spot_img
spot_img

ಗಂಡ ಮೂಲ ದೋಷ

Must Read

🍁ಗಂಡ ಮೂಲ ದೋಷಕ್ಕೆ ಒಳಪಡುವ ನಕ್ಷತ್ರಗಳು ಯಾವುವು ಗೊತ್ತಾ?

🍂ಜ್ಯೋತಿಷ್ಯಶಾಸ್ತ್ರದಲ್ಲಿ ಪ್ರಮುಖವಾಗಿ 27 ನಕ್ಷತ್ರಗಳನ್ನು ಪರಿಗಣಿಸಲಾಗುತ್ತವೆ. ಅದರಲ್ಲಿಯೂ ಪ್ರಮುಖವಾಗಿ ಕೇತು ಅಧಿಪತಿಯಾದ ಅಶ್ವಿನಿ, ಮಾಘ, ಮೂಲ ಹಾಗೂ ಬುಧನು ಅಧಿಪತಿಯಾದ ಆಶ್ಲೇಷಾ, ಜೇಷ್ಠ ರೇವತಿ ನಕ್ಷತ್ರಗಳನ್ನು ಗಂಡಮೂಲ ನಕ್ಷತ್ರಗಳೆಂದು ಕರೆಯುತ್ತಾರೆ. ಯಾರು ಈ ನಕ್ಷತ್ರದಲ್ಲಿ ಹುಟ್ಟಿರುತ್ತಾರೋ ಅವರಿಗೆ ಕಷ್ಟಗಳೇ ಹೆಚ್ಚು ಎಂದು ನಂಬಲಾಗುತ್ತದೆ.

🍂ಆದರೆ ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ಯಾವಾಗಲೂ ಕಷ್ಟವೇ ಎಂದು ಹೇಳಲಾಗುವುದಿಲ್ಲ. ಯಾಕೆಂದರೆ ಈ ನಕ್ಷತ್ರದಲ್ಲಿ ಹುಟ್ಟಿದವರು ಬುದ್ಧಿವಂತರು, ಮಹತ್ವಾಕಾಂಕ್ಷೆಯವರು, ಶ್ರಮ ಜೀವಿಗಳು ಹಾಗೂ ಇತರರಿಗಿಂತ ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ. ಗಂಡಮೂಲ ನಕ್ಷತ್ರಗಳ ಕೆಲವೊಂದು ಚರಣ ಪಾದಗಳು ದೋಷಪೂರಿತವಾಗಿದ್ದರೆ ಮಾತ್ರ ಪ್ರತಿಕೂಲ ಪರಿಣಾಮ ಉಂಟಾಗುವುದು.

🍂ಈ ದೋಷವು ಇಡೀ ನಕ್ಷತ್ರದ ಮೇಲೆ ಯಾವುದೇ ಪರಿಣಾಮ ಬೀಳುವುದಿಲ್ಲ. ಗಂಡಮೂಲ ನಕ್ಷತ್ರವು ಒಂದು ವರ್ಗ. ಇದು ನಕ್ಷತ್ರಪುಂಜಗಳ ಗುಂಪನ್ನು ಆಧರಿಸಿದೆ, ಇದನ್ನು ಕೇತು ಅಥವಾ ಬುಧ ಗ್ರಹಗಳು ಆಳುತ್ತವೆ. ಗಂಡಮೂಲ ನಕ್ಷತ್ರ ದೋಷ ಮತ್ತು ವಿವಿಧ ನಕ್ಷತ್ರಗಳ ಚರಣಗಳು ಅಂದರೆ ಬೆಂಕಿಯ ಚಿಹ್ನೆಗಳಾದ ಮೇಷ, ಸಿಂಹ, ಧನುಸ್ಸು ರಾಶಿ ಅಶ್ವಿನಿ, ಮಾಘ ಮತ್ತು ಮೂಲ ನಕ್ಷತ್ರಗಳ ಮೊದಲ ನಾಲ್ಕು ಚರಣಗಳು ಇವುಗಳನ್ನು ಕೇತುವು ಆಳಲ್ಪಡುತ್ತಾನೆ.

🌼ಅಂದರೆ ನೀರಿನ ಚಿಹ್ನೆಗಳಾದ ವೃಶ್ಚಿಕ, ಕಟಕ, ಮೀನ ರಾಶಿ ಆಶ್ಲೇಷಾ, ಜ್ಯೇಷ್ಠ ಮತ್ತು ರೇವತಿ ನಕ್ಷತ್ರಗಳ ಕೊನೆಯ ನಾಲ್ಕು ಚರಣಗಳು ಇವು ಬುಧನಿಂದ ಆಳಲ್ಪಡುತ್ತವೆ ಇವುಗಳು ಗಂಡ ಮೂಲ ನಕ್ಷತ್ರ ದೋಷಕ್ಕೆ ಒಳಗಾಗುತ್ತವೆ ಎಂದು ಹೇಳಲಾಗುತ್ತದೆ. ಉಳಿದಂತೆ ಇತರ ಚರಣಗಳು ಶುಭವೆಂದು ಪರಿಗಣಿಸಲಾಗಿದೆ. ಮೂಲಾ ನಕ್ಷತ್ರದ ನಾಲ್ಕು ಪಾದಗಳೂ ಕೂಡಾ ಧನುಸ್ಸು ರಾಶಿಗೆ ಸೇರುತ್ತವೆ.

🍂ಕೇತುವಿನಿಂದ ಆಳಲ್ಪಡುವ ಈ ನಕ್ಷತ್ರಗಳಲ್ಲಿ 7,16,25 ನೇ ತಾರೀಕಿನಲ್ಲಿ ಹುಟ್ಟಿದರೆ ಈ ಸಂಖ್ಯೆಗಳೂ ಕೂಡಾ ಕೇತುವನ್ನು ಪ್ರತಿನಿಧಿಸುವುದರಿಂದ ಇವರ ಜೀವನದಲ್ಲಿ ವೈವಾಹಿಕ ಸಮಸ್ಯೆ, ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಕಾಡುತ್ತವೆ.

ಇನ್ನು ಮೂಲಾ ನಕ್ಷತ್ರದಲ್ಲಿ ಹುಟ್ಟಿದವರಿಗೆ ಮದುವೆ ಆಗುವುದಿಲ್ಲ. ಮದುವೆಯಾದರೆ ಗಂಡಾಂತರಗಳು ಸಂಭವಿಸುತ್ತವೆ ಎನ್ನುವ ನಂಬಿಕೆ ಇದೆ. ಆದರೆ ಮೂಲಾ ನಕ್ಷತ್ರದ ನಾಲ್ಕು ಪಾದಗಳಿಗೆ ದೋಷ ಇರುವುದಿಲ್ಲ.

🍂ಸರಸ್ವತಿ, ಆಂಜನೇಯ ಹಾಗೂ ರಾವಣನ ನಕ್ಷತ್ರವೂ ಕೂಡಾ ಇದೆ ನಕ್ಷತ್ರವಾಗಿದೆ. ಮೂಲ ನಕ್ಷತ್ರದಲ್ಲಿ ಹುಟ್ಟಿದ ತಕ್ಷಣ ದೋಷಗಳು ಕಂಡುಬರುವುದಿಲ್ಲ. ಬದಲಾಗಿ ಗ್ರಹಗತಿಗಳು ಸರಿ ಇಲ್ಲದಿದ್ದಾಗ ಮಾತ್ರ ದೋಷಗಳು ಕಾಡುತ್ತವೆ.

🌼ಪರಿಹಾರ ಕ್ರಮಗಳು🌼

🌾ಗ್ರಹಗಳ ಚಲನೆ ಇರುವ ಸಂದರ್ಭ 27 ದಿನಗಳ ನಂತರ ಅದೇ ಜನ್ಮನಕ್ಷತ್ರದಲ್ಲಿ ವ್ಯಕ್ತಿಯು ಜನಿಸಿದರೆ ಶಾಂತಿ ಹೋಮವನ್ನು ಮಾಡಲು ಹೇಳಲಾಗುತ್ತದೆ. ಇದರ ದುಷ್ಪರಿಣಾಮಗಳನ್ನು ಕಡಿಮೆಗೊಳಿಸಲು ಬ್ರಾಹ್ಮಣ ಪುರೋಹಿತರು ನಿಗದಿತ ದಿನದಂದು ಶಾಂತಿಹೋಮವನ್ನು ಮಾಡುತ್ತಾರೆ.

🌾ಗಂಡ ಮೂಲ ಶಾಂತಿ ಹೋಮವನ್ನು ಮಗು ಹುಟ್ಟಿದ 27 ದಿನಗಳ ನಂತರ ಅದೇ ನಕ್ಷತ್ರ ಬಂದಾಗ ಸೂಕ್ತ ವಿಧಿಗಳೊಂದಿಗೆ ಮಾಡಬೇಕು. ಮಗು ಜನಿಸಿದ 27 ದಿನಗಳ ನಂತರ ಶಾಂತಿ ಹೋಮವನ್ನು ಮಾಡಿಸಲಾಗದಿದ್ದಲ್ಲಿ, ಮುಂದೆ ಅದೇ ಜನ್ಮ ನಕ್ಷತ್ರ ಬಂದಾಗ ಈ ಕ್ರಿಯೆಯನ್ನು ಮಾಡಬೇಕು.

🌾ಗಂಡ ಮೂಲ ನಕ್ಷತ್ರದಲ್ಲಿ ಜನಿಸಿದವರು ಜನ್ಮ ನಕ್ಷತ್ರದ ಅಧಿಪತಿಯನ್ನು ಪೂಜಿಸಬೇಕು, ಆರಾಧಿಸಬೇಕು. ನಿಮ್ಮ ನಕ್ಷತ್ರ ಅಶ್ವಿನಿ, ಮಾಘ, ಮೂಲಾ ನಕ್ಷತ್ರವಾಗಿದ್ದಲ್ಲಿ ಗಣೇಶನನ್ನು ಪೂಜಿಸಬೇಕು.

🌾ಆಶ್ಲೇಷಾ, ಜ್ಯೇಷ್ಠ ಅಥವಾ ರೇವತಿ ನಕ್ಷತ್ರವಾಗಿದ್ದಲ್ಲಿ ಬುಧನನ್ನು ಆರಾಧಿಸಬೇಕು. ಬುಧನ ಆಶೀರ್ವಾದ ಪಡೆಯಲು ಬುಧವಾರದ ದಿನ ಹಸಿರು ತರಕಾರಿ, ಕೊತ್ತಂಬರಿ, ಪಚ್ಚೆ ಹಾಗೂ ಕಂಚಿನ ಪಾತ್ರೆ, ನೆಲ್ಲಿಕಾಯಿಯನ್ನು ದಾನ ಮಾಡುವುದಾಗಲಿ ಅಥವಾ ಬಳಸುವುದಾಗಲಿ ಮಾಡಬೇಕು.


🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕರ ಸೇವಾ ಪುಸ್ತಕ ಸರಿಪಡಿಸಲು “ಗುರುಸ್ಪಂದನ” ಕಾರ್ಯಕ್ರಮ ಆಯೋಜಿಸಿ; ಭೂಸನೂರ

ಸಿಂದಗಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಪುಸ್ತಕಗಳು  ಅಪೂರ್ಣವಾಗಿರುವ ಸೇವಾ ವಿವರ ಹಾಗೂ ಮಾಹಿತಿಯನ್ನು ಪೂರ್ಣಗೊಳಿಸಲು "ಗುರುಸ್ಪಂದನ" ಕಾರ್ಯಕ್ರಮವನ್ನು  ಆಯೋಜಿಸುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ...
- Advertisement -

More Articles Like This

- Advertisement -
close
error: Content is protected !!