spot_img
spot_img

ಲಿಂಗಾಯತ ಸಂಘಟನೆ ವತಿಯಿಂದ ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿ ಹಾಗೂ ಹಿರಿಯ ನಾಗರಿಕರ ದಿನಾಚರಣೆ

Must Read

ರವಿವಾರ ದಿ.2 ರಂದು ಬೆಳಗಾವಿ ನಗರದ ಫ. ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಜಿ ಯವರ ಜನ್ಮದಿನಾಚರಣೆ ಮತ್ತು ಹಿರಿಯ ನಾಗರಿಕರ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಿಂಗಾಯತ ಸಂಘಟನೆಯ ಅಧ್ಯಕ್ಷ ಈರಣ್ಣ ದೇಯನ್ನವರ ಮಾತನಾಡಿ, ಶರಣರ ತತ್ವಗಳು ಮತ್ತು ಗಾಂಧೀಜಿಯವರ ತತ್ವಗಳು ನಾವು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಸಾಗಿದರೆ ನಿಜಕ್ಕೂ ಸತ್ಯ ಪ್ರಾಮಾಣಿಕತೆ, ಸನ್ಮಾರ್ಗ, ಸ್ವಾಭಿಮಾನ ಹೋರಾಟದ ಬದುಕು ನಮ್ಮ ಜೀವನವನ್ನು ಮಾದರಿಯಾಗಿ ಸುವುದರಲ್ಲಿ ಸಂದೇಹವಿಲ್ಲ ಎಂದರು.

ಹಿರಿಯ ನಾಗರಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಸವರಾಜ ಗೋಮಾಡಿ, ಜೀವನದಲ್ಲಿ ಸಂಸ್ಕಾರ ಮುಖ್ಯ. ಸಂಸ್ಕಾರ ಮೂಲ ಬೇರಿನಿಂದ ಅಂದರೆ ಬಾಲ್ಯದಿಂದಲೇ ಬಂದರೆ ಮಾತ್ರ ಜೀವನ ಮೌಲ್ಯಯುತವಾಗಿರುತ್ತದೆ. ಆ ನಿಟ್ಟಿನಲ್ಲಿ  ಎಲ್ಲರೂ ಸಂಸ್ಕಾರಕ್ಕೆ ಮಹತ್ವ ಕೊಡಬೇಕು ಎನ್ನುತ್ತಾ ಹಿರಿಯ ನಾಗರಿಕರಿಗೆ ಇರುವ ಸರಕಾರಿ ಸೌಲಭ್ಯಗಳು ಮತ್ತು ವಿವಿಧ ಸೌಕರ್ಯಗಳ ಬಗ್ಗೆ ವಿವರಿಸಿದರು. ಮತ್ತೋರ್ವ ಅತಿಥಿಗಳಾದ ಬಿ.ಎಚ್ ಮಾರದರವರು ಗಾಂಧೀಜಿ ಮತ್ತು ಶಾಸ್ತ್ರೀಯವರ ತತ್ವಾದರ್ಶಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಕಾರ್ಯಕ್ರಮದಲ್ಲಿ ಸಂಘಟನೆಯ ಸದಸ್ಯರಾದ ಶಂಕರ ಗುಡಸ ಸುರೇಶ ನರಗುಂದ, ವಿ.ಕೆ ಪಾಟೀಲ, ಸದಾಶಿವ ದೇವರಮನಿ ,ಎಂ ವೈ ಮೆಣಸಿನಕಾಯಿ ವೀರಭದ್ರ ಅಂಗಡಿ, ಅಕ್ಕಮಹಾದೇವಿ ತೆಗ್ಗಿ  ಸೇರಿದಂತೆ ಸಂಘಟನೆಯ ಸದಸ್ಯರು ಶರಣರು ಭಾಗಿಯಾಗಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಮಹಾದೇವಿ ಅರಳಿ ವಚನ ಪ್ರಾರ್ಥನೆ ಮಾಡಿದರು. ಬಸಮ್ಮ ವಸ್ತ್ರದ ವಚನ ಗಾಯನ ಪ್ರಸ್ತುತಪಡಿಸಿದರು. ಸುರೇಶ ನರಗುಂದ ಕಾರ್ಯಕ್ರಮ ನಿರೂಪಿಸಿದರು  ವಚನ ಮಂಗಲ ದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

- Advertisement -
- Advertisement -

Latest News

ಜಲಜೀವನ ಮಿಷನ್ ಪ್ರಚಾರ ವಾಹನಕ್ಕೆ ಚಾಲನೆ

ಬೈಲಹೊಂಗಲ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ಪ್ರತಿ ಮನೆಗೆ ನಲ್ಲಿಯ ಮೂಲಕ ಶುದ್ಧ ಕುಡಿಯುವ ನೀರು ಜಲಜೀವನ ಮಿಷನ್ ಯೋಜನೆ ಕುರಿತು ಆಟೋ ಪ್ರಚಾರ...
- Advertisement -

More Articles Like This

- Advertisement -
close
error: Content is protected !!