- Advertisement -
ಕೊಡಗು ಜಿಲ್ಲೆಯ ಬಲ್ಲಮಾವಟಿ ಗ್ರಾಮದ ಸಾಹಿತಿ, ಪರಿಸರ ಪ್ರೇಮಿ ಎಂ. ಡಿ.ಅಯ್ಯಪ್ಪ ಅವರಿಗೆ ಬೆಂಗಳೂರಿನ ಚೈತನ್ಯ ರಾಷ್ಟ್ರೀಯ ಅಕಾಡೆಮಿಯು ರಾಜ್ಯ ಮಟ್ಟದ ಜನರಲ್ ಕಾರ್ಯಪ್ಪ ಪ್ರಶಸ್ತಿ ನೀಡಿ ಅವರ ಸಾಹಿತ್ಯ ಹಾಗೂ ಪರಿಸರ ಸೇವೆಯನ್ನು ಗುರ್ತಿಸಿದೆ.
ಬೆಂಗಳೂರಿನ ಕೆಂಪೇಗೌಡ ನಗರದ ಉದಯ ಭಾನು ಕಲಾ ಸಂಘದಲ್ಲಿ ಭಾನುವಾರದಂದು ಜನವರಿ 5 ರಂದು ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಲೇಖಕಿ ಹಾಗೂ ಸಮಾಜಸೇವಕಿ ಡಾ.ಸೌಜನ್ಯ ಶರತ್ ಚಂದ್ರ ಅವರು ಅಯ್ಯಪ್ಪ ಅವರಿಗೆ ಜನರಲ್ ಕಾರ್ಯಪ್ಪ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಮೈಸೂರಿನ ಹಿರಿಯ ಸಾಹಿತಿ ಡಾ.ಭೇರ್ಯ ರಾಮಕುಮಾರ್ ,
ಹಾಸನದ ಸಮಾಜಸೇವಕ ಎಂ. ಸಿ. ರಾಜು , ಸಂಸ್ಥೆಯ ಅಧ್ಯಕ್ಷರಾದ ಡಾ. ವಸುಧಾ ಶ್ರೀನಿವಾಸ್,ಅಧ್ಯಾತ್ಮಿಕ ಚಿಂತಕ ಮುದ್ದಪ್ಪ ಆರಾಧ್ಯ ಮೊದಲಾದವರು ವೇದಿಕೆಯಲ್ಲಿದ್ದರು.