ಉಚಿತ ಕಣ್ಣಿನ ತಪಾಸಣೆ ಮತ್ತು ನೇತ್ರದಾನ ಶಿಬಿರ

Must Read

ಬೆಂಗಳೂರು – ಶೇಷಾದ್ರಿಪುರಂ ಶಿಕ್ಷಣದತ್ತಿ ಆವರಣ ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜು ಯೂತ್ ರೆಡ್‍ಕ್ರಾಸ್ ಮತ್ತು ಎನ್.ಎಸ್.ಎಸ್ ಘಟಕದ ವತಿಯಿಂದ ಲಯನ್ಸ್ ಕ್ಲಬ್ ಬೆಂಗಳೂರು ಸೆಂಟೇನಿಯಲ್ ಸರ್ವೀಸಸ್ ಮತ್ತು ನಾರಾಯಣ ನೇತ್ರಾಲಯ ಕಣ್ಣಿನ ಆಸ್ಪತ್ರೆ ಇವರ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ನೇತ್ರದಾನ ಶಿಬಿರವನ್ನು ವಿದ್ಯಾರ್ಥಿಗಳಿಗೆ ಮತ್ತು ಬೋಧಕ ಮತ್ತು ಬೋತಕೇತರ ವರ್ಗದವರಿಗೆ ಹಾಗೂ ಪೋಷಕರಿಗಾಗಿ ದಿ.29 ರಂದು ಹಮ್ಮಿಕೊಳ್ಳಲಾಗಿತ್ತು

ಕಾರ್ಯಕ್ರಮವನ್ನು ಡಾ. ಎಂ.ಕೆ.ಕೃಷ್ಣ ಅಧ್ಯಕ್ಷರು, ದಕ್ಷಿಣಭಾರತ ಈ.ಬಿ.ಎ.ಎಲ್ ಇವರು ಉದ್ಘಾಟಿಸಿ ಮಾತನಾಡಿ, ನೇತ್ರದಾನ ಮಾಡುವುದು ಜಗತ್ತಿನಲ್ಲಿ ಅತ್ಯುತ್ತಮವಾದ ಸೇವಾ ಕಾರ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಡೋಜ ಡಾ.ವೂಡೇ ಪಿ.ಕೃಷ್ಣ ಗೌರವ ಪ್ರಧಾನ ಕಾರ್ಯದರ್ಶಿಗಳು, ನೇತ್ರದಾನ ಮಾಡುವ ಸೇವಾ ಮನೋಭಾವವು ಯುವಕರಲ್ಲಿ ಹೆಚ್ಚಾಗಬೇಕು ಮತ್ತು ಕಣಿನ ಆರೋಗ್ಯದ ಕಡೆ ಹೆಚ್ಚು ಗಮನ ವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಲಯನ್ ಮಣಿ.ವಿ. ಅಧ್ಯಕ್ಷರು. ಎಲ್.ಸಿ.ಬಿ.ಸಿ.ಎಸ್, ಶ್ರೀ ವೀರೇಶ್, ಡಾ.ರಾಜ್ ಕುಮಾರ್ ನೇತ್ರ ಬ್ಯಾಂಕ್, ಡಾ.ಕೃತಿಕ, ನೇತ್ರ ತಜ್ಞರು, ನಾರಾಯಣ ನೇತ್ರಾಲಯ. ಹಾಗೂ ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎನ್.ಎಸ್. ಸತೀಶ್, ಆಂತರಿಕ ಗುಣಮತ್ತ ಹಾಗೂ ಭರವಸಾ ಸಮಿತಿಯ ಸಂಚಾಲಕರಾದ ನಾಗಸುಧಾ.ಆರ್, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ವಿನಯ್ ಸಾಗರ್ ಎಲ್.ಎಸ್. ಯೂತ್ ರೆಡ್‍ಕ್ರಾಸ್ ಸಂಚಾಲಕರಾದ ಮೋಹನ್.ಟಿ ಇವರುಗಳು ಭಾಗವಹಿಸಿದ್ದರು.

Latest News

ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು – ಬರಮಣ್ಣ ಉಪ್ಪಾರ

ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ರೂ.೫ ಕೋಟಿ ಹಣವಿದೆ ಸಮಾಜದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ...

More Articles Like This

error: Content is protected !!
Join WhatsApp Group