ಕಣಚೂರು ಆಯುರ್ವೇದ ಆಸ್ಪತ್ರೆ ಉಚಿತ ಚಿಕಿತ್ಸಾ ಶಿಬಿರ

Must Read

ಮಂಗಳೂರು- ಮಂಗಳೂರು ನಾಟೇಕಲ್ಲಿನಲ್ಲಿರುವ ಕಣಚೂರು ಆಯುರ್ವೇದ ಆಸ್ಪತ್ರೆ ವತಿಯಿಂದ ಪೈವಳಿಕೆ ಸಮೀಪದ ಚಿಪ್ಪಾರು ಎಂಬಲ್ಲಿ ಆರೋಗ್ಯ ಶಿಕ್ಷಣಾ ವೇದಿಕೆ ಚಿಪ್ಪಾರು ಇದರ ಆಶ್ರಯದಲ್ಲಿ ದಿನಾಂಕ 12 ರ ಮೇ 25 ರಂದು ಉಚಿತ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಯಿತು.

ಎಲ್ಲಾ ವಿಧದ ಕಾಯಿಲೆಗಳಿಗೆ ಸಂಬಂದಿಸಿದ ತಜ್ಞ ವೈದ್ಯರು ಆಯಾಯ ರೋಗಿಗಳಿಗೆ ಸೂಕ್ತ ತಪಾಸಣೆ ನಡೆಸಿ ಸ್ಥಳದಲ್ಲಿಯೇ ರಕ್ತ ಪರೀಕ್ಷೆಗಳನ್ನೂ ನಡೆಸಿ ಅಗತ್ಯವಾದ ಔಷಧಿಗಳನ್ನು ಉಚಿತವಾಗಿ ನೀಡಿದರು ಒಳ ರೋಗಿಗಳಾಗುವ ಅಗತ್ಯ ಉಳ್ಳವರಿಗೆ ಉಚಿತ ಒಳರೋಗಿ ಸೌಲಭ್ಯವನ್ನು ಕಲ್ಪಿಸಲಾಯಿತು.ಪಂಚಕರ್ಮ ಹಾಗೂ ಮೂಲವ್ಯಾಧಿಗೆ ಮಾಡುವ ಕ್ಷಾರ ಕರ್ಮದ ಚಿಕಿತ್ಸೆ ಸಹ ಲಭ್ಯವಿದ್ದು ಅರ್ಹ ರೋಗಿಗಳಿಗೆ ತತ್ ಚಿಕಿತ್ಸೆ ಸೂಚಿಸಲಾಯಿತು.

ಡಾ ರಾಜೇಶ್ ಚಂದ್ರನ್, ಡಾ ಅಶ್ವತಿ, ಡಾ ವೈಷ್ಣವಿ, ಡಾ ಚರಣ್, ಡಾ ನಿಯಾನಾರವರು ವೈದ್ಯಕೀಯ ತಜ್ಞರಾಗಿಯೂ, ದಾದಿಯರಾದ ಅಕ್ಕಮಹಾದೇವಿ ಮತ್ತು ಚಿತ್ರಾ ಹಾಗೂ ರಕ್ತ ತಪಾಸಣೆಯಲ್ಲಿ ರಾಹಿಲಾ ಮತ್ತು ಪ್ರೀತಿಯವರು ಸಹಕರಿಸಿದ್ದರು

ಸಂಸ್ಥೆಯ ಕಾರ್ಯಕ್ರಮ ನಿಯೋಜನೆಯಲ್ಲಿ ಅಭಿಯಾಮೋಲ್ ರೆಜಿ ಸಾರಥ್ಯ ವಹಿಸಿದ್ದರು.


ಡಾ ಸುರೇಶ ನೆಗಳಗುಳಿ
ಸುಹಾಸ
ಬಜಾಲ್ ಪಕ್ಕಲಡ್ಕ ಮಂಗಳೂರು 9
9448216674

Latest News

ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು – ಬರಮಣ್ಣ ಉಪ್ಪಾರ

ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ರೂ.೫ ಕೋಟಿ ಹಣವಿದೆ ಸಮಾಜದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ...

More Articles Like This

error: Content is protected !!
Join WhatsApp Group