ಸಿಂದಗಿ: ಅಕ್ಟೋಬರ್ 2, 1869ರಂದು ಭಾರತದ ಗುಜರಾತ್ ರಾಜ್ಯದ ಪೋರಬಂದರ್ ನಲ್ಲಿ ಜನಿಸಿದ ಮೋಹನದಾಸ್ ಕರಮಚಂದ್ ಗಾಂಧಿ ಇಂದು ಮಹಾತ್ಮ ಗಾಂಧಿಯಾಗಿ, ರಾಷ್ಟ್ರಪಿತನಾಗಿ ಎಲ್ಲರ ಮನದಲ್ಲಿ ಉಳಿದಿದ್ದಾರೆ ಅವರು ಉಪವಾಸ ಸತ್ಯಾಗ್ರಹ ಮತ್ತು ಅಸಹಕಾರ ಚಳವಳಿಗಳ ಮೂಲಕ ಪ್ರಪಂಚದಾದ್ಯಂತ ಖ್ಯಾತಿ ಗಳಿಸಿದ ಇವರು ಬ್ರಿಟಿಷರ ಕಪಿಮುಷ್ಟಿಯಿಂದ ಭಾರತವನ್ನು ಬಿಡಿಸಲು ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು ಎಂದು ಜಾನಪದ ಕವಯಿತ್ರಿ ಶಾಲಾ ಮುಖ್ಯಗುರುಮಾತೆ ಸೈನಾಜ ಮಸಳಿ ಹೇಳಿದರು.
ತಾಲೂಕಿನ ಹಿಕ್ಕನಗುತ್ತಿ ಗ್ರಾಮದ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸ್ವತಂತ್ರ ಭಾರತದ ದ್ವಿತೀಯ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಲಾಲ್ ಬಹದ್ದೂರ ಶಾಸ್ತ್ರಿ ಅವರ ತತ್ವ-ಸಿದ್ಧಾಂತಗಳು ಹಾಗೂ
ಗಾಂಧೀಜಿಯವರ ತತ್ವಗಳಿಗೆ ಮುಖ್ಯ ಸ್ಪೂರ್ತಿಯಾಗಿ
ಶಾಂತಿ ಅಹಿಂಸೆಗಳ ಹರಿಕಾರ, ಸತ್ಯದ ಸರದಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ನಿತ್ಯ ನೆನಪು ಇದೆ ಎಂದರು.
ಶಾಲಾ ಶಿಕ್ಷಕಿಯರಾದ ಮಲ್ಲಮ್ಮ ಗುಟಗುಣಕಿ ಹಾಗೂ ಗೀತಾ ಪೀರಗಾ ಮಾತನಾಡಿ, ಭಾರತೀಯ ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ, ಗಾಂಧಿಯವರು ಸರಳವಾದ ಜೀವನವನ್ನು ನಡೆಸಿದರು, ಖಾದಿಯನ್ನು ಧರಿಸಿದ್ದರು ಮತ್ತು ಸ್ಥಳೀಯ ಉತ್ಪಾದನೆಯ ಮೂಲಕ ಸ್ವಾವಲಂಬನೆಯನ್ನು ಉತ್ತೇಜಿಸಿದರು. ಸರಳತೆಗೆ ಅವರ ವೈಯಕ್ತಿಕ ಬದ್ಧತೆಯು ಲಕ್ಷಾಂತರ ಜನರನ್ನು ಅನುಸರಿಸಲು ಪ್ರೇರೇಪಿಸಿತು ಎಂದರು.
ವಿಜಯಲಕ್ಷ್ಮೀ ಪಾಟೀಲ, ಕೆ ಪಲ್ಲವಿ, ಗಿರೀಶ ಇನಮದಾರ, ಚಂದ್ರಶೇಖರ ಮ್ಯಾಗೇರಿ, ಶಿವಪುತ್ರ ಇಂಗಳೇಶ್ವರ, ಶಿವಾನಂದ ಖೈನೂರ,ಎಚ್.ಡಿ.ಹಲಸಂಗಿ, ರಮೇಶ ಕಡಣಿ ಇದ್ದರು.