“ಧರ್ಮಕ್ಷೇತ್ರೆ – ಕುರುಕ್ಷೇತ್ರೆ” ವಿಷಯದ ಮೇಲೆ ಹಳ್ಳಿಯ ಸುಲಭ ಭಾಷೆಯಲ್ಲಿ ನಿರರ್ಗಳವಾಗಿ ಒಂದು ಘಂಟೆಗೂ ಅಧಿಕ ಸಮಯ ಉಪನ್ಯಾಸ ನೀಡುತ್ತಾ, ಕೌರವರ ವಂಶದ 101 ಜನರ ಹೆಸರು ಹಾಗೂ ಗೀತೊಪದೇಶದ ಪ್ರತಿ ಹದಿನೆಂಟು ಅಧ್ಯಾಯದ ಶ್ಲೋಕಗಳ ಸಂಖ್ಯೆ.ಯಾರ್ಯಾರು ಎಷ್ಟೆಷ್ಟು ಶ್ಲೋಕ ಹೇಳಿದ್ದಾರೆ ಎಂಬುದನ್ನು ನಿರರ್ಗಳವಾಗಿ ಹರಿವ ಝರಿಯಂತೆ ತಿಳಿಸಿ ಹೇಳಿದ ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರದ ದೇಶೀಯ ಪುರಾಣ ಪಂಡಿತ ಶ್ರೀ ಮಲ್ಲಿಕಾರ್ಜುನ ಮುದಕವಿಯವರು ಎಲ್ಲರ ಮನಸೆಳೆದರು.
ಕೋರೋನಾ ಲಾಕ್ ಡೌನ್ ನಿಮಿತ್ತ ಗೂಗಲ್ ಮೀಟನಲ್ಲಿ ಗೋಕಾಕ ಗೆಳೆಯರ ಬಳಗ ಮಂಗಳವಾರ ಸಂಜೆ 4 ಗಂಟೆಗೆ ಹಮ್ಮಿಕೊಂಡಿದ್ದ ಸೆಮಿನಾರ್ ಅಲ್ಲ ವೆಬಿನಾರ್ ವಿಶೇಷ ಉಪನ್ಯಾಸ ಮಾಲಿಕೆ 29 ರಲ್ಲಿ ಅವರು ಮಾತನಾಡಿದರು.
ಅವರ ವಿದ್ವತ್ತಿಗೆ ನೂರಾರು ಜನ ವಿದ್ವಾಂಸರ.ಅಧ್ಯಾಪಕರ.ಕವಿ ಸಾಹಿತಿ.ಶಿಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಅಸ್ಖಲಿತವಾದ ಅವರ ವಾಕ್ಝರಿಯನ್ನು ಕೇಳಲು ಇನ್ನೂ ಒಂದು ದಿನ ಮುಂದುವರೆಸಬೇಕು ಎಂದು ಸಂಚಾಲಕರನ್ನು ವಿನಂತಿ ಮಾಡಿಕೊಂಡರು.
ಬೆಳಗಾವಿಯ ಮಹಾನಗರ ಪತ್ರಿಕೆಯ ನಗರ ಯೋಜನಾ ಪ್ರಾಧಿಕಾರದಲ್ಲಿ ಉಪನಿರ್ದೇಶಕರಾದ ಬಸವರಾಜ ಹಿರೇಮಠ ಆಶಯ ನುಡಿ ಆಡಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಅನೇಕ ಜನ ವಿದ್ವಾಂಸರು.ವಿಮರ್ಶಕರು ಕವಿ.ಸಾಹಿತಿ.ಕಲಾವಿದರು ಉಪನ್ಯಾಸದ ನಂತರದ ಚರ್ಚೆಯಲ್ಲಿ ಭಾಗವಹಿಸಿದ್ದರು.
ನಿನ್ನೆಯ ಉಪನ್ಯಾಸಕರಿಗೆ. ಕವಯಿತ್ರಿ ಪ್ರೊ.ಶಿವಲೀಲ ಪಾಟೀಲ ಅಭಿನಂದನೆ ಪತ್ರ ವಿತರಿಸಿ ಅಭಿನಂದನೆಗಳ ನುಡಿಯಾಡಿದರು.
ಹೊನ್ನಾವರದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಶ್ರೀ ಸತೀಶ.ರಾಮು ನಾಯ್ಕ ಸ್ವಾಗತ ಮತ್ತು ಪರಿಚಯ ಮಾಡಿದರು.
ಗೆಳೆಯರ ಬಳಗದ ಸಂಸ್ಥಾಪಕ ಹಾಗೂ ವೆಬಿನಾರ್ ಸಂಚಾಲಕ ಪ್ರಾ.ಜಯಾನಂದ ಮಾದರ ನಿರೂಪಿಸಿ, ವಂದಿಸಿದರು.