ಮೂಡಲಗಿ: ಪ್ರತಿಯೊಬ್ಬರು ಸ್ವಚ್ಛತೆಗೆ ಗಮನ ನೀಡಿ ನಗರದಲ್ಲಿನ ಪ್ರತಿ ಮನೆ ಹಾಗೂ ಅಂಗಡಿಗಳ ತ್ಯಾಜ್ಯವನ್ನು ಹಸಿ ಹಾಗೂ ಒಣಕಸವಾಗಿ ಬೇರ್ಪಡಿಸಿ ಪುರಸಭೆಯ ವಾಹನಕ್ಕೆ ನೀಡಬೇಕು ಎಂದು ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಸಿ.ಎಂ.ಮುಗಳಖೋಡ ಹೇಳಿದರು.
ಬುಧವಾರದಂದು ಪುರಸಭೆ ಆಯೋಜಿಸಿದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ಲಾಸ್ಟಿಕ ಬಳಕೆಯನ್ನು ನಿಲ್ಲಿಸಬೇಕು ಹಾಗೂ ಸಾರ್ವಜನಿಕ ಶೌಚಾಲಯವನ್ನು ಬಳಸುವಾಗ ಹೆಚ್ಚು ನೀರು ಬಳಸಿ ಸ್ವಚ್ಛತೆ ಕಾಪಾಡಿ ಸಹಕರಿಸಬೇಕೆಂದರು.
ಪುರಸಭೆಯ ಸಿಬ್ಬಂದಿ ವರ್ಗದವರು ಹಾಗೂ ಸ್ವ ಸಹಾಯ ಗುಂಪಿನ ಸದಸ್ಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸ್ವಚ್ಛತೆ ಬಗ್ಗೆ ಜಾಥಾ ಕಾರ್ಯಕ್ರಮ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆಯ ಸಿಬ್ಬಂದಿಗಳಾದ ಸಿ.ಬಿ.ಪಾಟೀಲ. ಎಂ.ಎಸ್. ಬಿ.ಪಾಟೀಲ, ಪಿ.ಕೆ.ಬಂಗೆನ್ನವರ, ಜಿ.ಎಚ್.ಬೂದಿಹಾಳ, ಎಚ್.ಬಿ. ಚಿಕ್ಕೋಣ, ಜಿ. ಎಸ್. ನಾಯಿಕ, ಸಂಜಯ ಕಲಭಾವಿ, ಪ್ರೀತಮ ಭೋವಿ, ರಮೇಶ ಆಲಗೂರ, ಆರ್.ಪಿ.ಶೇರಖಾನೆ, ಎನ್.ಪಿ.ಬುರುಡ, ಎಸ್.ಎಂ.ಹುಕ್ಕೇರಿ, ಸುನೀಲ.ಹಣಜಿ. ಸಾಗರ ಇತಾಪಿ. ಎಂ.ಜಿ.ಯರನಾಳ ಸ್ವ ಸಹಾಯ ಗುಂಪಿನ ಸದಸ್ಯರು ಇದ್ದರು.