- Advertisement -
ಗಝಲ್
ನನ್ನೆದೆಯ ಬಿತ್ತಿಯಲಿ ನಿನ್ನದೇ ಛಾಯೆ ದೊರೆ
ಹೊರಹೊಮ್ಮಿದ ಕನಸುಗಳಲ್ಲಿ ನೀನೇ ಮಾಯೆ ದೊರೆ
ಬಾಂದಳದ ಹೃದಯ ವೀಣೆಯಲಿ
ರಾಗ ನೀನೇ ದೊರೆ
ಗರಿ ಬಿಚ್ಚಿ ಕುಣಿಯುವ ನವಿಲು
ನಾಟ್ಯದಲಿ ನಿನ್ನದೇ ಛಾಯೆ ದೊರೆ
- Advertisement -
ಮುಂಜಾವಿನ ಮಂಜಿನ ಹನಿ ಹನಿ ಮುತ್ತುಗಳಲಿ ನಿನ್ನದೇ ಛಾಯೆ ದೊರೆ
ನಾ ಬಿಡಿಸಿದ ಬಣ್ಣ ಬಣ್ಣದ ರಂಗವಲ್ಲಿಯಲಿ
ನಿನ್ನದೇ ಛಾಯೆ ದೊರೆ
ಕಣ್ಬಿಟ್ಟು ಕಣ್ ತೆರೆದು
ಪ್ರಕೃತಿಯಲಿ ನಿನ್ನದೇ ಛಾಯೆ ದೊರೆ
ತೇವಗೊಂಡ ಸಾವಿತ್ರಿಯ ಕಂಬನಿಯ ಪ್ರತಿ ಹನಿಯಲಿ
ನೀನೇ ಮಾಯೆ ದೊರೆ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪೂರ