spot_img
spot_img

ಮೋದಿ ಜನ್ಮದಿನ ನಿಮಿತ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ

Must Read

spot_img
- Advertisement -

ಸಿಂದಗಿ: ಕಳೆದ ಎರಡು ವರ್ಷಗಳಿಂದ ಕೋವಿಡ್ ಆವರಿಸಿದ್ದರಿಂದ ಜನರು ಸಂಕಷ್ಟ ದಲ್ಲಿ ಬಳಲುತ್ತ ಆರೋಗ್ಯದಲ್ಲಿ ಏರುಪೇರು ಆದಾಗ್ಯೂ ಆಸ್ಪತ್ರೆಗಳಿಗೆ ಬಾರದೇ ಸಾವುಗಳಾಗುತ್ತಿವೆ ಕಾರಣ ಕಡುಬಡವರಿಗೆ ಉಚಿತ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿಜಿ ಅವರ ಹುಟ್ಟು ಹಬ್ಬದ ನಿಮಿತ್ತ 18 ರಂದು ತಾಲೂಕು ಆಸ್ಪತ್ರೆಯಲ್ಲಿ ಶಂಭುಲಿಂಗ ಪ್ರತಿಸ್ಥಾನ ಹಾಗೂ ಸಾಯಿ ಇಂಜನೀಯರಿಂಗ ಸರ್ವಿಸಿಸ್ ಸಹಯೋಗದಲ್ಲಿ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ತಾಲೂಕಿನ ಸಾರ್ವಜನಿಕರು ಉಚಿತ ಆರೋಗ್ಯ ಶಿಬಿರದ ಲಾಭ ಪಡೆದುಕೊಳ್ಳಬೇಕು ಎಂದು ಅಸಂಘಟಿತ ಕಾರ್ಮಿಕರ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಮುತ್ತು ಶಾಬಾದಿ ಕರೆ ನೀಡಿದರು.

ಪಟ್ಟಣದ ಖಾಸಗಿ ಹೊಟೇಲೊಂದರಲ್ಲಿ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಮಾರು 8ರಿಂದ 1ಸಾವಿರ ಜನರಿಗೆ ಬೇಕಾಗುವ ಔಷಧಿಗಳನ್ನು ಖರೀದಿಸಲಾಗಿದೆ ಅಲ್ಲದೆ 200 ಜನರಿಗೆ ಕನ್ನಡಕಗಳನ್ನು ವಿತರಣೆ ಮಾಡುವ ಯೋಜನೆಯನ್ನು ಯಾವುದೇ ರಾಜಕೀಯ ಲಾಭ ಇಟ್ಟುಕೊಳ್ಳಲಾರದೆ ಮೋದಿಜಿಯವರ ಸಂಘ ಪರಿವಾರದ ಸೇವಕರಾಗಿ ಈ ಕಾರ್ಯ ಮಾಡಲಾಗುತ್ತಿದೆ ಕಾರಣ ತಾಲೂಕಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಕರ್ನಾಟಕ ರಾಜ್ಯ ಸಮಿತಿ ನಗರಾಡಳಿತ ಪ್ರಕೋಷ್ಠ ಸದಸ್ಯ ಶಂಭುಲಿಂಗ ಕಕ್ಕಳಮೇಲಿ ವಕೀಲರು  ಮಾತನಾಡಿ, ರಾಜಕೀಯ ಹೊರತುಪಡಿಸಿ ಸಂಘ ಪರಿವಾರದ ಸಾಮಾಜಿಕ ಹಿನ್ನೆಲೆಯಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ಪ್ರಧಾನಿ ಮೋದಿಯವರ ಅಭಿಮಾನಿಯಾಗಿ ಕಳೆದ 2015ರಿಂದ ಇಲ್ಲಿಯವರೆಗೆ ಹಲವಾರು ಸಾಮಾಜಿಕ ಸೇವೆಗಳನ್ನು ಮಾಡುತ್ತ ಬರಲಾಗುತ್ತಿದ್ದು. ಕಳೆದ ಬಾರಿ 330 ಜನರಿಗೆ ಉಚಿತ ಸೇವೆ ಒದಗಿಸಿಕೊಡಲಾಗಿದ್ದು ಈ ಬಾರಿಯ ಶಿಬಿರದಲ್ಲಿ 12ರಿಂದ 15 ಡಾಕ್ಟರಗಳ ತಂಡ ಸುಮಾರು 7ರಿಂದ 8 ನೂರ ಜನರಿಗೆ ಸೇವೆ ನೀಡುವ ನಿರೀಕ್ಷೆಯಿದೆ. ಈ ಶಿಬಿರದಲ್ಲಿ ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ. ಪ್ರಭುಗೌಡ ಲಿಂಗದಳ್ಳಿ, ಜನನಿ ಮಲ್ಟಿ ಸ್ಪೇಶಾಲಿಟಿ ಹಾಸ್ಪಿಟಲ್‍ನ ಶಸ್ತ್ರ ಚಿಕಿತ್ಸಕ ಡಾ. ಶಿರೀಶ.ಕೆ, ಕಿಡ್ನಿ ಸ್ಪೇಶಾಲಿಸ್ಟ ಡಾ. ಅವಿನಾಶ ಯಂಕಂಚಿ, ಸ್ತ್ರೀ ರೋಗ ಹಾಗೂ ಬಂಜೆತನ ನಿವಾರಣಾ ತಜ್ಞ ಡಾ. ಹಂಪನಗೌಡ ಪಾಟೀಲ, ಜನರಲ್ ಪಿಜಿಶಿಯನ್ ಡಾ. ಎ.ಎಸ್.ಅರಕೇರಿ, ಚಿಕ್ಕ ಮಕ್ಕಳ ತಜ್ಞ ಡಾ. ವಿನಯ ಮಲಕಣ್ಣವರ, ಅನಸ್ತೆಟಿಕ್ ಮತ್ತು ಇಂಟೆನ್ಸಿವಿಸ್ಟ್ ಡಾ. ಸ್ಪೂರ್ತಿ ಟಿ.ಎಮ್ ಸೇರಿದಂತೆ 12ರಿಂದ 15 ಜನ ವೈದ್ಯರು ಸೇವೆ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

- Advertisement -

ಈ ಸಂದರ್ಭದಲ್ಲಿ ವೀರಭದ್ರಯ್ಯ ಹಿರೇಮಠ, ಶ್ಯಾಮಸುಂದರ ಪೂಜಾರಿ, ಬಸವರಾಜ ಕುಂಬಾರ ಇದ್ದರು.

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group