ದಿನಕ್ಕೊಂದು ಸಾಮಾನ್ಯ ಜ್ಞಾನ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

ಕೊರೊನ ವನ್ನು ಆಧ್ಯಾತ್ಮಿಕ ದೃಷ್ಟಿಯಿಂದ ಅಳೆದಾಗಲೆ ಸತ್ಯದರ್ಶನ ಸಾಧ್ಯವಿದೆ. ಇದರ ಬಗ್ಗೆ ಮಾಧ್ಯಮಗಳು ಚರ್ಚೆ ನಡೆಸಬೇಕಿದೆ. ಸರ್ಕಾರವಾಗಲಿ,ವಿಜ್ಞಾನ ವಾಗಲಿ ಇದಕ್ಕೆ ಪರಿಹಾರ ನೀಡಲು ಅಸಾಧ್ಯ. ಕೊರೊನ ವಾಗಲಿ ಯಾವುದೇ ಸಾಂಕ್ರಾಮಿಕ ರೋಗ ಹೆಚ್ಚಾಗಿರೋದು ಅಜ್ಞಾನದ ವಿಜ್ಞಾನದಿಂದ. ಸರ್ಕಾರ ಏನು ಮಾಡಲು ಸಾಧ್ಯ? ಇದನ್ನು ಮಧ್ಯೆ ಇಟ್ಟು ದೇಶವನ್ನೇ ಬೋಳಿಸೋ ಪ್ರಯತ್ನ ಮಧ್ಯವರ್ತಿಗಳು ನಡೆಸಿದ್ದಾರೆ.

ಇದಕ್ಕೆ ರಾಜಕಾರಣಿಗಳ ಸಹಕಾರ ಬೇರೆ. ಎಚ್ಚರವಾಗದಿದ್ದರೆ ಜೀವ ಹೋದರೂ ಅರ್ಥ ಆಗಲ್ಲ. ಹಿಂದಿನ ಮಾರಣಾಂತಿಕ ರೋಗಗಳಿಂದ ಜೀವ ತಕ್ಷಣ ಹೋಗಿ ಮತ್ತೆ ಹುಟ್ಟುತ್ತಿತ್ತು. ಇಂದಿನ ರೋಗಕ್ಕೆ ಔಷಧವೇನೋ ಇದೆ, ಆದರೆ, ಔಷಧ ಪಡೆದ ಮೇಲೂ ಈ ಮಧ್ಯವರ್ತಿಗಳು ಹೆದರಿಸಿ, ಬೆದರಿಸಿ, ಕೂರಿಸಿ, ತಿನ್ನಿಸಿದರೆ ಮತ್ತೊಂದು ಹೊಸರೋಗ ಸೃಷ್ಟಿ ಆಗಬಹುದು.

ಯಾರ ಜೀವ ಯಾರದ್ದೋ ರಾಜಕೀಯದಲ್ಲಿದೆಯೆ? ಸಾಮಾನ್ಯರ ಜೀವನ ಅಸ್ತವ್ಯಸ್ತವಾಗಿ ಒಳಗಿರಲೂ ಆಗದೆ ಹೊರಬರಲೂ ಆಗದೆ ನಿಂತಿದೆ. ಆದರೆ, ಹೊರಗಿನ ರಾಜಕೀಯ ಚಟುವಟಿಕೆ, ಮನರಂಜನೆಯ ಕಾರ್ಯಕ್ರಮ, ಸಿನಿಮಾಮಂದಿರ, ಮದಿರೆ ಇನ್ನಿತರ ಅನಗತ್ಯವಾದ. ವೈಭವದ ಕಾರ್ಯಕ್ರಮಕ್ಕೆ ಸಕಲ ಸಹಕಾರವಿದೆ.

- Advertisement -

ಆದರೆ, ಜನಸಾಮಾನ್ಯರ ದಿನನಿತ್ಯದ ಕಾರ್ಯ ನಡೆಸಲೂ ಅಡೆತಡೆ, ಅಸಹಕಾರ ಇರುವುದನ್ನು ಕಣ್ಣಾರೆ ಕಂಡರೂ ಜನ ಮಾತ್ರ ಯಾವುದೋ ಒಂದು ಪಕ್ಷದ ಪರ ನಿಂತು ಪಕ್ಷಪಾತ ಮಾಡಿಕೊಂಡು ಸತ್ಯ ಬಿಟ್ಟು ನಡೆದರೆ ಕಷ್ಟ ನಷ್ಟಕ್ಕೆ ನಾವೇ ಕಾರಣವಾದಾಗ ಸರ್ಕಾರಗಳು ಏನೂ ಮಾಡಲಾಗದು.

ಪ್ರಜಾಪ್ರಭುತ್ವದಲ್ಲಿ‌ ಹೆಚ್ಚಾಗಿ ಕೊರೊನ ಹರಡಿರೋದು ಸಾಮಾನ್ಯ ಪ್ರಜೆಗಳಿಗೆ. ನಮ್ಮ ಸಹಕಾರ‌ ನಮಗೆ ತಿರುಗಿದೆ. ಮುಖ,ಮೂಗು ಮುಚ್ಚಿಕೊಂಡು ಮನೆಯೊಳಗಿದ್ದು ನಕಾರಾತ್ಮಕ ವಿಚಾರಗಳನ್ನು ಕೇಳುತ್ತಾ,ನೋಡುತ್ತಾ,ಸಹಕರಿಸುತ್ತಾ, ಆಹಾರ,ವಿಹಾರದಲ್ಲಿಯೇ ಸ್ವಚ್ಚತೆ ಇಲ್ಲವಾದರೆ ಕೊರೊನ ಮನೆಯೊಳಗೇ ಬರುತ್ತದೆ. ಗಾಳಿ ಸುದ್ದಿ ಇದ್ದ ಹಾಗೆ ಇದೂ ಗಾಳಿಯಲ್ಲಿಯೇ ಹರಡುತ್ತಿರುವುದಲ್ಲವೆ. ಗಾಳಿಯನ್ನು ತಡೆಯೋರು ಯಾರೂ ಇಲ್ಲ.

ಆದರೆ, ಗಾಳಿಸುದ್ದಿಯನ್ನು ತಡೆಯಬಹುದು. ಕೆಲವು ದಿನ ಮಾಧ್ಯಮಗಳು ಶಾಂತವಾಗಿ ಉತ್ತಮ ವಿಚಾರಗಳನ್ನು ಮನೆ ಮನೆಗೆ ತಲುಪಿಸಿ ಜನರಲ್ಲಿಜ್ಞಾನಶಕ್ತಿಯನ್ನು ಬೆಳೆಸಿದರೆ, ಕೊರೊನ ಆರ್ಭಟ ಕಡಿಮೆ ಆಗಿ ಮಾಯವಾಗಬಹುದು. ಇದು ಮಾಡೋದಿಲ್ಲವೆಂದರೆ ತಪ್ಪು ಎಲ್ಲಿದೆ? ಆತ್ಮಾವಲೋಕನ ಅಗತ್ಯವಿದೆ. ವಿಜ್ಞಾನ ಮಿತಿಮೀರಿದೆ. ಹಣದಿಂದ ಕೊರೊನ ಹೋಗಲ್ಲ.ಸತ್ಯಜ್ಞಾನದಿಂದ ಅರ್ಥ ಮಾಡಿಕೊಳ್ಳಲು ಸತ್ಯಕ್ಕೆ ಬೆಲೆಯಿಲ್ಲ.

ಎಲ್ಲಾ ಒಂದು ದಿನ ಹೋಗಬೇಕು.ಇರೋವಾಗಲೇ ರೋಗದ ಹೆಸರಲ್ಲಿ ಸಾಲ ಮಾಡಿ ಇಟ್ಟರೆ ಸಾಲ ತೀರಿಸಲು ಜೀವ‌ ಮತ್ತೆ ಬರಲೇಬೇಕು. ಇದ್ದಾಗಲೆ ಸತ್ಯ ತಿಳಿದು ನಡೆಯೋದು ಬುದ್ದಿವಂತರ ಲಕ್ಷಣ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!