ಅಹಿಂಸೆ ಹಾಗೂ ದಿಟ್ಟತನದಿಂದ ಸ್ವಾತಂತ್ರ್ಯ ತಂದುಕೊಟ್ಟವರು ಗಾಂಧಿ ಹಾಗೂ ಶಾಸ್ತ್ರೀಜಿ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

ಸಿಂದಗಿ: ಎಲ್ಲ ವರ್ಗದ ಜನರನ್ನೂ ತಮ್ಮ ಸತ್ಯ ಅಹಿಂಸೆ ಮೂಲಕ ಆದರ್ಶಪ್ರಾಯರಾದವರು, ದೀನದಲಿತರ ಉದ್ಧಾರಕ್ಕೆ ಶ್ರಮಿಸಿದವರು, ಸ್ವಾತಂತ್ರ್ಯ ಹೋರಾಟದ ಜೊತೆಗೆ ಸ್ವದೇಶಿ ವಸ್ತುಗಳ ಬಳಕೆಗೆ ಕರೆ ನೀಡಿ ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡಿದವರು ಗಾಂಧೀಜಿಯವರು ಎಂದು ನಿವೃತ್ತ ಪೊಲೀಸ ಅಧಿಕಾರಿ ಎಂ.ಎಂ.ಹಂಗರಗಿ ಹೇಳಿದರು.

ಪಟ್ಟಣದ ಶ್ರೀ ಸಂಗಮೇಶ್ವರ ಫಾರ್ಮಸಿ ಕಾಲೇಜು ಹಾಗೂ ಸೆಲ್ಯೂಟ್ ತಿರಂಗಾ ರಾಷ್ಟ್ರವಾದಿ ಸಂಘಟನೆಯ ಸಹಯೋಗದಲ್ಲಿ ಮಹಾತ್ಮಾ ಗಾಂಧಿಜೀ ಹಾಗೂ ಲಾಲ ಬಹದ್ದೂರ ಶಾಸ್ತ್ರೀಜಿ ಯವರ ಜನ್ಮ ದಿನಾಚರಣೆಯಲ್ಲಿ ಇಬ್ಬರೂ ಮಹನೀಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಸೆಲ್ಯೂಟ್ ತಿರಂಗಾ ರಾಷ್ಟ್ರವಾದಿ ಸಂಘಟನೆಯ ರಾಜ್ಯಾಧ್ಯಕ್ಷ ಚಂದ್ರಶೇಖರ ನಾಗರಬೆಟ್ಟ, ಸತ್ಯ ಮತ್ತು ಅಹಿಂಸಾತ್ಮಕ ಹೋರಾಟದ ಮೂಲಕ ಜಗತ್ತಿಗೆ ಹೊಸ ಬೆಳಕನ್ನು ನೀಡಿದ ಮಹಾನ ಚೇತನ ಮಹಾತ್ಮಾ ಗಾಂಧೀಜಿ ಮತ್ತು ಸರಳ ವ್ಯಕ್ತಿತ್ವ, ದೃಢ ನಿರ್ಧಾರದ ಪ್ರಾಮಾಣಿಕತೆ ಮತ್ತು ದಕ್ಷತೆಗೆ ಹೆಸರಾದವರು ಮಾಜಿ ಪ್ರಧಾನಿ ದಿ.ಲಾಲ್ ಬಹದ್ದೂರ ಶಾಸ್ತ್ರೀಜಿಯವರು ಎಂದು ಹೇಳಿ, ಮಹಾತ್ಮಾ ಗಾಂಧೀಜಿಯವರು ಶಾಂತಿದೂತರಾಗಿದ್ದರು. ದೇಶದಲ್ಲಿ ಕಿತ್ತು ತಿನ್ನುವ ಬಡತನವನ್ನು ನೋಡಿ ಜೀವನದ ಎಲ್ಲ ಕಷ್ಠಗಳು ನನಗೆ ಇರಲಿ ಎಂದು ತಮ್ಮ ಮೈ ಮೇಲೆ ಅರೆಬರೆ ಬಟ್ಟೆಗಳನ್ನು ಧರಿಸಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದರು. ಬ್ರಿಟೀಷರನ್ನು ದೇಶದಿಂದ ಹೊಡೆದೋಡಿಸಬೇಕು ಎನ್ನುವ ಬೇರೆ ಬೇರೆ ರೀತಿಯ ಸಭೆಗಳನ್ನು ನಡೆಸುತ್ತಿರುವುದರಿಂದ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿ ಕಾಣುತ್ತಿದ್ದರು ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯ ಪಡೆಯುವಲ್ಲಿ ಯಶಸ್ವಿಯಾದರು ಇಂತವರ ಜೀವನ ಚರಿತ್ರೆ ನಾವೆಲ್ಲ ಮನನ ಮಾಡಿಕೊಂಡು ಅವರ ಮಾರ್ಗದಲ್ಲಿ ನಡೆಯೋಣ ಎಂದರು.
ಸೆಲ್ಯೂಟ್ ತಿರಂಗಾ ರಾಷ್ಟ್ರವಾದಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಪಂಡಿತ ಯಂಪೂರೆ ಮಾತನಾಡಿ, ಮಹಾತ್ಮಾ ಗಾಂಧೀಜಿಯವರು ಹೆಣ್ಣು ಮಕ್ಕಳಿಗಾಗಿ ಬೇಟಿ ಪಡಾವೋ ಬೇಟಿ ಬಚಾವೋ ಕಾನೂನು ಜಾರಿಗೆ ತಂದು ಹೆಣ್ಣು ಮಕ್ಕಳು ಮಧ್ಯ ರಾತ್ರಿ ಸ್ವತಂತ್ರವಾಗಿ ತಿರುಗಾಡುತ್ತಾಳೋ ಅಂದು ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಂತೆ ಎಂದು ಹೇಳಿದ್ದರು ಆದರೆ ಇನ್ನೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳಂಥ ಘಟನೆಗಳು ನಿಂತಿಲ್ಲ. ಅದಕ್ಕೆ ಸೆಲ್ಯೂಟ್ ತಿರಂಗಾ ರಾಷ್ಟ್ರವಾದಿ ಸಂಘಟನೆ ಸೈನಿಕರ ಹಾಗೆ ಇಡೀ ರಾಷ್ಟ್ರಾದ್ಯಂತ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಪತ್ರಕರ್ತರ ಸಂಘದ ಅದ್ಯಕ್ಷ ಆನಂದ ಶಾಬಾದಿ ಮಾತನಾಡಿ, ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರೀಜಿ ಯವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೊದಲಿಗರು. ಲಾಲ ಬಹದ್ದೂರ ಶಾಸ್ತ್ರೀಜಿಯವರು ಕಡು ಬಡತನದಲ್ಲಿ ಹುಟ್ಟಿದರು ಕೂಡಾ ಹಣಕ್ಕೆ ಎಂದೂ ಮನಸೋತವರಲ್ಲ. ನದಿಯನ್ನು ಈಜಿ ಶಾಲೆಗೆ ಹೋಗಿ ಶಿಕ್ಷಣ ಕಲಿಯುವ ಜೊತೆಗೆ ದಕ್ಷತೆ ಮತ್ತು ಸಮಯ ಪ್ರಜ್ಞೆಯ ಮೂಲಕ ಜೈಜವಾನ ಜೈ ಕಿಸಾನ ತತ್ವದೊಂದಿಗೆ ರೈತರಿಗೆ ಪ್ರಾಮುಖ್ಯತೆ ನೀಡಿದ ಮಹಾನುಭಾವರು. ಅಲ್ಲದೆ ರಾಜಕಾರಣದಲ್ಲಿ ನಿಪುಣರು ದೇಶದ ಮೊದಲ ಪ್ರಧಾನಿ ಜವಾಹರಲಾಲ ನೆಹರೂ ಅವರ ನಂತರ ಪ್ರಧಾನಿ ಪಟ್ಟ ಏರಿ ಪಾಕಿಸ್ತಾನ ದೇಶ ಯಾವುದೇ ಮುನ್ಸೂಚನೆ ನೀಡದೇ ಭಾರತ ದೇಶದ ಜತೆ ಯುದ್ಧ ಸಾರಿದ್ದಾಗ ಚಾಕಚಕ್ಯತೆಯಿಂದ ಪಾಕಿಸ್ಥಾನವನ್ನು ಸೋಲಿಸಿ ಶರಣಾಗುವಂತೆ ಮಾಡಿದ ಮಹಾನ ವ್ಯಕ್ತಿತ್ವ ಶಾಸ್ತ್ರೀಜಿಯವರದ್ದು ಅವರ ಸಾಮಾಜಿಕ ಬದ್ಧತೆ, ಜೀವನ ಮಾದರಿ ವ್ಯಕ್ತಿತ್ವ ನಮಗೆಲ್ಲ ಸ್ಪೂರ್ತಿಯ ಸೆಲೆ ಅವರ ಸತ್ಯದ ಹಾದಿ ಪ್ರಾಮಾಣಿಕತೆ ನಮಗೆಲ್ಲರಿಗೂ ದೀವಿಗೆಯಾಗಿದೆ ಎಂದು ಹೇಳಿ, ಗಾಂಧೀಜಿಯವರ ದಕ್ಷಿಣ ಆಫ್ರಿಕೆಯಲ್ಲಿನ ಘಟನೆಗಳನ್ನು ನೆನಪಿಸಿದರು.
ಈ ಸಂದರ್ಭದಲ್ಲಿ ಅಶೋಕ ಕುಂಬಾರ ಅಣ್ಣಾರಾಯ ವಾಲಿಕಾರ, ರಾಜು ಕಾಂಬಳೆ, ಮನೋಹರ ಹೊನ್ನಳ್ಳಿ, ಅನಂದ ಕುರುಡೆ ಸೇರಿದಂತೆ ಹಲವರು ಇದ್ದರು.

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!