಪತಿಯ 15 ಕೃತಿ ಲೋಕಾರ್ಪಣೆ

ಬೆಳಗಾವಿ: ಜಿಲ್ಲಾ ಲೇಖಕಿಯರ ಸಂಘ ಬೆಳಗಾವಿ ಹಾಗೂ ಲೋಕವಿದ್ಯಾ ಪ್ರಕಾಶನ ಸಂಕೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಉಪನ್ಯಾಸಕಿ, ಲೇಖಕಿ ಜಯಶ್ರೀ ಮತ್ತು ಜಯಪ್ರಕಾಶ ಅಬ್ಬಿಗೇರಿ ದಂಪತಿಗಳ...
- Advertisement -

More Articles Like This

- Advertisement -
close
error: Content is protected !!
Join WhatsApp Group