ಶ್ರೀಮತಿ ಸೋಮವ ಚನ್ನಬಸಪ್ಪ ಅಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೆ ಕೆ ಕೊಪ್ಪ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ವತಿಯಿಂದ ಜಾನುವಾರುಗಳಿಗೆ ಉಚಿತ ತಪಾಸಣಾ ಶಿಬಿರವನ್ನು ಅರಳಿಕಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಹಿರೇಬಾಗೇವಾಡಿಯ ಪಶು ಚಿಕಿತ್ಸಾಲಯದ ವೈದ್ಯರು ಮತ್ತು ಹಲಗಾ ಪಶು ಚಿಕಿತ್ಸಾಲಯದ ವೈದ್ಯರ ನೆರವು ನೀಡಿದರು. ಡಾ ಪ್ರಕಾಶ ಮಣಿ ಪಶು ವೈದ್ಯಧಿಕಾರಿಗಳು ಪಶು ಚಿಕಿತ್ಸಾಲಯ ಹಲಗಾ, ಗಿರೀಶ ಎಸ್ ಕುಲಕರ್ಣಿ ಜಾನುವಾರು ಅಧಿಕಾರಿ ಪಶು ಆಸ್ಪತ್ರೆ ಹಿರೇಬಾಗೇವಾಡಿ, ವಿದ್ಯಾಶ್ರೀ ತಿಗಡಿ ಪಶು ಸಖಿ ಪಶು ಆಸ್ಪತ್ರೆ ಹಿರೇಬಾಗೇವಾಡಿ ಚಿಕಿತ್ಸೆ ನೀಡಿದರು. ಮಹಾವಿದ್ಯಾಲಯದ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಬಸವರಾಜ ಹುಲಮನಿ ಉಪಸ್ಥಿತರಿದ್ದರು.