spot_img
spot_img

ಬೀದರನಲ್ಲಿ ಮುಗಿಲು ಮುಟ್ಟಿದ ಗಣಪತಿ ಹಬ್ಬದ ಸಂಭ್ರಮ

Must Read

ಗಣೇಶ ಮೂರ್ತಿಗಳ ಮಾರಾಟದಲ್ಲಿ ಗಣನೀಯ ಹೆಚ್ಚಳ

ಬೀದರ: ರಾಜ್ಯದಾದ್ಯಂತ ಹಿಂದುತ್ವದ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಬೀದರ್ ನಲ್ಲಿ ಗಣೇಶ ಮೂರ್ತಿಗಳ ಮಾರಾಟ ಚುರುಕು ಪಡೆದುಕೊಂಡಿದ್ದು ಕಳೆದ ಮೂರು ವರ್ಷದಿಂದ ಇಲ್ಲದ ಹಬ್ಬ ಈ ವರ್ಷ ಭರ್ಜರಿ ಸಂಭ್ರಮ ಪಡೆದುಕೊಂಡಿದೆ.

ಈ ವರ್ಷ ಮಾರುಕಟ್ಟೆಗೆ ಬಂದ ಪಿಓಪಿ ಗಣಪತಿಗಳ ಮಾರುಕಟ್ಟೆ ಬಹುತೇಕ ಕುಸಿದಿದ್ದು ಎಲ್ಲರೂ ಸಾಂಪ್ರದಾಯಿಕ ಮಣ್ಣಿನ ಗಣಪತಿಯತ್ತ ಮನಸು ಮಾಡಿದ್ದಾರೆ. ಕಳೆದ ಎರಡು ವರ್ಷದಿಂದ ಕರೋನ    ರಾಜ್ಯದಲ್ಲಿ ಹಬ್ಬಿದ ಹಿನ್ನೆಲೆಯಲ್ಲಿ  ಯಾರು ಕೂಡಾ ಹಬ್ಬ ಆಚರಣೆ ಮಾಡಲು ಸಾಧ್ಯವಾಗಿರಲಿಲ್ಲ ಈಗ ಆ ಯಾವ ಭಯ ಇಲ್ಲದೆ ಜಿಲ್ಲೆಯ ವಾಣಿಜ್ಯ ವ್ಯವಹಾರ  ಸ್ವಲ್ಪ  ಚುರುಕುಗೊಂಡಿದೆ.

ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಗಣೇಶ ಮೂರ್ತಿಗಳನ್ನ ಮಾರಾಟ ಭರ್ಜರಿ ವ್ಯವಹಾರದ  ಕನಸು ಕಂಡಿದ್ದ ಜಿಲ್ಲೆಯ ವ್ಯಾಪಾರಿಗಳಿಗೆ ಸಂತಸ ಕಂಡು ಬಂದಿದ್ದು. ಗಣೇಶ ವಿಗ್ರಹ ಗಳು ಭರ್ಜರಿ ಮಾರಾಟ ಕಂಡು ಬರುತ್ತಿದೆ.

ಇನ್ನೊಂದು ಕಡೆ ಬೀದರ್ ನಲ್ಲಿ ಮೊಟ್ಟಮೊದಲ ಬಾರಿಗೆ ಸಾವರ್ಕರ್ ಬ್ಯಾನರ್ ಸದ್ದು ಮಾಡುತ್ತಾ ಇದ್ದು ಕೊಳಾರ (ಕೆ) ಗ್ರಾಮದಲ್ಲಿ ಸಾವರ್ಕರ್ ಗಣೇಶ್ ಮಂಡಳ ಎಂದು ಹೆಸರು ಇಟ್ಟಿದ್ದು ಹಿಂದುತ್ವಕ್ಕೆ ಒಂದು ಮೆರಗು ಕೊಟ್ಟಿದೆ ಎಂದು ಹೇಳಬಹುದು.


ಜಿಲ್ಲೆಯಲ್ಲಿ ಎಲ್ಲಾ ಕಡೆ ಗಣಪತಿಗಳನ್ನ ಪ್ರತಿಷ್ಠಾಪಿಸಿ ಪೂಜೆ ಮಾಡಿಕೊಂಡು ಬರೋದು ವಾಡಿಕೆಯಾಗಿತ್ತು.ಆದ್ರೆ ಈ ವರ್ಷ ಅದರ ಉತ್ಸಾಹವು ಹೆಚ್ಚು ಕಂಡು ಬರುತ್ತದೆ. ನಗರದಲ್ಲಿ ನೂರಾರು ಕಡೆ ಪ್ರತಿಷ್ಠಾಪನೆ ಮಾಡುತ್ತಿದ್ದ ಗಣೇಶನ ಮೂರ್ತಿಗಳ ಸಂಖ್ಯೆ ಹೆಚ್ಚು ಕಂಡು ಬರ್ತಾಯಿದೆ.ಜೊತೆಗೆ ಗಣೇಶನ ಮೂರ್ತಿಗಳತ್ತ ಕೊಳ್ಳುವವರು ಚೌಕಾಸಿ ಮಾಡದೆ ಖರೀದಿಗೆ ಜೋರಾಗಿ  ನಡೆಯತ್ತಿದೆ ಹಾಗಾಗಿ ಈ ವರ್ಷ ಗೌರಿ ಗಣೇಶ ಹಬ್ಬದ ಸಂತಸ ಜೋರಾಗಿ ಕಂಡುಬರ್ತಾಇದ್ದೆ.

ಮಹಾಲಿಂಗ ಸ್ವಾಮಿ, ಗ್ರಾಹಕ


ಒಟ್ಟಾರೆ ಗಡಿ ಜಿಲ್ಲೆ ಬೀದರ್ ನಲ್ಲಿ ಗಣಪತಿ ಬಪ್ಪನ ಮೂರ್ತಿಗಳ ಮಾರಾಟ ಭರ್ಜರಿ ಸಾಗಿದೆ.ಈ ವರ್ಷ ಬಂಪರ್ ಬೆಲೆಯಲ್ಲಿ ಗ್ರಾಹಕರಿಗೆ ಗಣಪತಿ ಮಾರಾಟ ಮಾಡೋ ವ್ಯಾಪಾರಿಗಳ ಜನರಲ್ಲಿ ಹಬ್ಬದ ಉತ್ಸಾಹ ಹೆಚ್ಚಾಗಿದೆ ,ಜನರು  ಮಣ್ಣಿನ ಮೂರ್ತಿಗಳತ್ತ ಚಿತ್ತ ಹರಿಸಿ  ಹಬ್ಬ ಆಚರಣೆ ಮಾಡಲು ಅಣಿಯಾಗುತ್ತಿದ್ದಾರೆ. ಸದ್ಯಕ್ಕೆ ಕರೋನಾ ಇಲ್ಲದೆ ಈ ಗಣೇಶನ ಹಬ್ಬದಲ್ಲಿಯಾದ್ರು ಮಳೆ ಬಾರದೆ ಇದರೆ  ಜನರ ಹಬ್ಬಕ್ಕೆ ಸಂಭ್ರಮ ಹೆಚ್ಚಾಗುತ್ತದೆ

-ಬಸವ ಪ್ರಸಾದ ಗ್ರಾಹಕ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!