ಈ ದಿನದಿಂದ ಪ್ರತಿಯೊಬ್ಬರೂ ಗಿಡ ನೆಡಬೇಕು – ಡಾ.ಪ್ರಕಾಶ ಮೂಡಲಗಿ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಸಿಂದಗಿ: ದಿನದಿಂದ ದಿನಕ್ಕೆ ಜಾಗತಿಕ ತಾಪಮಾನ ಹೆಚ್ಚುತ್ತಿದೆ ಅದರೊಂದಿಗೆ ನಗರೀಕರಣ ಪರಿಸರ ಮಾಲಿನ್ಯ ಕೂಡಾ ದಿನೇ ದಿನೇ ಹೆಚ್ಚುತ್ತಿದೆ ಇದರಿಂದ ಕಾಲ ಕಾಲಕ್ಕೆ ಬರುತ್ತಿರುವ ಮಳೆಗಾಲ ಕ್ರಮೇಣವಾಗಿ ಮಳೆ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ರಾಗರಂಜಿನಿ ಸಂಗೀತ ಅಕಾಡೆಮಿ ಸಂಚಾಲಕ ಡಾ. ಪ್ರಕಾಶ ಮೂಡಲಗಿ ಹೇಳಿದರು.

ಪಟ್ಟಣದ ಕರ್ನಾಟಕ ಜನಸ್ಪಂದನ ಕಾರ್ಯಾಲಯದ ಆವರಣದಲ್ಲಿ ಸಸಿನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯ ನಿಮಿತ್ತವಾಗಿ ಚಾಲನೆ ನೀಡಿ ಅವರು ಮಾತನಾಡಿ, ಕರ್ನಾಟಕ ಜನಸ್ಪಂದನ ಟ್ರಸ್ಟ್ ಸಿಂದಗಿ ನಗರದಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿರುತ್ತದೆ ಇವರ ಕಾರ್ಯ ಶ್ಲಾಘನೀಯವಾದದ್ದು, ಈ ದಿನದಿಂದ ಪ್ರತಿಯೊಬ್ಬರು ಪ್ರತಿ ವರ್ಷಕ್ಕೆ ಪ್ರತಿ ಬಡಾವಣೆಯಲ್ಲಿ ಮನೆಯ ಮುಂದೆ ರಸ್ತೆ ಬದಿಗಳಲ್ಲಿ ಸಸಿನೆಡುವುದರಿಂದ ಕಾಲಕ್ಕೆ ತಕ್ಕಂತೆ ಮಳೆ ಬೆಳೆ ಸುಗುಮವಾಗುತ್ತದೆ. ಸಸಿಗಳನ್ನು ನೆಡುವುದರಿಂದ ಜಾಗತಿಕ ತಾಪಮಾನ ಕಡಿಮೆಯಾಗುತ್ತದೆ. ಮುಂದಿನ ಪೀಳಿಗೆಯು ಅಪಾಯಕ್ಕೀಡಾಗದಂತೆ ರಕ್ಷಿಸುವುದು ನಮ್ಮ ಕರ್ತವ್ಯ ಎಂದರು.

ಜಿಲ್ಲಾಧ್ಯಕ್ಷ ಮಹಾಂತೇಶ ನೂಲಾನವರ ಮಾತನಾಡಿ, ಪ್ರತಿಯೊಬ್ಬರೂ ಹುಟ್ಟು ಹಬ್ಬ ಮತ್ತು ಶುಭ ಸಂದರ್ಭದಲ್ಲಿ ಅದರ ಸವಿನೆನಪಿಗಾಗಿ ಸಸಿಗಳನ್ನು ನೆಟ್ಟು ಬೆಳೆಸಬೇಕು ಮತ್ತು ಪರಿಸರ ರಕ್ಷಣೆಯು ನಮ್ಮ ಆದ್ಯ ಕರ್ತವ್ಯ. ಹಸಿರು ಉಳಿಸಲು ಗಿಡ ಮರ ಬೆಳೆಸಲು ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಹೀಗೆ ವಿನೂತನ ರೀತಿಯಲ್ಲಿ ಹುಟ್ಟು ಹಬ್ಬ ಆಚರಿಸುತ್ತಿರುವುದು ಮಾದರಿಯಾಗಬೇಕು ಹುಟ್ಟು ಹಬ್ಬವನ್ನು ಹಲವಾರು ಜನ ಪಾರ್ಟಿಗಳು ಮಾಡುತ್ತ ಅನಗತ್ಯ ಖರ್ಚು ಮಾಡುತ್ತಾರೆ. ಇದರ ಬದಲಾಗಿ ಗಿಡಗಳನ್ನು ನೆಡುವ ಮೂಲಕ ತನ್ನ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಬೇಕು ಎಂದರು.

- Advertisement -

ಇದೇ ಸಂದರ್ಭದಲ್ಲಿ ಉಪನ್ಯಾಸಕ ಸಿದ್ಧಲಿಂಗ ಕಿಣಗಿ, ಪ್ರದೀಪ ಕತ್ತಿ, ಬಸವರಾಜ ಗುರುಶೆಟ್ಟಿ, ತಾಲೂಕಾಧ್ಯಕ್ಷ ನವೀನ ಶೆಳ್ಳಗಿ, ಜಿಲ್ಲಾಪ್ರಧಾನ ಕಾರ್ಯದರ್ಶಿ ರವಿಚಂದ್ರ ಮಣೂರ, ಪ್ರಧಾನ ಸಂಚಾಲಕ ಭಾಗಣ್ಣ ತಮದೊಡ್ಡಿ, ಕಾರ್ಯಾಧ್ಯಕ್ಷ ಶರಣಪ್ಪ ಮೇತ್ರಿ, ಉಪಾಧ್ಯಕ್ಷ ದಯಾನಂದ ಜಾಡರ್, ಕಲ್ಮೇಶ ಹಿಪ್ಪರಗಿ, ಶಿವರಾಯಗೌಡ ಖೈನೂರ, ಶಿವಾನಂದ ಮುಡಸಿ, ಆನಂದ ಚಿಮ್ಮಲಗಿ, ಬಸವರಾಜ ದೇಸಾಯಿ, ಸಾಹೇಬಗೌಡ ದುದ್ದಗಿ, ಗುರು ಕಡಣಿ, ಮಲ್ಲು ಹೊಸಮನಿ, ಕಾಶೀಪತಿ ಬಡಿಗೇರ್, ಮೌನೇಶ ಬಡಿಗೇರ್, ಲಕ್ಷ್ಮಣ ಹೊಸಮನಿ ಸೇರಿದಂತೆ ಇನ್ನಿತರರು ಇದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!