ಮೂಡಲಗಿ : ರಾಜ್ಯ ಸರ್ಕಾರದ ಯಶಸ್ವಿನಿ ಯೋಜನೆ, ಕೇಂದ್ರ ಸರ್ಕಾರ ಆಯುಷ್ಯ್ಮಾನ್ ಭಾರತ ಯೋಜನೆ ಇದೆ. ರೈತರು ಯಶಸ್ವಿನಿ ಯೋಜನೆಯಲ್ಲಿ ನೊಂದಣಿಯಾಗುತ್ತಿಲ್ಲ. ಸಂಘ ಸಂಸ್ಥೆಗಳು ಅದರ ಜವಾಬ್ದಾರಿ ಹೊರಬೇಕು ಎಂದು ಚಿಕ್ಕಮಕ್ಕಳ ತಜ್ಞ ಡಾ ಮಹಾಂತೇಶ ಕಡಾಡಿ ಹೇಳಿದರು
ಮಂಗಳವಾರ ಕಲ್ಲೋಳಿಯ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆ, ಪ್ರಿಯದರ್ಶಿನಿ ಸಹಕಾರಿ ಪತ್ತಿನ ಸಂಘ ಬೆಳಗಾವಿಯವರ ಕೆ.ಎಲ್.ಇ.ಆಸ್ಪತ್ರೆ ಹಾಗೂ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಬಸವೇಶ್ವರ ಶಿಕ್ಷಣ ಸಂಸ್ಥೆ ಆವರಣದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಗಾಟಿಸಿ ಮಾತನಾಡಿದರು,
೬೦ ವರ್ಷ ನಂತರ ದೇಹ ಕ್ಷೀಣವಾಗುತ್ತದೆ ಕೆಲವು ರೋಗಗಳು ಔಷಧದಿಂದ ಪರಿಹಾರವಾದರೆ ಕೆಲವು ಶಸ್ತ್ರಚಿಕಿತ್ಸೆ ಬೇಕು. ಇನ್ನು ನಿತ್ಯ ವ್ಯಾಯಾಮ ಚಟುವಟಿಕೆಯ ಜೀವನದಿಂದಲೂ ಆರೋಗ್ಯವಾಗಿರಬಹುದು, ನಾವು ಪ್ರತಿನಿತ್ಯ ಪೋಷಕಾಂಶಯುಳ್ಳ ಆಹಾರ ಸೇವನೆಯಿಂದ ಸದೃಡವಾಗಿರಬಹುದು ಎಂದರು.
ಕಬ್ಬೂರದ ಪಿ ಯು ಕಾಲೇಜಿನ ಪ್ರಾಚಾರ್ಯ ಮಹೇಂದ್ರ ಬೆಲ್ಲದ ಮಾತನಾಡಿ, ಇಂದಿನ ಯುವಕರಲ್ಲಿ ಆರೋಗ್ಯಕರವಾದ ಆಹಾರ ಕೊರತೆ ಇದೆ. ನಿತ್ಯ ವ್ಯಾಯಾಮ ಮಾಡಬೇಕಾಗಿದೆ ಎಂದ ಅವರು ಭಾರತದಲ್ಲಿ ಮನುಷ್ಯನ ಆಯುಷ್ಯ ಸರಾಸರಿ ೭೫ ಇದ್ದರೆ ಕಿನ್ಯಾ, ಚೀನಾ .ಸಿಂಗಾಪುರ್ ಮಲೇಷಿಯಾ ದೇಶಗಳ ನಾಗರಿಕರ ಆಯುಷ್ಯ ೮೫ ವರ್ಷ ಕಾರಣ ಅಲ್ಲಿರುವ ಮನುಷ್ಯರಿಗೆ ಇರುವ ಜ್ಞಾನ, ಆದರಿಂದ ಆರೋಗ್ಯ.ಆಹಾರ.ಶಿಕ್ಷಣ ಮೂಲಕ ಜೀವನ ಶೈಲಿಯನ್ನು ಬದಲಾವಣೆ ಅವಶ್ಯ ಎಂದರು
ಆರೋಗ್ಯ ಇದರೆ ಎಲ್ಲವನ್ನು ಸಾಧಿಸಬೇಕು.ಆರೋಗ್ಯವೇ ಭಾಗ್ಯ.ಯಾಂತ್ರಿಕ ಜೀವನ ಶೈಲಿಯಲ್ಲಿ ಬದುಕು ಸಾಗಿಸುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಇರುವ ಮನುಷ್ಯ ತನ್ನ ಆರೋಗ್ಯದ ವಿಷಯದಲ್ಲಿ ಬಹಳ ವರ್ಷ ಹಿಂದಿದ್ದೇವೆ ಎಂಬ ಸತ್ಯವನ್ನು ಮರೆಯುತ್ತಿದ್ದಾನೆ ಇದು ವಿಪರ್ಯಾಸ ಎಂದು ಹೇಳಿದರು
ಕೆ ಎಲ್ ಇ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ ಅಲ್ಲಮಪ್ರಭು ಆರೋಗ್ಯ ತಪಾಸಣಾ ಶಿಬಿರದಲ್ಲಿ ಹೃದಯ, ಮೂತ್ರ ಕೋಶ, ಮಧುಮೇಹ, ನೇತ್ರ, ಶ್ವಾಸಕೋಶ, ಗ್ಯಾಸ್ಕೋ ಎಂಟರಾಲಾಜಿ, ಕ್ಯಾನ್ಸರ್, ಆಯುರ್ವೇದ ಚಿಕಿತ್ಸೆ ಹೋಮಿಯೋಪತಿಕ್ ಚಿಕಿತ್ಸೆ ಸೇರಿದಂತೆ ಉಚಿತ ಶುಗರ್, ಹಿಮೋಗ್ಲೋಬಿನ್, ಬಿಪಿ, ಇಸಿಜಿ, ಇಕೋ ರೋಗಗಳ ತಪಾಸಣೆಗೆ ಇಲ್ಲಿ ವೈಧ್ಯರು ಲಭ್ಯ ಇದ್ದಾರೆ ಇದರ ಪ್ರಯೋಜನ ಪಡೆಯಬೇಕು ಎಂದರು,
ಅದ್ಯಕ್ಷತೆ ವಹಿಸಿದ್ದ ರಮೇಶ ಬೆಳಕೂಡ ಮಾತನಾಡಿ, ಓರ್ವ ಮನುಷ್ಯನಿಗೆ ೨೫ ೩೦ ಜನ ವೈಧ್ಯರು ಇರುತ್ತಾರೆ ಎಂದು ಈ ಶಿಬಿರದಿಂದ ಗೊತ್ತಾಗಿದೆ. ಹಳದಿ ಕಾರ್ಡ್ ವಿತರಣೆಯಿಂದ ಬಹಳಷ್ಟು ಜನರು ಉಚಿತ ಶಸ್ತ್ರಚಿಕಿತ್ಸೆ ಆಗಿವೆ ಪ್ರತಿ ವರ್ಷ ಸಾರ್ವಜನಿಕರು ಇದರ ಪ್ರಯೋಜನ ಪಡೆಯಿರಿ ಎಂದರು,
ಪ್ರಕಾಶ ಗರಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖಂಡ ಆಶೋಕ ಪೂಜೇರಿ ಮಾತನಾಡಿದರು
ಸಂಸ್ಥಾಪಕ ಈರಪ್ಪ ಬೆಳಕೂಡ, ಡಾ ವಿಶ್ವನಾಥ, ಡಾ.ಪ್ರವೀಣ ಕರಗಾಂವಿ,ಡಾ ಭಾವನಾ ಕೊಪ್ಪದ. ಮುಖ್ಯಾಧಿಕಾರಿ. ಚಿದಾನಂದ ಮುಗಳಖೋಡ ವೇದಿಕೆಯ ಮೇಲಿದ್ದರು ಸಂಸ್ಥೆಯ ಕಾರ್ಯದರ್ಶಿ ಡಾ ಬೋಜರಾಜ ಬೆಳಕೂಡ ಸ್ವಾಗತಿಸಿದರು ನಿರೂಪಣೆ. ಆರ್ ಬಿ ಹೆಬ್ಬಾಳ. ಪ್ರಾಚಾರ್ಯ ಎಸ್ ಎಸ್ ಹೂಗಾರ ವಂದಿಸಿದರು.