spot_img
spot_img

ಗಾಂಧೀಜಿ ತತ್ವಾದರ್ಶ ಸದಾಕಾಲ ಪ್ರಸ್ತುತ : ಬಸವರಾಜ ಸುಣಗಾರ

Must Read

- Advertisement -

ಬೆಳಗಾವಿ: ತಾಲೂಕಿನ ಮಾಸ್ತ ಮರಡಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಜಯಂತಿಯನ್ನು ಶ್ರದ್ಧೆ, ಭಕ್ತಿಯಿಂದ ಆಚರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ನಮನ ಸಲ್ಲಿಸಲಾಯಿತು.

ಹಿರಿಯ ಮುಖ್ಯೋಪಾಧ್ಯಾಯರಾದ ಬಸವರಾಜ ಸುಣಗಾರ ರವರು ಮಾತನಾಡಿ, ಮಹಾತ್ಮಾ ಗಾಂಧೀಜಿ ಯವರು ವಿಶ್ವವೇ ಮೆಚ್ಚಿದ ಮಹಾನ್ ವ್ಯಕ್ತಿ, ಜಗತ್ತಿಗೆ ಆದರ್ಶಪ್ರಾಯರಾದವರು.

- Advertisement -

ಅವರೇ ಹೇಳಿದಂತೆ ಅವರ ಜೀವನವೇ ಅವರು ನೀಡಿದ ಸಂದೇಶ ವಾಗಿದೆ,ಅವರ ಸರಳತೆ, ಸ್ವಚ್ಛತೆಗೆ ನೀಡಿದ ಮಹತ್ವ, ಪರಿಶುದ್ಧ ಬದುಕು ಇವುಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಜೊತೆಗೆ ಮಾಜಿ ಪ್ರಧಾನ ಮಂತ್ರಿ, ಜೈಜವಾನ ಜೈಕಿಸಾನ ಘೋಷಣೆ ನೀಡಿ ರಾಷ್ಟ್ರದಲ್ಲಿ ಸ್ವಾವಲಂಬನೆ ಬದುಕು, ಆದರ್ಶ ನಡೆನುಡಿ ಯಿಂದ ಜನರ ಮನಸಿನಲ್ಲಿ ಅಚ್ಚಳಿಯದೆ ಉಳಿದವರು ಲಾಲ್ ಬಹಾದ್ದೂರ ಶಾಸ್ತ್ರೀಜಿ  ಅವರ ಸ್ಮರಣೆ ಸದಾಕಾಲ ಇದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ಹಿಂದವಾಡಿ ನಿವಾಸಿ ರಾಯಚೂರು ನವೋದಯ ಮೆಡಿಕಲ್ ಕಾಲೇಜು ನಿವೃತ್ತ ಪ್ರಾಚಾರ್ಯರಾದ ಡಾ. ಪ್ರಕಾಶ ವಿಶ್ವನಾಥ ಪಾಟೀಲ ರವರು ಆಗಮಿಸಿ  ಸನ್ಮಾನ ಸ್ವೀಕರಿಸಿ ಮಾತನಾಡಿ, ಮಹಾನ್ ವ್ಯಕ್ತಿಗಳ ಸ್ಮರಣೆಯೊಂದಿಗೆ ಅವರ ವಿಚಾರಧಾರೆ ಗಳನ್ನು ವಿದ್ಯಾರ್ಥಿಗಳು ತಿಳಿದು ಅನುಕರಣೆ ಮಾಡಬೇಕೆಂದು ನುಡಿದು, ಸ್ವಚ್ಛತೆಗೆ ಹೆಚ್ಚು ಮಹತ್ವ ನೀಡಿರೆಂದರು.

ಶಾಲಾ ಹಿರಿಯ ಮುಖ್ಯೋಪಾಧ್ಯಾಯರಾದ ಬಸವರಾಜ ಸುಣಗಾರ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶಂಕರ ಅಂಬೋಜಿ ಯವರು ಪೂಜೆ ನೇರವೇರಿಸಿದರು.

- Advertisement -

ಶಿಕ್ಷಕರಾದ ಬಿ ಆರ್ ಪಾಟೀಲರವರು ಕಾರ್ಯಕ್ರಮ ಕುರಿತು ಮಾತನಾಡಿದರು.

ನಲಿಕಲಿ ವಿದ್ಯಾರ್ಥಿಗಳು ಗಾಂಧೀಜಿ ಕುರಿತು ಹಾಡನ್ನು ಹೇಳಿದರು.

ಶಾಲೆಯ ಪರಿಸರದಲ್ಲಿ ಸ್ವಚ್ಛತೆ ಮಾಡುವ ಮೂಲಕ ಶ್ರಮದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿ ಎಮ್ ಸಿ ಸದಸ್ಯರಾದ ಈರಪ್ಪ ಮಾತಾರಿ, ಅಪ್ಪಯ್ಯ ತಾನಸಿ ಸೇರಿದಂತೆ ಶಾಲಾ ಶಿಕ್ಷಕ-ಶಿಕ್ಷಕಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

- Advertisement -
- Advertisement -

Latest News

ವಿದ್ಯಾರ್ಜನೆ ಯಾತಕ್ಕಾಗಿ?

ತಾವು ಕಲಿತು ಆರoಕಿ ಸಂಬಳ ಗಿಟ್ಟಿಸುವ ಕೆಲಸಕ್ಕೆ ಅರ್ಹತೆ ಪಡೆದಿಲ್ಲ. ತನ್ನ ಮಕ್ಕಳು ಪ್ರಾರಂಭದಲ್ಲಿಯೇ ಆರoಕೆ ಸಂಬಳ ಗಿಟ್ಟಿಸುವಾಗ ಯಾವ ಹೆತ್ತವರು ಬೀಗುವುದಿಲ್ಲ ಹೇಳಿ...ಈಗಿನ ದಿನಗಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group