spot_img
spot_img

ಮಲೆನಾಡಿನ ಗೌರಿ ಗಣೇಶ ಹಬ್ಬ

Must Read

spot_img
- Advertisement -

ಮಲೆನಾಡು ಎಂದಾಕ್ಷಣ ನೆನಪಾಗುವುದೇ ಗಿರಿ, ವನ,ಬಾಗಿದ ಬಳ್ಳಿಗಳು ಕಾಡು ಪ್ರಾಣಿಗಳ ಶಬ್ದ, ಹಕ್ಕಿ ಪಕ್ಷಿಗಳ ಕಲರವ ಜುಳು ಜುಳು ಹರಿಯುವ ನದಿಗಳು, ಧುಮುಕುವ ಜಲಪಾತ ಒಂದೇ ಎರಡೇ ಹೇಳ ಹೊರಟರೆ ಸಾಗರದಷ್ಟು ಅಪಾರ. ಇಲ್ಲಿನ ಹಬ್ಬಗಳ ಆಚರಣೆ ಇನ್ನೂ ವಿಶೇಷ. ಗಣೇಶನನ್ನು ಮನೆಗೆ ಆಹ್ವಾನಿಸುವ ಮುನ್ನ ಆತನ ತಾಯಿ ಗೌರಿಯನ್ನು ಮನೆಗೆ ಆಹ್ವಾನಿಸಲಾಗುತ್ತದೆ ದಿನವನ್ನೇ ನಾವು ಗೌರಿ ಹಬ್ಬವೆಂದು ಆಚರಿಸುತ್ತೇವೆ.

ಮಲೆನಾಡಿನ ಸೊಗಡು ಬೇರೆಯದ್ದೆ ಆಗಿರುತ್ತದೆ.ಇಲ್ಲಿನ ಸಾಂಪ್ರದಾಯಿಕ ಮತ್ತು ಆಧ್ಯಾತ್ಮಿಕ ಜೀವನ ಶೈಲಿ ಗೌರಿ ಗಣೇಶ ಹಬ್ಬಕ್ಕೆ ಸಂಬಂಧಿಸಿದ ಕೆಲವು ಸಂಗತಿಗಳು ವಿಭಿನ್ನವಾಗಿವೆ.ಇಲ್ಲಿ ವಿಶೇಷವಾಗಿ ಎಲ್ಲಾ ಮಹಿಳೆಯರು ತಮ್ಮ ತವರು ಮನೆಯಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ.

ಈ ದಿನ ಮಹಿಳೆಯರು ಬೆಳಗಿನಿಂದ ಉಪವಾಸ ಇದ್ದು ಪರಿಶುದ್ಧತೆಯಿಂದ ಅಡುಗೆ ಮಾಡಿ ನಂತರ ಗೋಧೋಳಿ ಮುಹೂರ್ತದಲ್ಲಿ ಸ್ತ್ರಿಯರು ಹೊಸ ಬಟ್ಟೆ ಧರಿಸಿ ಪೂಜಾ ಸಾಮಾಗ್ರಿಗಳನ್ನು ತೆಗೆದುಕೊಂಡು ಹೊಳೆಯ ಅಂದರೆ ಹರಿಯುವ ನೀರಿನಲ್ಲಿ ಹೋಗಿ ಕಳಸ ಮಾಡಿ ಶುದ್ಧವಾದ ನೀರು ಬಿಂದಿಗೆಯಲ್ಲಿ ತುಂಬಿಕೊಂಡು ಆ ಬಿಂದಿಗೆ ನೀರಿನಲ್ಲಿ ಮಹಿಳೆಯರು ಒಬ್ಬ ಮಹಿಳೆ ಮೂರು ಕಲ್ಲುಗಳ ಹಾಕಿ ಪೂಜೆ ಮಾಡಿ ಮನೆಗೆ ತೆಗೆದುಕೊಂಡು ಬರುತ್ತಾರೆ ನಂತರ ಮನೆಯಲ್ಲಿ ಒಬ್ಬರು ಇದ್ದು ಹೊಳೆಯಿಂದ ಬಂದವರ ಕಾಲಿಗೆ ನೀರು ಹಾಕಿ ಒಳಗೆ ಕರೆಯುತ್ತಾರೆ ನಂತರ ಆ ಕಳಸವನ್ನು ಮಂಟಪದ ಒಳಗೆ ಇಡುತ್ತಾರೆ ಈ ಮಂಟಪವನ್ನು ಗಂಡಸರು ಬೆಳಗ್ಗೆ ಎದ್ದು ಕಾಡಿಗೆ ಹೋಗಿ ಏಳು ತರದ ಹೂ, ಸೊಪ್ಪು ,ಗೆಡ್ಡೆ ಗೆಣಸು ತಂದು ಬಾಳೆಯ ರಂಬೆಯಿಂದ ಗೌರಿ ಮಂಟಪ ಮಾಡಿ ಅದಕ್ಕೆ ಹೂವು ಹಣ್ಣು ಕಟ್ಟುತ್ತಾರೆ ನಂತರ ಅಡುಗೆ ಮಾಡಿದ್ದನ್ನು ನ್ಯೆವೆದ್ಯ ಮಾಡುತ್ತಾರೆ ಹೊಳೆಯಿಂದ ಹಚ್ಚಿಕೊಂಡು ಬಂದ ದೀಪವನ್ನು ಬೆಳಗಾಗುವವರೆಗೆ ಆರದಂತೆ ನೋಡಿಕೊಳ್ಳುತ್ತಾರೆ ಹಾಗೆ ಮೂರು ದಿನ ಇಟ್ಟು ಮತ್ತೆ ಅದೆ ತರ ನದಿಗೆ ಹೋಗಿ ಆ ನೀರನ್ನೂ ಚೆಲ್ಲಿ ಹೊಸ ನೀರು ತುಂಬಿಕೊಂಡು ಮತ್ತೆ ಮನೆಗೆ ಬರುತ್ತಾರೆ ಅದು ಗಂಗೆ ಪೂಜೆ ಎಂದು ಮಾಡುತ್ತಾರೆ ಇನ್ನೊಂದು ವಿಷಯ ಗೌರಿಗೆ ಮೂರು ದಿನದಲ್ಲಿ ಕೊನೆಯ ದಿನ ಏಳು ಸಲ ಊಟ ಬಡಿಸುವ ಪದ್ದತಿ ಪಕ್ಷದ ಮನೆಯ ಹೆಂಗಸರು ಊಟ ತೆಗೆದುಕೊಂಡು ಬರುತ್ತಾರೆ.

- Advertisement -

ಶ್ರಾವಣ ಮಾಸ ಕಳೆದು ಭಾದ್ರಪದ ಮಾಸದ ನಾಲ್ಕನೇ ದಿನ ಗಣೇಶ ಚತುರ್ಥಿ. ಅದಕ್ಕಿಂತ ಮೊದಲು ಅಂದರೆ ತೃತೀಯ ತಿಥಿಯ ದಿನ ಗಣೇಶನ ತಾಯಿ ಗೌರಿ ಹಬ್ಬ. ಇದಕ್ಕೆ ಇಲ್ಲಿ ಆಚರಣೆ ನಡೆಯುತ್ತದೆ. ಇಲ್ಲಿ ದ್ವೀತಿಯಾ ತಿಥಿ ದಿನ ಹೆಣ್ಣುಮಕ್ಕಳು ತವರಿಗೆ ಮರಳಿ ಮಾಂಸಾಹಾರಿ ಊಟ ಮಾಡುತ್ತಾರೆ. ಏಕೆಂದರೆ ಇಡೀ ಒಂದು ತಿಂಗಳ ಕಾಲ ಶ್ರಾವಣ ಮಾಸದಲ್ಲಿ ಯಾವುದೇ ರೀತಿಯ ಮಾಂಸಾಹಾರ ಸೇವನೆ ನಿಷಿದ್ಧ. ಹಾಗಾಗಿ ತವರಿಗೆ ಮರಳಿದ ಹೆಣ್ಣು ಮಕ್ಕಳು ಅಂದು ವಿಶೇಷ ರೀತಿಯ ಮಾಂಸಾಹಾರ ಸೇವನೆ ಮಾಡುತ್ತಾರೆ. ನಂತರ ಅದನ್ನು ಸ್ವಚ್ಚ ಮಾಡಿ ಮುಂದಿನ ಕಾರ್ಯಕ್ಕೆ ಅಣಿಯಾಗುತ್ತಾರೆ.ಮನೆಯ ಅಣ್ಣ ತಮ್ಮಂದಿರು ತಮ್ಮ ಸಹೋದರಿಯರಿಗೆ ಬಾಳೆ ಮಂಟಪ ಕಟ್ಟಿ ಕೊಡುವ ಸಲುವಾಗಿ ಬಾಳೆ ತೋಟಕ್ಕೆ ಹೋಗಿ ಬಾಳೆ ದಿಂಡು ತರುತ್ತಾರೆ. ನಂತರ ಇದರಲ್ಲಿ ಮಂಟಪ ಮಾಡಿ ಕಾಡಿನಲ್ಲಿ ಸಿಗುವ ಗಜ ಗಂಡೆ ಹಣ್ಣು,,ಬರಲಕ್ಕಿ ಹೂ,ಅಕ್ಕ ತಂಗಿ ಹೂ, ತಾಳಿಸರ, ಜ್ವಾರಲಕಾಯಿ, ಮಡಂಗ್ಲಕಾಯಿ, ಚಪ್ಪನ್ ಚೋಳಿ, ನೆಲ ಗೊಲ್ಟೆ ಕಾಯಿ,ಇವುಗಳಿಂದ ಅಲಂಕರಿಸುತ್ತಾರೆ. ಗೌರಿಗೆ ಹಿರಿಯರ ತಾಳಿ ಸರ ಹಾಕುವುದು. ಈ ತಾಳಿ ನೀಡಿದವರು ಮೂರು ದಿನ ಹೊಸಿಲು ದಾಟುವ ಹಾಗಿಲ್ಲ. ಇದರ ಅರ್ಥ ಗೌರಿಯ ರೂಪದಲ್ಲಿ ಮುತ್ತೈದೆ ಭಾಗ್ಯ ಮನೆಯಲ್ಲಿ ಇರುತ್ತದೆ. ನಂತರ ಗೌರಿ ತರಲು ಊರಿನ ಎಲ್ಲ ಸಖಿಯರು ಶಾಸ್ತ್ರ ಸಂಪ್ರದಾಯದಂತೆ ಸ್ಥಳೀಯವಾಗಿ ಅರ್ಚಕರ ಅನುಮತಿಯಂತೆ ಗೌರಿ ತರುವ ಮುಹೂರ್ತ ಕೇಳಿ ಹತ್ತಿರದ ಹೊಳೆಗೆ ತೆರಳುತ್ತಾರೆ. ಅಲ್ಲಿ ಊರಿನ ಎಲ್ಲ ಸಖಿಯರು ಬಂದ ಮೇಲೆ ಹೊಳೆಗೆ ಪೂಜೆ ಸಲ್ಲಿಸುತ್ತಾರೆ. ಕೈ ಕೈ ಹಿಡಿದು ನೀರು ಮೊಗೆದು ಬಿಂದಿಗೆಗೆ ಹಾಕುತ್ತಾರೆ. ಕಲ್ಲು ಆಯ್ದು ಬಿಂದಿಗೆ ಹಾಕಿ ಕಳಸ ಮಾಡುತ್ತಾರೆ. ನಂತರ ಕಳಸದ ಪೂಜೆ ಸಲ್ಲಿಸುತ್ತಾರೆ. ಜಾಗಟೆ ಗಂಟೆ ಬಾರಿಸುತ್ತ ಮನೆಗೆ ಗೌರಿಯನ್ನು ಆಹ್ವಾನ ಮಾಡುತ್ತಾರೆ. ರಾತ್ರಿ ಊಟಕ್ಕೆ ಕಡುಬು ಕಜ್ಜಾಯ ಚಕ್ಕಲಿ ಹೋಳಿಗೆ ತಂಬಿಟ್ಟು ಐದು ವಿಧದ ಪಲ್ಯ ಮಾಡಿ ನೈವೆಧ್ಯವನ್ನು ಬಾಳೆ ಎಲೆಯಲ್ಲಿ ಮಾಡುತ್ತಾರೆ. ನಂತರದಲ್ಲಿ ಭತ್ತದ ಹೊದ್ಲು (ಪಾಪ್ ಕಾರ್ನ್) ೯ಬಾಳೆಹಣ್ಣು ಎಡೆ ಮಾಡುತ್ತಾರೆ.ಪೂಜೆಗೆ ಹಾಲು ಅವಶ್ಯಕ. ಅಂದು ಬೆಳಿಗ್ಗೆಯಿಂದ ಗೌರಿ ಬರುವ ವರೆಗೂ ಹೆಂಗಳೆಯರು ಉಪವಾಸ ವೃತ ಮಾಡುತ್ತಾರೆ. ಅಂದು ರಾತ್ರಿ ಮನೆಯ ಗಂಡು ಮಕ್ಕಳಿಗಿಂತ ಮೊದಲು ಊಟ ಮಾಡುತ್ತಾರೆ.. ಊಟ ಮಾಡಿದ ಬಾಳೇ ಎಲೆ ಎಸೆಯದೆ ತೊಳೆದು ಮನೆಯ ಮಾಡಲ್ಲಿ ಇಡುತ್ತಾರೆ. ಬಾಳೆ ಎಲೆ ಬೇಗ ಬಾಡಿದರೆ ತವರಿಗೆ ಶ್ರೇಯಸ್ಸಲ್ಲ ಎನ್ನುವುದು ಇಲ್ಲಿನ ನಂಬಿಕೆ.ಅಂದು ರಾತ್ರಿಯಿಡೀ ಜಾಗರಣೆ ಮಾಡಿ ದೀಪ ಕಾಯುತ್ತಾರೆ ಮಾರನೇ ದಿನ ಗಣೇಶ ಚತುರ್ಥಿ ಅಂದು ಯಾವುದೇ ರೀತಿಯ ಹಬ್ಬದ ಸಡಗರ ಇರುವುದಿಲ್ಲ.ಮೂರನೆ ದಿನ ದೋಸೆ ರಾತ್ರಿ ಅಕ್ಕ ಪಕ್ಕದ ಮನೆಗೆ ಹೋಗಿ ಗೌರಿ ಉಣ ಬಡಿಸಲು ಬಗೆ ಬಗೆಯ ತಿಂಡಿ ಒಯ್ಯುತ್ತಾರೆ ಗೌರಿ ಹಾಡು ಹೇಳುವುದು. ಆರತಿ ಎತ್ತಬೇಕು. ಸಂಜೆ ದೋಸೆ ಹಾಲು ದೊಡ್ಲಿ ಕಾಯಿ ಉಪ್ಪಿನಕಾಯಿ ಬುತ್ತಿ ಬಾಳೆ ಎಲೆಯಲ್ಲಿ ಕಟ್ಟಿ‌ ಇಡುತ್ತಾರೆ ಅಂದು ಯಾರೂ ಊಟ ಮಾಡುವಂತಿಲ್ಲ. ಹೆಂಗಸರು ಹೊರಗೆ ಇದ್ದು ಗಂಡು ಮಕ್ಕಳು ತಮ್ಮ ಸಹೋದರಿಯರು ಹಾಕಿದ ಬಾಳೆ ದಿಂಡಿನ ಮಂಟಪ ಕೆಡಿಸಿ ಬುಟ್ಟಿ ತುಂಬಿ ಹರಿಯುವ ನೀರಿನಲ್ಲಿ ಬಿಟ್ಟು ಬರುತ್ತಾರೆ. ಗೌರಿ ತಂದ ಕಳಸವನ್ನು ಹೆಣ್ಣು ಮಕ್ಕಳು ಹೊಳೆಗೆ ಬಿಡಲು ಹೋಗುತ್ತಾರೆ. ಹಿರಿಯರ ‌ಹೆಸರಲ್ಲಿ ಹಾಗೂ ತಮ್ಮ ಪತಿಯ ಹೆಸರಿನಲ್ಲಿ ಮಕ್ಕಳ ಹೆಸರಿನಲ್ಲಿ ಹೀಗೆ ತಮ್ಮ ಇಡೀ ಕುಟುಂಬದ ಸದಸ್ಯರ ಹೆಸರಿನಲ್ಲಿ ಒಂದೊಂದಾಗಿ ದೀಪವನ್ನು ಹೊಳೆಯಲ್ಲಿ ಬಿಡುತ್ತಾರೆ. ನಂತರ ಎಲ್ಲ ಸಖಿಯರು ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ದೀಪ ಬಿಟ್ಟು ಕೈ ಕೈ ಹಿಡಿದು ಹೊಸ ನೀರು ತುಂಬಿ ಗಂಗೆಯನ್ನು ಮನೆಗೆ ತರುತ್ತಾರೆ. ಮನೆಯಲ್ಲಿ ಕೇವಲ ಬರಿ ಕಳಸ ಬಾಳೆ ಗೊನೆ ಹಾಲು ಹಣ್ಣು ಇಟ್ಟು ಪೂಜೆ ಸಲ್ಲಿಸುತ್ತಾರೆ.

ಈ ಪೂಜೆಗೆ ನೈವೇದ್ಯ ಮಾಡಿದ ಬಾಳೆಹಣ್ಣುಗಳನ್ನು ಮನೆಯ ಹೆಣ್ಣುಮಕ್ಕಳು ತಿನ್ನುವುದಿಲ್ಲ.

ಗೌರಿ ಹಬ್ಬ

ಗಣೇಶ ಚತುರ್ಥಿ ಎಂದಾಕ್ಷಣ ಗೌರಿ ಹಬ್ಬವನ್ನು ಕೂಡ ಆಚರಿಸಬೇಕು. ಗಣೇಶ ಚತುರ್ಥಿಯ ಹಿಂದಿನ ದಿನ ಗೌರಿ ಹಬ್ಬವನ್ನು ಆಚರಿಸಲಾಗುತ್ತದೆ. ಪಾರ್ವತಿ ದೇವಿಯ ಅವತಾರವಾದ ಗೌರಿಯನ್ನು ಈ ಹಬ್ಬದಂದು ಪೂಜಿಸಲಾಗುತ್ತದೆ. ಈ ಹಬ್ಬವು ಮಹಿಳೆಯರಿಗೆ ಅತ್ಯಂತ ವಿಶೇಷವಾಗಿದ್ದು, ಈ ದಿನ ಮಹಿಳೆಯರು ಗೌರಿಯ ಆಶೀರ್ವಾದವನ್ನು ಪಡೆಯಲು ಹಾಗೂ ಸುಖಮಯ ವೈವಾಹಿಕ ಜೀವನಕ್ಕಾಗಿ ಗೌರಿ ದೇವಿಯನ್ನು ಪೂಜಿಸುತ್ತಾರೆ

ಗೌರಿ ಹಬ್ಬದ ಪೂಜಾ ವಿಧಾನ ಪೂಜಾ ವಿಧಾನ ಮತ್ತು ಪ್ರಯೋಜನ

- Advertisement -

ಈ ದಿನ ಗೌರಿಯನ್ನು ಪೂಜಿಸುವುದರಿಂದ ತಾಯಿ ಗೌರಿಯು ಮುತ್ತೈದೆಯಂತೆ ಮನೆಗೆ ಪ್ರವೇಶಿಸುತ್ತಾಳೆನ್ನುವ ನಂಬಿಕೆಯಿದೆ. ಗೌರಿ ಹಬ್ಬವನ್ನು ಮಹಾರಾಷ್ಟ್ರ ಸೇರಿದಂತೆ ಇನ್ನಿತರ ಉತ್ತರ ಭಾರತದ ರಾಜ್ಯಗಳಲ್ಲಿ ಹರ್ತಾಲಿಕಾ ತೀಜ್‌ ಎಂದು ಕರೆಯುತ್ತಾರೆ, ಗೌರಿ ಹಬ್ಬವನ್ನು ಮಂಗಳ ಗೌರಿ ಪೂಜೆಯೆಂದೂ ಕರೆಯುವುದುಂಟು

ಗೌರಿಯನ್ನು ಮನೆಗೆ ಆಹ್ವಾನಿಸುವ ವಿಧಾನ

ಸಮೃದ್ಧಿ, ಸುಖ ಮತ್ತು ಶಕ್ತಿ ದೇವತೆಯೆಂದು ಪರಿಗಣಿಸಲಾಗುವ ಗೌರಿ ದೇವಿಯನ್ನು ಗಣೇಶ ಚತುರ್ಥಿಗೂ ಮುನ್ನ ಮನೆಗೆ ಸ್ವಾಗತಿಸಲಾಗುತ್ತದೆ. ಗೌರಿ ಪೂಜೆಯ ವಿಧಿ – ವಿಧಾನಗಳು ಪ್ರದೇಶಕ್ಕೆ ಅನುಗುಣವಾಗಿ ಬದಲಾಗುತ್ತದೆ. ಗಣೇಶನನ್ನು ಮನೆಗೆ ಆಹ್ವಾನಿಸುವ ಮುನ್ನ ಆತನ ತಾಯಿ ಗೌರಿ ಅಂದರೆ ಪಾರ್ವತಿಯನ್ನು ಮನೆಗೆ ಸ್ವಾಗತಿಸಲಾಗುತ್ತದೆ. ಗೌರಿಯನ್ನು ಮನೆಯಲ್ಲಿ ಕೂರಿಸುವುದರಿಂದ ಆ ಮನೆಯ ಸಮೃದ್ಧಿ ಮತ್ತು ಸಂಪತ್ತು ಹೆಚ್ಚಾಗುತ್ತದೆ ಎನ್ನುವ ನಂಬಿಕೆಯಿದೆ. ಈ ದಿನ ಸುಮಂಗಲಿಯರು ಮನೆ ಮುಂದೆ ರಂಗೋಲಿಯನ್ನು ಹಾಕಿ, ಮನೆಯನ್ನು ಶುದ್ಧಗೊಳಿಸಿ, ಅಲಂಕಾರವನ್ನು ಮಾಡಿ ಗೌರಿಯನ್ನು ಆಹ್ವಾನಿಸಬೇಕು

ಗಣೇಶ ವಿಸರ್ಜನೆ ಮಾಡುವುದು ಯಾವಾಗ? ವಿಸರ್ಜನೆಯ ಮಹತ್ವಗಳೇನು ಗೊತ್ತಾ?

ಗೌರಿ ಪೂಜಾ ವಿಧಾನ:

  1. ಗೌರಿ ದೇವಿಯ ಮೂರ್ತಿಯನ್ನು ಗಣೇಶ ಚತುರ್ಥಿ ಹಿಂದಿನ ದಿನ ಮನೆಗೆ ತರಲಾಗುತ್ತದೆ. ಗೌರಿಯನ್ನು ಮನೆಗೆ ಆಹ್ವಾನಿಸುವ ಮುನ್ನ ಆ ಮನೆಯ ಮಹಿಳೆಯರು ಸ್ನಾನ ಮಾಡಿ, ಶುದ್ಧರಾಗಿ ಮನೆಯನ್ನು ಅಲಂಕರಿಸಿ ಮನೆ ಮುಂದೆ ರಂಗೋಲಿಯನ್ನು ಹಾಕುತ್ತಾರೆ.
  2. ಸ್ವರ್ಣ ಗೌರಿ ಹಬ್ಬವೆಂದು ಕರೆಯಲಾಗುವ ಗೌರಿ ಹಬ್ಬದಂದು ಮಹಿಳೆಯರು ಸಾಂಪ್ರಧಾಯಿಕ ಉಡುಪನ್ನು ಧರಿಸಿ, ನಂತರ ಅರಶಿಣದಿಂದ ಗೌರಿ ವಿಗ್ರಹವನ್ನು ರಚಿಸಬೇಕು. ಹಾಗೂ ಮಂತ್ರದ ಮೂಲಕ ಗೌರಿಯನ್ನು ಆಹ್ವಾನಿಸಬೇಕು.
  3. ಮಂತ್ರ: “ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ”.ಈ ಮಂತ್ರವನ್ನು ಸ್ವರ್ಣಗೌರಿ ಹಬ್ಬದ ದಿನ 108 ಬಾರಿ ಶ್ರದ್ಧಾ ಹಾಗೂ ಭಕ್ತಿಯಿಂದ ಪೂಜಿಸಬೇಕು. ನಂತರ ಅರಶಿಣದಿಂದ ತಯಾರಿಸಿದ ಗೌರಿ ವಿಗ್ರಹವನ್ನು ಅಕ್ಕಿ ಮತ್ತು ಧಾನ್ಯಗಳನ್ನು ಹಾಕಿರುವ ಬಟ್ಟಲಿನಲ್ಲಿ ಇಡಬೇಕು.
  4. ನಂತರ ಗೌರಿಗೆ ಸ್ವಚ್ಛತೆ ಮತ್ತು ಭಕ್ತಿಯಿಂದ ಪೂಜೆ ಮಾಡಲಾಗುತ್ತದೆ.

ಗೌರಿ ಹಬ್ಬದಲ್ಲಿ ಬಾಗಿನ ಮಹತ್ವ

ಗೌರಿಯಿಟ್ಟ ಜಾಗದಲ್ಲಿ ಬಾಳೆಗಿಡವನ್ನು ಇಟ್ಟು, ಸುತ್ತಲೂ ಮಾವಿನ ಎಲೆಗಳನ್ನು ಕಟ್ಟಿ ದೇವಿಗೆ ಮಂಟಪವನ್ನು ರಚಿಸಲಾಗುತ್ತದೆ. ಈ ಮಂಟಪವನ್ನು ಹೂವು ಹಾಗೂ ಇನ್ನಿತರ ವಸ್ತಿಗಳಿಂದ ಅಲಂಕಾರ ಮಾಡಬಹುದು.

ಗೌರಿ ಪೂಜೆಯಲ್ಲಿ ಮಹಿಳೆಯರು ಗೌರಿದಾರವೆಂದು ಕರೆಯಲಾಗುವ ಅರಶಿಣದ ದಾರವನ್ನು 16 ಸುತ್ತು ಬರುವವರೆಗೆ ತಮ್ಮ ಕೈ ಮಣಿಕಟ್ಟಿಗೆ ಕಟ್ಟಿಕೊಳ್ಳುತ್ತಾರೆ.

ಗೌರಿ ಪೂಜೆಯಂದು ಮಹಿಳೆಯರು 5 ಬಾಗಿನವನ್ನು ತಯಾರಿಸಿ, ಒಂದನ್ನು ದೇವಿಗೆ ಅರ್ಪಿಸಿ ನಂತರ ಉಳಿದ ನಾಲ್ಕು ಬಾಗಿನವನ್ನು ಮುತ್ತೈದೆಯರಿಗೆ ನೀಡಲಾಗುತ್ತದೆ.

ಪೂಜೆಯಲ್ಲಿ ದೇವಿಗೆ ಹೋಳಿಗೆ, ಒಬ್ಬಟ್ಟು ಅಥವಾ ಪಾಯಸವನ್ನು ಅರ್ಪಿಸಲಾಗುತ್ತದೆ. ದೇವಿಗೆ ಕೇವಲ ಸಿಹಿ ಖಾದ್ಯವನ್ನು ಅರ್ಪಿಸಬೇಕು. ಮರುದಿನ ಗಣೇಶನನ್ನು ಮನೆಗೆ ಸ್ವಾಗತಿಸಲಾಗುತ್ತದೆ. 10 ದಿನಗಳ ಪೂಜೆಯ ನಂತರ ಗಣೇಶ ವಿಗ್ರಹವನ್ನು ಮತ್ತು ಗೌರಿ ವಿಗ್ರಹವನ್ನು ನೀರಿನಲ್ಲಿ ವಿಸರ್ಜಿಸಲಾಗುತ್ತದೆ

ಗೌರಿಗೆ ಬಾಗಿನ ಕೊಡುವುದು

ಮೊರದ ಬಾಗಿನಕ್ಕೆ ಅಣಿಯಾದ ಮೊರವನ್ನು ಶುದ್ಧಗೊಳಿಸಿ ಅದಕ್ಕೆ ಅರಶಿಣ ಮತ್ತು ಕುಂಕುಮವನ್ನು ಹಚ್ಚಬೇಕು. ನಂತರ ಬಾಗಿನಕ್ಕಾಗಿ ಧಾನ್ಯಗಳನ್ನು, ಬಳೆಗಳು, ತೆಂಗಿನಕಾಯಿಯನ್ನು, ಕನ್ನಡಿ, ಬಳೆಬಿಚ್ಚೋಲೆ, 5 ಬಗೆಯ ಹಣ್ಣುಗಳು, ತಾಯಿಗೆ ಹಾಗೂ ಅತ್ತಿಗೆಗೆ ಸೇರಿದಂತೆ ನಾದಿನಿಯರಿಗೆ ಸೀರೆಯನ್ನು ಇಡಿ, ರವಿಕೆ ಬಟ್ಟೆ ಮತ್ತು ಸುಮಂಗಲಿಯರು ಬಳಸುವ ವಸ್ತುಗಳನ್ನು, ಖಾದ್ಯಗಳನ್ನು ಇಟ್ಟು ಮೊರದ ಬಾಗಿನ ಸಿದ್ಧ ಪಡಿಸಬೇಕು.

ಗೌರಿ ಹಬ್ಬದ ಮಹತ್ವ

ಗೌರಿ ಹಬ್ಬದಂದು ಮನೆಯ ಹೆಣ್ಣು ಮಕ್ಕಳು ಕೈಗಳಿಗೆ ಹಾಕಿಕೊಂಡು ಸುಂದರವಾಗಿ ಅಲಂಕಾರವನ್ನು ಮಾಡಿಕೊಳ್ಳುತ್ತಾರೆ. ಗೌರಿ ಹಬ್ಬದಂದು ತಾಯಿ ಪಾರ್ವತಿಯು ತನ್ನ ತಂದೆಯ ಮನೆಗೆ ಬರುತ್ತಾಳೆ ಎನ್ನುವ ನಂಬಿಕೆಯಿದೆ. ಆಕೆ ತಂದೆಯ ಮನೆಗೆ ಬಂದು ಬಾಗಿನವನ್ನು ಸ್ವೀಕರಿಸುತ್ತಾಳೆ ಎನ್ನುವ ನಂಬಿಕೆಯಿರುವುದರಿಂದ ಈ ದಿನ ಬಾಗಿನಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಗೌರಿ ಪೂಜೆಯನ್ನು ಮಾಡುವುದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ, ಆಯಸ್ಸು ಮತ್ತು ಆರೋಗ್ಯ ಹೆಚ್ಚಾಗುವುದು ಎನ್ನಲಾಗುತ್ತದೆ.

ಹೀಗೆ ಗೌರಿ ಹಬ್ಬದ ಸಡಗರ ಮಲೆನಾಡಿನಾದ್ಯಂತ ಮನೆಮಾತಾಗಿದೆ.


ಶ್ರೀ ಇಂಗಳಗಿ ದಾವಲಮಲೀಕ

- Advertisement -
- Advertisement -

Latest News

ಶರಣರ ಚರಿತ್ರೆ ಆಲಿಸುವದರಿಂದ ಜೀವನ ಪಾವನ; ಹಂಗರಗಿ

ಸಿಂದಗಿ: ಪುರಾಣ ಎಂಬುದು ಪುಂಡರಗೋಷ್ಠಿಯಲ್ಲ ಪುರಾಣ ಎಂದರೆ ಅಧ್ಯಾತ್ಮ ಶರಣರ ಬದುಕಿನ ಅರ್ಥ ತಿಳಿದುಕೊಂಡು ಅವರ ಹಾದಿಯಲ್ಲಿ ಸಾಗುವ ನಡೆ ಕಲಿಸುವ ಧರ್ಮದ ಪಾಠಶಾಲೆ ಇದ್ದಂತೆ...
- Advertisement -

More Articles Like This

- Advertisement -
close
error: Content is protected !!
Join WhatsApp Group