- Advertisement -
ಮಂಗಳೂರು – ಸ್ಥಳೀಯ ಕಣಚೂರು ಆಯುರ್ವೇದ ಕಾಲೇಜು ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯಸ್ಥ ರಾಜೇಶ್ ಶೆಟ್ಟಿ ಕೆ ವಿಭಾಗ ನಿಯಂತ್ರಕ (ಕ.ರಾ.ರ.ಸಾ.ಸಂ) ಹಾಗೂ ಶ್ರೀಮತಿ ಪ್ರಿಯಾ ಪವನ್ ಕುಮಾರ, ಸಹಾಯಕ ಕಾರ್ಮಿಕ ಕಲ್ಯಾಣ ಅಧಿಕಾರಿ ಇವರ ಸಮ್ಮುಖದಲ್ಲಿ ಸಂಸ್ಥೆಯ ಚೇರ್ಮನ್ ಡಾ । ಕಣಚೂರು ಹಾಜಿ ಮೋನು ರವರ ಅಪೇಕ್ಷೆಯಂತೆ ತತ್ಸಂಬಂಧಿ ನೌಕರರಿಗೆ ಉಚಿತ ಆರೋಗ್ಯ ಸೇವಾ ಸವಲತ್ತು ನೀಡುವ ಕುರಿತಾದ ಮಹತ್ತರ ಒಡಂಬಡಿಕೆಯು ಪ್ರಾಚಾರ್ಯೆ ಡಾ ವಿದ್ಯಾ ಪ್ರಭಾ ಸಹಿತ ಒಪ್ಪಿಗೆ ಪತ್ರಕ್ಕೆ ಸಹಿ ಮಾಡುವ ಮೂಲಕ ನೆರವೇರಿತು
ಇದು ಆಯುರ್ವೇದ ಸಂಸ್ಥೆಗಳಲ್ಲಿ ಕ.ರಾ.ರ.ಸಾ.ಸಂಸ್ಥೆಯೊಡನೆ ಮಾಡಲ್ಪಟ್ಟ ಪ್ರಥಮ ಒಡಂಬಡಿಕೆಯಾಗಿದೆ ನಿಗಮ ಮುಖ್ಯಸ್ಥರು ಈ ಒಡಂಬಡಿಕೆಯು ಬಹಳ ಅನುಕೂಲಕರವೂ ಹಾಜಿ ಡಾ ಕಣಚೂರು ಮೋನುರವರ ಉದಾರತೆಯ ಸಂಕೇತವೂ ಆಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು
ಡಾ ಸುರೇಶ ನೆಗಳಗುಳಿ
ಕಣಚೂರು ಆಯುರ್ವೇದ ಆಸ್ಪತ್ರೆ
ನಾಟೆಕಲ್ ಮಂಗಳೂರು