ಗಾಂಧೀಜಿ, ಶಾಸ್ತ್ರೀಜಿ ಜಯಂತ್ಯುತ್ಸವ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಸಿಂದಗಿ: ಗಾಂಧೀಜಿಯವರು ಶಾಂತಿದೂತರಾಗಿದ್ದರು ಕೂಡಾ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದರು. ಮಹಾತ್ಮ ಗಾಂಧೀಜಿಯವರನ್ನು ಕಳೆದುಕೊಂಡ ಜಗತ್ತು ಕರುಣಾಮಯಿ ಏಸುವನ್ನು ಕಳೆದುಕೊಂಡಷ್ಟೆ ದುಃಖ ಅನುಭವಿಸಿತು ಎಂದು ಆಲಮೇಲ ಎಮ್.ಪಿ.ಎಸ್. ಶಾಲೆ ಶಿಕ್ಷಕ ಪಿ.ಬಿ.ಅವಜಿ ಹೇಳಿದರು.

ಪಟ್ಟಣದ ಎಮ್ ಎಸ್ ಗುರುಕುಲ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪ ಪೂ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾದ ಮಹಾತ್ಮ ಗಾಂಧೀಜಿಯವರ 153ನೇ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ 118ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ದೇಶಕ್ಕಾಗಿ ಏನಾದರು ಮಾಡಬೇಕೆಂದು ಅಪೇಕ್ಷಿಸಿ ಅಖಂಡ 33 ವರ್ಷಗಳ ಕಾಲ ತನ್ನ ದೇಶದ ಜನತೆಯ ಮೈಮೇಲೆ ಬಟ್ಟೆ ಹರಿದಿರುವದನ್ನು ಕಂಡು ತಮ್ಮ ಮೈಮೇಲೆ ಅರೆ ಬಟ್ಟೆಯನ್ನು ಧರಿಸಿ ಅಹಿಂಸೆಯನ್ನೇ ತಮ್ಮ ಅಸ್ತ್ರವನ್ನಾಗಿಸಿಕೊಂಡರು ಮಹಾತ್ಮಾ ಗಾಂದಿಜಿಯವರು. ಲಾಲ್ ಬಹಾದುರ್ ಶಾಸ್ತ್ರೀಜಿಯವರು ದೇಶದ ಬಡತನ ಮತ್ತು ಹಸಿವನ್ನು ನೀಗಿಸಲು ಪ್ರತಿ ಸೋಮವಾರ ಒಂದು ಹೊತ್ತು ಊಟವನ್ನು ಬಿಡಬೇಕೆಂದು ಜನತೆಗೆ ಕರೆಕೊಟ್ಟು ತಾವು ಪ್ರತಿ ಸೋಮವಾರ ರಾತ್ರಿಯ ಊಟವನ್ನು ತ್ಯಜಿಸಿ ಶಾಸ್ತ್ರೀಜಿ ಸೋಮವಾರ ಎಂದು ಖ್ಯಾತಿಗಳಿಸಿದರು. ಅವರ ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಶಾಸ್ತ್ರೀಜಿಯವರ ಬ್ಯಾಂಕ್ ಖಾತೆಯಲ್ಲಿ ಇದ್ದ ಹಣ 330 ರೂಪಾಯಿಗಳು ಮಾತ್ರ. ಆಗ ಭಾರತ ಸರ್ಕಾರ ಅವರ ಅಂತ್ಯ ಸಂಸ್ಕಾರದ ವೆಚ್ಚವನ್ನು ಭರಿಸಬೇಕೆಂದು ನಿರ್ಣಯ ಕೈಗೊಂಡಾಗ, ಅವರ ಪತ್ನಿ ಲಲಿತಾರವರು ನನ್ನ ಗಂಡನ ವೇತನದಲ್ಲಿಯೇ ಅವರ ಅಂತ್ಯ ಸಂಸ್ಕಾರ ನೆರವೇರಿಸೋಣ ಸರ್ಕಾರಿ ಹಣ ಮತ್ತು ಭ್ರಷ್ಟಾಚಾರದ ಲೇಪನ ಅವರು ಇಷ್ಟ ಪಡುತ್ತಿರಲಿಲ್ಲ ಎಂದರು.

ಬಬಲೇಶ್ವರ ಹೆಚ್.ಪಿ.ಎಸ್. ಶಾಲೆಯ ಮುಖ್ಯೋಪಾಧ್ಯಾಯ ಆರ್. ಕೆ. ಕುಲಕರ್ಣಿ ಇವರು ಮಾತನಾಡಿ, “ಸತ್ಯ, ಅಹಿಂಸೆ, ತ್ಯಾಗ, ಪ್ರಾಮಾಣಿಕತೆಗಳ ಮೂರ್ತರೂಪ”ವೆ ನಮ್ಮ ಮಹಾತ್ಮಾಜಿ ಹಾಗೂ ಶಾಸ್ತ್ರೀಜಿಯವರು ಆಗಿದ್ದರು ಎಂದು ಹೇಳಿದರು.

- Advertisement -

ಶಾಸ್ತ್ರೀಜಿಯವರು ಹಸಿರು ಕ್ರಾಂತಿಗೆ ಉತ್ತೇಜನ ನೀಡಿದ ನೇತಾರರು ಹಾಗಾಗಿ “ಜೈ ಜವಾನ್ ಜೈ ಕಿಸಾನ್” ಘೋಷಣೆಯನ್ನು ಹೊರಡಿಸಿ ದೇಶದ ಭದ್ರತೆಗಾಗಿ ಸೈನಿಕರು ಮತ್ತು ರೈತರನ್ನು ಹುರಿದುಂಬಿಸಿದರು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಆರ್.ವಿ. ಭಿಂಗೆ ಮಾತನಾಡಿ, ಶಾಸ್ತ್ರೀಜಿಯವರು ಊಟ ಮಾಡುತ್ತಿರುವಾಗ ಮನೆಗೆ ಬಂದ ಸೇನಾ ನಾಯಕರು ಪಾಕಿಸ್ತಾನವು ನಮ್ಮ ದೇಶದ ಮೇಲೆ ದಾಳಿ ಮಾಡಿದೆ ಎಂದು ಹೇಳಿದಾಗ ಪ್ರಧಾನಿ ಶಾಸ್ತ್ರೀಜಿಯವರು ತಕ್ಷಣವೇ ಊಟ ನಿಲ್ಲಿಸಿ ತಮ್ಮ ಪ್ರಧಾನಿ ಕಾರ್ಯಲಯಕ್ಕೆ ತೆರಳಿ ದೇಶದ ಮೂರೂ ಸೇನೆಗೆ ಪಾಕಿಸ್ತಾನದ ಮೇಲೆ ದಾಳಿ ಮಾಡಿ ಲಾಹೋರನ್ನು ವಶಪಡಿಸಿಕೊಂಡು ಬನ್ನಿರಿ ಎಂದು ಆದೇಶಿಸಿದ ದಿಟ್ಟ ನಾಯಕರಾಗಿದ್ದರು ಎಂದು ತಿಳಿಸಿದರು.

ಆರ್. ಎಸ್. ಗಾಯಕವಾಡ ಸ್ವಾಗತಿಸಿ ಪರಿಚಯಿಸಿದರು. ಎಸ್.ಸಿ. ದುದ್ದಗಿ ನಿರೂಪಿಸಿದರು. ಎಸ್.ಎ. ಗುಬ್ಬೇವಾಡ ವಂದಿಸಿದರು.

ಮಹಾವಿದ್ಯಾಲಯದ ಉಪನ್ಯಾಸಕರಾದ ಎಸ್.ಎ. ಬಮ್ಮಣ್ಣಿ, ಎಸ್.ಬಿ. ಪಾಟೀಲ್, ಕುಮಾರಿ ಎಮ್.ಆಯ್. ನಾಟಿಕಾರ, ಗೋವಿಂದ ಬಡಿಗೇರ, ಎಮ್.ಹೆಚ್. ಚಿಲ್ಲಾಪುರ, ಎ.ಎಮ್. ಮಿರಗಿ, ಆರ್.ಎಲ್. ಹಳಗುಂಟಿ. ವಿನೋದ ಬಡಿಗೇರ. ಕುಮಾರಿ ಗಿ.ವಿ. ಪಾಟೀಲ. ಕುಮಾರ ಬೀರಣ್ಣ ಪೂಜಾರ ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!